Breaking News

ಸೌಜನ್ಯಾ ಅತ್ಯಾಚಾರ – ಕೊಲೆ ಪ್ರಕರಣ; ಪೋಸ್ಟ್‌ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ

Spread the love

ಸೌಜನ್ಯಾ ಅತ್ಯಾಚಾರ – ಕೊಲೆ ಪ್ರಕರಣ; ಪೋಸ್ಟ್‌ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ

ರ್ಮಸ್ಥಳದ ಸೌಜನ್ಯ ಹತ್ಯಾ ಪ್ರಕರಣದ ಪ್ರಮುಖ ಸಾಕ್ಷಿಗಳಲ್ಲಿ ಒಬ್ಬರು ದಿಡೀರ್ ಆಗಿ ಮರಣ ಹೊಂದಿದ್ದಾರೆ. ಧರ್ಮಸ್ಥಳದ ಸೌಜನ್ಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದಲ್ಲಿ, ಈ ಇಡೀ ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ ಎನ್ನಲಾದ ಬಹು ಮುಖ್ಯ ಸಾಕ್ಷಿಗಳಲ್ಲಿ ಒಂದಾದ ಡಾ.ಅದಂ ನಿಧನರಾಗಿದ್ದಾರೆಡಾಕ್ಟರ್ ಆದಮ್ ಅವರು ಇದೀಗ ಮರಣ ಹೊಂದಿದ್ದಾರೆ. ಡಾಕ್ಟರ್ ಆದಮ್ ಅವರಿಗೆ ಬ್ರೈನ್ ಹೆವರೇಜ್ ಆಗಿದ್ದು ಅವರು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನ ಹೊಂದಿದ್ದಾರೆ.

ಸೌಜನ್ಯಾ ಅತ್ಯಾಚಾರ - ಕೊಲೆ ಪ್ರಕರಣ; ಪೋಸ್ಟ್‌ ಮಾರ್ಟಂ ಮಾಡಿದ್ದ ವೈದ್ಯ ಡಾ. ಆದಂ ವಿಧಿವಶ

ಡಾಕ್ಟರ್ ಅದಮ್ ಉಸ್ಮಾನ್ ರು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಬಹುಕಾಲ ಮುಖ್ಯ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇತ್ತೀಚೆಗೆ ಅವರು ನಿವೃತ್ತರಾಗಿದ್ದರು. ಡಾಕ್ಟರ್ ಆದಂ ಮತ್ತು ಡಾಕ್ಟರ್ ರಶ್ಮಿ ಅವರ ಮೇಲೆ ಒಟ್ಟಾರೆ ಪೋಸ್ಟ್ ಮಾರ್ಟಂ ರಿಪೋರ್ಟ್ ಅನ್ನು ತಿರುಚಿದ ಆರೋಪ ಕೇಳಿ ಬಂದಿತ್ತು.

ಸರಿಯಾಗಿ ಬೆಳಕಿಲ್ಲದೆ ಕತ್ತಲಲ್ಲಿ ಪೋಸ್ಟ್ ಮಾರ್ಟಂ ಮಾಡಿದ್ದಾರೆ ಮತ್ತು ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ನೆರವಾಗಿದ್ದಾರೆ ಎನ್ನುವ ಗುರುತರವಾದ ಆರೋಪ ಅವರ ಮೇಲಿತ್ತು. ಆರೋಪಕ್ಕೆ ತಕ್ಕಂತೆ ಕೋರ್ಟು ಕೂಡ ಯಾವುದೇ ರೀತಿಯಲ್ಲಿ ಪೋಸ್ಟ್ ಮಾರ್ಟಂ ಸ್ಯಾಂಪಲ್ಸ್ ಅನ್ನು ವೈದ್ಯಕೀಯ ತಂಡ ಸಂಗ್ರಹಿಸಿಲ್ಲ ಎಂದು ದೂರಿತ್ತು.


Spread the love

About Laxminews 24x7

Check Also

ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್…

Spread the love ಗಣೇಶ ವಿಸರ್ಜನೆ ಮತ್ತು ಈದ್ ಮಿಲಾದ್’ನಲ್ಲಿ ಶಾಂತಿ ಕದಡಿದ್ರೇ ಹುಷಾರ್… ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ