ಹೊಸದಿಲ್ಲಿ: ಲೋಕಸಭೆ ಚುನಾವಣೆಯ ಅನಂತರ ಏರ್‌ಟೆಲ್, ಜಿಯೋ ಮತ್ತು ವಿಐ(ವೋಡೋಫೋನ್ ಐಡಿಯಾ) ಟ್ಯಾರಿಫ್ ಪ್ಲ್ರಾನ್‌ಗಳ ದರವನ್ನು ಶೇ.15ರಿಂದ 17ರಷ್ಟು ಹೆಚ್ಚಳವಾಗಲಿವೆ ಎಂದು ದೂರಸಂಪರ್ಕ ಕ್ಷೇತ್ರದ ವರದಿಯೊಂದು ಹೇಳಿದೆ.
ಜೂ.4ರಂದು ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.ಚುನಾವಣೆ ಬಳಿಕ ಶೀಘ್ರದಲ್ಲೇ ದೂರಸಂಪರ್ಕ ಕಂಪೆನಿಗಳು ದರ ಹೆಚ್ಚಳ ಮಾಡಲಿವೆ. ಟ್ಯಾರಿಫ್ ಪ್ಲ್ರಾನ್‌ಗಳ ದರದಲ್ಲಿ ಶೇ.15 ರಿಂದ 17ರಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಭಾರ್ತಿ ಏರ್‌ಟೆಲ್ ಅತೀ ದೊಡ್ಡ ಫಲಾನುಭವಿಯಾಗಲಿದೆ’ ಎಂದು ಆಂಟಿಕ್ಯು ಸ್ಟಾಕ್ ಬ್ರೋಕಿಂಗ್ ವರದಿ ತಿಳಿಸಿದೆ.