Breaking News

ನನ್ನ ವಿಡಿಯೋ ಬಿಟ್ಟವ್ರೆ, ಮಾಜಿ ಸಿಎಂ ಪುತ್ರನನ್ನು ಅರೆಸ್ಟ್ ಮಾಡಿ : ಕೆ ಎಸ್‌ ಈಶ್ವರಪ್ಪ ಹೇಳಿದ್ದೇನು?

Spread the love

ಶಿವಮೊಗ್ಗ, ಮೇ 08: ಕೆ ಎಸ್‌ ಈಶ್ವರಪ್ಪ ಅವರ ಪುತ್ರನಿಗೆ ಹಾವೇರಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಟಿಕೆಟ್‌ ಕೈ ತಪ್ಪಿದ ಹಿನ್ನೆಲೆ, ಶಿವಮೊಗ್ಗ ಕ್ಷೇತ್ರದಿಂದ ಈಶ್ವರಪ್ಪ ಪಕ್ಷೇತರವಾಗಿ ಸರ್ಧೆ ಮಾಡಿದ್ದು, ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಹೌದು, ಈ ಹಿಂದೆ ಬಿಜೆಪಿಯಲ್ಲಿದ್ದ ಮಾಜಿ ಉಪಮುಖ್ಯಮಂತ್ರಿ ಕೆ ಎಸ್‌ ಈಶ್ವರಪ್ಪ ಅಟವರು 2019 ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿ ಶಿವಮೊಗ್ಗ ಅಭ್ಯರ್ಥಿಯಾಗಿದ್ದ ಬಿ ವೈ ರಾಘವೇಂದ್ರ ಅವರ ಪರ ಪ್ರಚಾರ ಮಾಡಿದ್ದ ವಿಡಿಯೋವೊಂದು ಸದ್ಯ ಸಾಕಷ್ಟು ವೈರಲ್‌ ಆಗುತ್ತಿದ್ದು, ಈ ವಿಡಿಯೋವನ್ನ ಬಿ ವೈ ರಾಘವೇಂದ್ರ ಅವರೇ ಹಂಚಿದ್ದಾರೆ ಎಂದು ಮಾಜಿ ಡಿಸಿಎಂ ಕೆ ಎಸ್‌ ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಮಾಧ್ಯಮಗಳ ಜೊತೆಗೆ ಕೆ ಎಸ್‌ ಈಶ್ವರಪ್ಪ ಅವರು ಮಾತನಾಡಿ, ಸೋಲುವ ಭೀತಿಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ವಾಮಮಾರ್ಗಕ್ಕೆ ಇಳಿದಿದ್ದಾರೆ. ನಲವತ್ತು ವರ್ಷಗಳ ರಾಜಕೀಯದಲ್ಲಿ ಇಂತಹ ನೀಚ ರಾಜಕಾರಣವನ್ನು ನೋಡಲಿಲ್ಲ. ಮಾನ್ಯ ರಾಘವೇಂದ್ರ ಅವರು ಚುನಾವಣೆಯಲ್ಲಿ ಪರಾಭವಗೊಳ್ಳುವ ಹೆದರಿಕೆಯಿಂದ ಅನೇಕ ಕ್ರೈಂಗಳನ್ನು ಮಾಡುತ್ತಿದ್ದಾರೆ ಎಂದು ಕೆ ಎಸ್‌ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದಾರೆ.

ಚುನಾವಣಾ ಸೋಲಿನ ಭೀತಿಯಲ್ಲಿ ರಾಜಕೀಯ ಷಡ್ಯಂತ್ರ ಮಾಡಲು ಹೊರಟಿದ್ದಾರೆ. ಈಶ್ವರಪ್ಪ ಗೆಲ್ಲುತ್ತಾರೆ ಎನ್ನುವ ಲೆಕ್ಕಾಚಾರ ಅವರಿಗೆ ಬಂದಿದೆ, ಹಾಗಾಗಿ ನನ್ನ ಹಳೆಯ ವಿಡಿಯೋವನ್ನು ಮತ್ತು ಈಶ್ವರಪ್ಪ ಬೆಂಬಲವಿದೆ ಎನ್ನುವ ಸುದ್ದಿಯನ್ನು ಹರಡಿಸುತ್ತಿದ್ದಾರೆ. ನನ್ನ ಪರವಾಗಿ ಈಶ್ವರಪ್ಪ ಪ್ರಚಾರ ಮಾಡುತ್ತಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಈಶ್ವರಪ್ಪ ಆರೋಪಿಸಿದ್ದಾರೆ.

ನನ್ನ ಪರವಾಗಿ ಬಿಜೆಪಿಗೆ ವೋಟ್ ಕೊಡಿ, ಈಶ್ವರಪ್ಪ’, ‘ನನಗೆ ನನ್ನ ತಪ್ಪಿನ ಅರಿವಾಗಿದೆ, ಕಾಂಗ್ರೆಸ್ಸಿಗೆ ಲಾಭವಾಗುವುದು ಬೇಡ ಈ ರೀತಿಯ ಶೀರ್ಷಿಕೆಯಲ್ಲಿ ಸ್ಥಳೀಯ ಪತ್ರಿಕೆಗಳಲ್ಲಿ ಹಳೆಯ ಫೋಟೋಗಳನ್ನು ಬಳಸಿ ಸುದ್ದಿಯನ್ನು ಹಬ್ಬಿಸಲಾಗಿದೆ ಎಂದು ಈಶ್ವರಪ್ಪ ಕಿಡಿಕಾರಿದ್ದಾರೆ.

ಚುನಾವಣೆ ಸೋಲಿನ ಭೀತಿಯಿಂದ ಬಂಢತನದ, ನಿರ್ಲಜ್ಜ ರಾಜಕೀಯ ಯಡಿಯೂರಪ್ಪನವರಿಂದ ನಿರೀಕ್ಷಿಸಿರಲಿಲ್ಲ. ಇಷ್ಟೇ ಅಲ್ಲ, ನನ್ನ ಹಳೆಯ ವಿಡಿಯೋವೊಂದು ಎರಡು ದಿನಗಳಿಂದ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ.

ನಾನು ಹಿಂದೆ ರಾಘವೇಂದ್ರ ಪರವಾಗಿ ಮತಯಾಚಿಸುವ ವಿಡಿಯೋವನ್ನು ಈಗಿನ ವಿಡಿಯೋ ಎನ್ನುವ ರೀತಿಯಲ್ಲಿ ಬಿಜೆಪಿಯವರು ಬಿಂಬಿಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದ್ದಾರೆ.

ಇನ್ನೂ ಈ ಕುರಿತು ಜಿಲ್ಲಾಧಿಕಾರಿಗಳು, ಕೇಂದ್ರ ಚುನಾವಣಾ ಆಯೋಗ ಕ್ಕೆ, ಪೊಲೀಸ್ ಅಧಿಕಾರಿಗಳಿಗೆ ದೂರನ್ನು ನೀಡುತ್ತೇನೆ. ಸೂಕ್ತವಾದ ತನಿಖೆಗಳನ್ನು ನಡೆಸಿ, ರಾಘವೇಂದ್ರ ಅವರನ್ನು ಬಂಧಿಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಕೆ ಎಸ್‌ ಈಶ್ವರಪ್ಪ ಅವರು ಹೇಳಿದರು.


Spread the love

About Laxminews 24x7

Check Also

ಬೀದರ್-ಹುಮನಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತಲ್ಲಿ ನಾಲ್ವರು ಮೃತಪಟ್ಟಿದ್ದಾರೆ.

Spread the loveಬೀದರ್: ಕಾರು ಹಾಗೂ ಗೂಡ್ಸ್ ವಾಹನದ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಮೃತಪಟ್ಟ ದಾರುಣ ಘಟನೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ