Breaking News

ಇನ್ಮುಂದೆ ಮಹಿಳೆಯರ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ರೆ ಹುಷಾರ್! ಕೂಡಲೇ ಬೀಳುತ್ತೆ ಸುಮೋಟೋ ಕೇಸ್!

Spread the love

ಬೆಂಗಳೂರು: ಇನ್​ಸ್ಟಾಗ್ರಾಮ್​, ಫೇಸ್ ಬುಕ್, ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ (Social Media) ಮಹಿಳೆಯರ ಬಗ್ಗೆ ಲಘುವಾಗಿ ಕಮೆಂಟ್​ ಮಾಡಿದ್ರೆ, ಮಹಿಳೆಯರ ಗೌರವಕ್ಕೆ ಧಕ್ಕೆ ಬರುವಂತೆ ಮಾಡಿದರೆ ಭಾರೀ ಬೆಲೆ ತೆರಬೇಕಗುತ್ತೆ. ಬೇಕಾಬಿಟ್ಟಿ ಕಮೆಂಟ್ ಮಾಡಿದ್ರೆ, ನೊಂದ ಮಹಿಳೆಯರು ಸುಮ್ಮನಿದ್ರೂ ಮಹಿಳಾ ಆಯೋಗ ಮಾತ್ರ ಸುಮ್ಮನೆ ಬಿಡಲ್ಲ.

ಇತ್ತಿಚ್ಚಿನ ದಿನಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ನಿರಂತರವಾಗಿ ಏರಿಕೆಯಾಗುತ್ತಿವೆ. ಮಹಿಳೆಯರ ಪೋಟೋ ಡೀಪ್ ಪೇಕ್ ನಿಂದ ಹಿಡಿದು ಅಸಭ್ಯ ಕಮೆಂಟ್ ಹಾಕಿ ಗೌರವಕ್ಕೆ ಕುತ್ತು ತಂದು ಅವಮಾನ ಮಾಡ್ತಿದ್ದಾರೆ. ಹೀಗಾಗಿ ಇತಂಹವರ ವಿರುದ್ಧ ಮಹಿಳಾ ಆಯೋಗ ಈಗ ಪುಲ್ ಅಲರ್ಟ್ ಆಗಿದೆ

ಮಹಿಳೆಯರ ಬಗ್ಗೆ ಬಾಯಿಗೆ ಬಂದ್ ಹಾಗೆ ಮಾತನಾಡಿ ಪಾರಾಗಬಹುದು ಅಂದುಕೊಂಡಿದ್ರೆ ಇನ್ಮುಂದೆ ಬಿ ಕೇರ್ ಫುಲ್ ಅಂತಿದೆ ರಾಜ್ಯ ಮಹಿಳಾ ಆಯೋಗ. ಇನ್ಮುಂದೆ ಸಾಮಾಜಿಕ ವೇದಿಕೆ ಅಥವಾ ಜಾಲತಾಣಗಳಲ್ಲಿ ಮಹಿಳೆಯರ ಗೌರವ ಘನತೆಗೆ ಧಕ್ಕೆ ತಂದ್ರೆ ಸುಮೋಟೋ ಕೇಸ್ ಹಾಕಲಿದ್ದಾರೆ.

ತಕ್ಷಣವೇ ನೋಟಿಸ್

ರಾಜಕಾರಣಿಯಾಗಲಿ, ಜನಸಾಮಾನ್ಯರಾಗಲಿ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡೋ ಹಾಗಿಲ್ಲ. ಹಾಗೇನಾದ್ರೂ ಇನ್ಮುಂದೆ ಮಾತಾನಾಡಿದ್ರೆ ಸುಮೋಟೋ ಕೇಸ್ ಬೀಳುತ್ತೆ. ನೊಂದ ಮಹಿಳೆಯರೇ ಸುಮ್ಮನಿದ್ರೂ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲು ಮಹಿಳಾ ಆಯೋಗ ಮುಂದಾಗಿದೆ. ಮಹಿಳೆಯರು ದೂರು ನೀಡದೆ ಇದ್ರೂ , ಆಯೋಗದಿಂದಲೇ ಸ್ವಯಂ ಪ್ರೇರಿತ ದೂರು ದಾಖಲು ಮಾಡಿಕೊಳ್ಳಲಿದೆ. ಮಹಿಳೆಯರಿಗೆ ಗೌರವ ನೀಡದವರ ವಿರುದ್ಧ ಸಮರ ಸಾರಿರುವ ಮಹಿಳಾ ಆಯೋಗ, ಹೇಳಿಕೆಗಳು ನೀಡಿದವರಿಗೆ ತಕ್ಷಣವೇ ನೋಟಿಸ್ ನೀಡಲು ಮುಂದಾಗಲಿದೆ ಎಂದು ಮಹಿಳಾ ಆಯೋಗ ಅಧ್ಯಕ್ಷೆ ನಾಗಲಕ್ಷ್ಮೀ ಚೌಧರಿ ಹೇಳಿದ್ದಾರೆ.

ಮಾಜಿ ಸಿಎಂ ಎಚ್​ಡಿಕೆಗೆ ನೋಟಿಸ್​

ಇತ್ತೀಚೆಗೆ ಮಹಿಳೆಯರ ಬಗ್ಗೆ ಹಗುರವಾಗಿ ಮಾತನಾಡಿದ ಮಾಜಿ ಸಿಎಂ HD ಕುಮಾರಸ್ವಾಮಿ, ಸಂಜಯ್ ಪಾಟೀಲ್‌ಗೆ ಮಹಿಳಾ ಆಯೋಗ ನೋಟಿಸ್​ ನೀಡಿದೆ. ವಿಚಾರಣೆಗೆ ಆಯೋಗಕ್ಕೆ ಬರುವಂತೆ ಸೂಚನೆ ಕೊಟ್ಟಿದೆ. ಗ್ಯಾರೆಂಟಿಗಳಿಂದ ಹಳ್ಳಿ ಹಣ್ಮಕ್ಕಳು ದಾರಿ ತಪ್ಪಿದ್ದಾರೆ ಮಾಜಿ ಸಿಎಂ ಕುಮಾರಸ್ವಾಮಿ ಹೇಳಿಕೆ ನೀಡಿದ್ರು. ತುಮಕೂರು ಜಿಲ್ಲೆಯ ತುರವೇಕರೆಯಲ್ಲಿ ಪ್ರಚಾರದ ವೇಳೆ ಹೇಳಿಕೆ ನೀಡಿದ್ರು.ಇದಕ್ಕೆ ವಿರೋಧ ಕೇಳಿ ಬಂದಿತ್ತು. ಇದು ಮಹಿಳೆಯರ ಘನತೆಗೆ ಚಾರಿತ್ರ್ಯಕ್ಕೆ ಧಕ್ಕೆ ತಂದಿದ್ದಾರೆ ಎಂ ಮಹಿಳಾ ಆಯೋಗ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿದೆ. ಈ ವಿಚಾರವಾಗಿ ಕುಮಾರಸ್ವಾಮಿಗೆ ನೋಟಿಸ್ ನೀಡಿದೆ.

ಸಂಜಯ್ ಪಾಟೀಲ್​ಗೂ ಚಾಟಿ

ಇನ್ನು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಸಂಜಯ್ ಪಾಟೀಲ್ ವ್ಯಂಗ್ಯ ಮಾಡಿದ್ದರು. ಸುಖ ನಿದ್ರೆಗೆ ಅಕ್ಕ ಇವತ್ತು ಒನ್ ಪೆಗ್‌ ಎಕ್ಸ್‌ಟ್ರಾ ಹಾಕಬೇಕಾಗುತ್ತೆ ಅಂತಾ ಸಂಜಯ್ ಪಾಟೀಲ್ ಅವಮಾನಕಾರಿ ಹೇಳಿಕೆ ನೀಡಿದ್ರು. ಈ ಕುರಿತು ಸಂಜಯ್ ಪಾಟೀಲ್ ವಿರುದ್ಧ ಸ್ವಯಂ ಪ್ರೇರಿತ ಕೇಸ್ ದಾಖಲು ಮಾಡಿಕೊಂಡಿರುವ ರಾಜ್ಯ ಮಹಿಳಾ ಆಯೋಗ ಸಂಜಯ್ ಪಾಟೀಲ್ ಗೂ ನೋಟಿಸ್ ನೀಡಿದೆ. ಸಚಿವೆ ಹಾಗೂ ರಾಜಕೀಯದಲ್ಲಿ ಉನ್ನತ್ತ ಸ್ಥಾನದಲ್ಲಿರುವ ಲಕ್ಷ್ಮಿ ಹೆಬ್ಬಾಳ್ಕರ್ ಘನತೆ ಕುಂದಿಸುವ ರೀತಿಯಲ್ಲಿ ಸಂಜಯ್ ಪಾಟೀಲ್ ಹೇಳಿಕೆ ನೀಡಿದ್ದಾರೆ ಎಂದು ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡು ನೋಟಿಸ್ ಜಾರಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯರಿಗೆ ಕಿರಿಕಿರಿ ನೀಡುವ ಕಿಡಿಗೇಡಿಗಳಿಗೆ ಶಾಕ್ ನೀಡಲು ಮಹಿಳಾ ಆಯೋಗ ಮುಂದಾಗಿದೆ. ಮಹಿಳೆಯರ ಘನತೆಗೆ ಗೌರವಕ್ಕೆ ಧಕ್ಕೆ ತರುವ ಪ್ರಕರಣದಲ್ಲಿ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲು ಆಯೋಗ ಮುಂದಾಗಿದ್ದು, ಕಿಡಿಗೇಡಿಗಳಿಗೆ ಬಿಸಿಮುಟ್ಟಿಸಲಿದೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ