ಹುಬ್ಬಳ್ಳಿ : ಮುಸ್ಲಿಂ ಮೀಸಲಾತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಅವರು ನಿಸ್ಸೀಮರು. ಅವರು ಬಂದ ನಂತರ ಪತ್ರ ಬರೆದಿದ್ದಾರೆ. ಸಂವಿಧಾನದಲ್ಲಿ ಎಲ್ಲಿಯೂ ಧರ್ಮಧರಿತ ಮೀಸಲಾತಿಯಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಳ್ಳು ಹೇಳಿ SC ST OBC ಮೀಸಲಾತಿ ಕಬಳಿಸಿ ಅವರ ವೋಟ್ ಬ್ಯಾಂಕ್ ಗೆ ಕೊಡತೀದಾರೆ. ಇದು ಅತ್ಯಂತ ಅಪಾಯಕಾರಿ. ದೇಶದ ಸಂವಿಧಾನದಲ್ಲಿ ಎಲ್ಲು ಧರ್ಮಾಧಾರಿತ ಮೀಸಲಾತಿಇಲ್ಲ. ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ. ಸಿದ್ದರಾಮಯ್ಯ ಪ್ರತಿ ವಿಷಯದಲ್ಲಿ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ನಮ್ಮ ಹಿಂದಿನ ಸರ್ಕಾರ ಶೇ.2 ಒಕ್ಕಲಿಗ, ಶೇ.2 ಲಿಂಗಾಯತರಿಗೆ ಮೀಸಲಾತಿ ಕೊಟ್ಟಿರುವುದನ್ನು ಇವ್ರೇ ವಿರೋಧಿಸಿದ್ದರು. ಇದನ್ನು ಈಗ ಸಿದ್ದರಾಮಯ್ಯ ಸಾಧಿಸಿದ್ದಾರೆ. ರಾಷ್ಟೀಯ ಹಿಂದುಳಿದ ಆಯೋಗದ ನೋಟಿಸ್ ಗೆ ಸಿದ್ದರಾಮಯ್ಯ ಉತ್ತರ ಕೊಡಲಿ. ಖುದ್ದಾಗಿ ಹಾಜರಾಗಲು ಹೇಳಿದ್ದಾರೆ.
ರಾಜಕಾರಣದಲ್ಲಿ ನನಗೆ ಯಾರೂ ವೈರಿಗಳಿಲ್ಲ, ವಿರೋಧಿಗಳಿದ್ದಾರೆ. ನಾನು ವಿನಯ ಕುಲಕರ್ಣಿಯನ್ನು ವೈರಿ ಅಂತಾ ಭಾವಿಸಿಲ್ಲ. ಅವರು ಏನ ಅಂತಾ ಭಾವಿಸಿದ್ದಾರೆ ಎಂದು ಅವರ ಭಾಷಣದಲ್ಲಿ ಗೊತ್ತಾಗತ್ತೆ ಎಂದರು.
Laxmi News 24×7