ಉತ್ತರಪ್ರದೇಶ: ಇಲ್ಲಿನ ಅಮೇಥಿಯ ಗೌರಿಗಂಜ್ ಪ್ರದೇಶದಲ್ಲಿದ್ದ ಕಾಂಗ್ರೆಸ್ ಕಚೇರಿ ಎದುರು ನಿಲ್ಲಿಸಲಾಗಿದ್ದ ‘ಕೈ’ ಕಾರ್ಯಕರ್ತರ ಕಾರುಗಳನ್ನು ಯಾರೋ ಕಿಡಿಗೇಡಿಗಳು ಧ್ವಂಸಗೊಳಿಸಿದ್ದು, ಈ ಹಿನ್ನಲೆ ಬಿಜೆಪಿ ವಿರುದ್ಧ ನೇರ ಆರೋಪ ಎಸಗಿದ ಕಾಂಗ್ರೆಸ್, ತಪ್ಪಿತಸ್ಥರು ಬೇರಾರು ಅಲ್ಲ, ಬಿಜೆಪಿ ಗೂಂಡಾಗಳು ಎಂದು ಆಕ್ರೋಶ ಹೊರಹಾಕಿದೆ.
ಒಂದಲ್ಲ, ಎರಡಲ್ಲ ಹಲವು ಕಾರುಗಳನ್ನು ಜಖಂಗೊಳಿಸಿರುವ ದುಷ್ಕರ್ಮಿಗಳು ಬಿಜೆಪಿಯವರೇ ಎಂದು ದೂರಿದ ಕಾಂಗ್ರೆಸ್, ಈ ದುಷ್ಕೃತ್ಯಕ್ಕೆ ಅವರ ಕಾರ್ಯಕರ್ತರೇ ಕಾರಣ ಎಂದು ತಿಳಿಸಿದೆ.ಇದಕ್ಕೆಲ್ಲಾ ಮೂಲ ಕಾರಣ ಸೃತಿ ಇರಾನಿ, ಯಾಕಂದ್ರೆ, ಇಲ್ಲಿನ ಲೋಕಸಭಾ ಕ್ಷೇತ್ರದಿಂದಲೇ ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುತ್ತಿರುವ ಅವರಿಗೆ ಸೋಲು ಖಚಿತ ಎಂಬುದು ತಿಳಿಯುತ್ತಿದ್ದಂತೆ, ಅವರ ಪಕ್ಷದ ಕಾರ್ಯಕರ್ತರು ಇಂಥ ಕಿಡಿಗೇಡಿ ಕೆಲಸಕ್ಕೆ ಕೈಹಾಕಿದ್ದಾರೆ ಎಂದು ಆರೋಪಿಸಿದೆ
Laxmi News 24×7