Breaking News

ಮಂಡ್ಯ : ರಾತ್ರಿ ಮನೆಗೆ ಕಲ್ಲು ತೂರಾಟ ನಡೆಸಿ, ಮನೆಯೊಳಗಿದ್ದ ಯುವತಿಗೆ ಹಲ್ಲೆ ನಡಿಸಿ

Spread the love

ಮಂಡ್ಯ : ರಾತ್ರಿ ಮನೆಗೆ ಕಲ್ಲು ತೂರಾಟ ನಡೆಸಿ, ಮನೆಯೊಳಗಿದ್ದ ಯುವತಿಗೆ ಹಲ್ಲೆ ನಡಿಸಿ

ಮಾನಭಂಗಕ್ಕೆ ಯತ್ನಿಸಿದ 6ಮಂದಿ ಆರೋಪಿಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿರುವ ಘಟನೆ ತಾಲೂಕಿನ ಚುಜ್ಜಲಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಚುಜ್ಜಲಕ್ಯಾತನಹಳ್ಳಿ ನಿವಾಸಿಗಳಾದ ರವೀಶ ಬಿನ್ ಲೇಟ್ ನಿಂಗರಾಜು, ಮಹೇಶ ಬಿನ್ ಬಸವರಾಜು, ಸತೀಶ ಬಿನ್ ಮಲ್ಲೇಶ, ಸತೀಶ ಬಿನ್ ಕಾಳೇಗೌಡ, ಬಸವರಾಜು ಬಿನ್ ಲೇಟ್ ಸಣ್ಣಕಾಳಪ್ಪನ ದೇವರಾಜು, ಪವನ್ ಬಿನ್ ದೇವರಾಜು, ವಾಸು ಬಿನ್ ಕೆಂಪೇಗೌಡ ಎಂಬುವವರೇ ಯುವತಿಯ ಮೇಲೆ ಹಲ್ಲೆ ನಡೆಸಿ ಮಾನಭಂಗಕ್ಕೆ ಯತ್ನಿಸಿದ ಆರೋಪಿಗಳಾಗಿದ್ದಾರೆ.


ಘಟನೆ ವಿವರ ಮಂಡ್ಯ ಕಿಕ್ಕೇರಿ ಹೋಬಳಿಯ ಚುಜ್ಜಲಕ್ಯಾತನಹಳ್ಳಿ ಗ್ರಾಮದಲ್ಲಿ ಮೇ.05ರಂದು ಶುಕ್ರವಾರ ರಾತ್ರಿ ಸುಮಾರು 10ಗಂಟೆಯ ಸಮಯದಲ್ಲಿ ನಮ್ಮ ಮನೆಯ ಬಳಿ ಬಂದಿದ್ದ.

ನಮ್ಮ ಗ್ರಾಮ ಚುಜ್ಜಲಕ್ಯಾತನಹಳ್ಳಿ ನಿವಾಸಿಗಳಾದ ರವೀಶ ಬಿನ್ ಲೇಟ್ ನಿಂಗರಾಜು, ಮಹೇಶ ಬಿನ್ ಬಸವರಾಜು, ಸತೀಶ ಬಿನ್ ಮಲ್ಲೇಶ, ಸತೀಶ ಬಿನ್ ಕಾಳೇಗೌಡ, ಬಸವರಾಜು ಬಿನ್ ಲೇಟ್ ಸಣ್ಣಕಾಳಪ್ಪನ ದೇವರಾಜು, ಪವನ್ ಬಿನ್ ದೇವರಾಜು, ವಾಸು ಬಿನ್ ಕೆಂಪೇಗೌಡ ಹಾಗೂ ಇತರರು ಬೈಕುಗಳಲ್ಲಿ(ಬೈಕ್ ಕೆ.ಎ.13-ವಿ-7133), (ಕೆ.ಎ.02-ಇಯು-9052), ಹಾಗೂ ಕೆ.ಎ-09-ಎಚ್.ಕೆ.2928) ಬಂದು ಆಶಾ ಕುಟುಂಬದವರು ವಾಸವಿದ್ದ

ಮನೆಯ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿ ಹಾಗೂ ಮನೆಗೆ ಹೊಂದಿಕೊಂಡಂತೆ ಅವರ ಮಹಾಲಕ್ಷಿ ದೇವಸ್ಥಾನದಲ್ಲಿದ್ದ ದೇವರ ಶೃತಿನಾದ(ಸ್ವಯಂಚಾಲಿತ ಗಂಟೆ) ಯಂತ್ರವನ್ನು ಧ್ವಂಸಗೊಳಿಸಿದ್ದಾರೆ.

ಇದರಿಂದ ಮನೆಯ ಮೇಲ್ಚಾವಣಿ ಶೀಟುಗಳು ಪುಡಿಪುಡಿಯಾಗಿವೆ.

ದೇವರ ಬಾಗಿಲು ಮತ್ತು ದೇವಾಲಯ ಜಗುಲಿಯನ್ನು ಹಾನಿ ಮಾಡಿದ್ದಾರೆ. ನಂತರ ಮನೆಯೊಳಗಿದ್ದ ಯುವತಿ ಆಶಾ ಮೇಲೆ ಮೇಲೆ ಹಲ್ಲೆ ನಡೆಸಿದ್ದಾರೆ.

ಅಲ್ಲದೆ ನನ್ನ ಬಟ್ಟೆಯನ್ನು ಹರಿದು ಹಾಕಿ ಮಾನಭಂಗಕ್ಕೆ ಯತ್ನಿಸಿದ್ದಾರೆ.

ಇವರ ರಕ್ಷಣೆಗೆ ಬಂದ ಸಹೋದರ ಪ್ರವೀಣ್‌ಕುಮಾರ್(ಪೃಥ್ವಿ), ತಂದೆ ಪ್ರಕಾಶ್, ತಾಯಿ ಮೀನಾಕ್ಷಿ ಅವರುಗಳ ಮೇಲೂ ಸಹ ಆರೋಪಿಗಳು ಹಲ್ಲೆ ನಡೆಸಿ ಪ್ರಾಣ ಬೆದರಿಕೆ ಹಾಕಿದ್ದಾರೆ.

ಈ ವೇಳೆ ಮಂದಗೆರೆಯಿ0ದ ತಮ್ಮ ಗ್ರಾಮಕ್ಕೆ ಹೋಗುತ್ತಿದ್ದ ಡಿಂಕಾ ಗ್ರಾಮಕ್ಕೆ ಹೋಗುತ್ತಿದ್ದ ದಿಲ್ಲೇಶ್ ಮತ್ತು ಶೆಟ್ಟಿಹಳ್ಳಿ ಧರ್ಮ ಅವರು ನನ್ನನ್ನು ಮಾನಭಂಗವಾಗದತೆ ತಡೆದು ರಕ್ಷಣೆ ಮಾಡಿದ್ದಾರೆ ಎಂದು ನೊಂದ ಯುವತಿ ಆಶಾ ಅವರು ಕಿಕ್ಕೇರಿ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

ದೂರು ಸ್ವೀಕಾರ ಮಾಡಿರುವ ಸಬ್ ಇನ್ಸ್ಪೆಕ್ಟರ್ ನವೀನ್ ಅವರು ಆರೋಪಿಗಳ ವಿರುದ್ದ ಐಪಿಸಿ ಸೆಕ್ಷನ್ 143,354(ಬಿ),504, 427, 506, 149 ಪ್ರಕಾರ ದೂರು ದಾಖಲಿಸಿ ಆರೋಪಿಗಳಾಗಿ ತೀವ್ರ ಹುಡುಕಾಟ ಕೈಗೊಂಡಿದ್ದಾರೆ.

ಚಿತ್ರಶೀರ್ಷಿಕೆ:07.ಕೆ.ಆರ್.ಪಿ-02: ಕಿಕ್ಕೇರಿಯ ಚುಜ್ಜಲಕ್ಯಾತನಹಳ್ಳಿ ಗ್ರಾಮದಲ್ಲಿ ಯುವಕರು ಮನೆಯ ಮೇಲೆ ಕಲ್ಲು ತೂರಾಟ ನಡೆಸಿರುವುದು ಹಾಗೂ ದೇವಸ್ಥಾನದಲ್ಲಿದ್ದ ಸ್ವಯಂಚಾಲಿತ ಗಂಟೆಯನ್ನು ನಾಶಮಾಡಿರುವುದು. ಹಾಗೂ ಆರೋಪಿಗಳ ಪೋಟೋಗಳು.


Spread the love

About Laxminews 24x7

Check Also

ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೆ ಸೈಬರ್ ತರಬೇತಿ

Spread the loveಬೆಂಗಳೂರು : ಸಿಐಡಿ ಕರ್ನಾಟಕ, ಇನ್ಫೋಸಿಸ್ ಫೌಂಡೇಶನ್ ಆ್ಯಂಡ್ ಡೇಟಾ ಸೆಕ್ಯುರಿಟಿ ಕೌನ್ಸಿಲ್ ಆಫ್ ಇಂಡಿಯಾ (ಡಿಎಸ್‌ಸಿಐ) ದಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ