Breaking News

ಸಿಡಿಲಿಗೆ ಎಮ್ಮೆ ಸಾವು

Spread the love

ಫಜಲಪುರ: ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಗುರುವಾರ ಸಂಜೆ ಮಳೆ ಸುರಿಯಿತು. ಬಿಸಿಲಿನ ಧಗೆಯಿಂದ ಕಂಗಲಾಗಿದ್ದ ಜನರಿಗೆ ಮಳೆ ತಂಪು ನೀಡಿತು.

ಸಿಡಿಲಿಗೆ ಆನೂರು ಗ್ರಾಮದಲ್ಲಿ ಮನೋಹರ್ ಕಲ್ಲಪ್ಪ ಹಿಪ್ಪರಗಿ ಅವರ ತೋಟದಲ್ಲಿ ಕಟ್ಟಿದ್ದ ಎಮ್ಮೆಯೊಂದು ಮೃತಪಟ್ಟಿದೆ.

ಈ ಕುರಿತು ಅಫಜಲಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೆಲವು ಗ್ರಾಮಗಳಲ್ಲಿ ಬಿರುಗಾಳಿಗೆ ಬಾಳೆ ಗಿಡಗಳು ಮತ್ತು ಮೇವಿನ ಬಣವಿ ಹಾಳಾದ ಬಗ್ಗೆ ವರದಿಯಾಗಿದೆ.ತಾಲ್ಲೂಕಿನ ಆನೂರು ಗ್ರಾಮದ ರೈತ ಮನೋಹರ್ ಕಲ್ಲಪ್ಪ ಹಿಪ್ಪರಗಿ ಅವರ ತೋಟದಲ್ಲಿ ಬೇವಿನ ಮರಕ್ಕೆ ಕಟ್ಟಿರುವ ಎಮ್ಮೆ ಸಿಡಿಲಿಗೆ ಸಾವನಪ್ಪಿರುವುದು

ಸಂಜೆ 5 ಗಂಟೆಗೆ ಗುಡುಗು ಮಿಂಚಿನೊಂದಿಗೆ ಆರಂಭವಾದ ಮಳೆ ಸುಮಾರು ಅರ್ಧ ಗಂಟೆವರೆಗೆ ಸುರಿದಿದೆ. ಬಳ್ಳೂರ, ಬಡದಾಳ, ಅತನೂರು, ಮಾತೋಳಿ, ರೇವೂರು, ಅಂಕಲಗಾ, ಭೋಗನಹಳ್ಳಿ, ಸಿದ್ಧನೂರು ಗ್ರಾಮಗಳಲ್ಲಿ ಮಳೆಯಾಗಿದೆ. ಕರಜಿಗಿ ಹೋಬಳಿಯಲ್ಲಿ ಮಳೆ ಇಲ್ಲ. ಉಡಚಣದಲ್ಲಿ ಸ್ವಲ್ಪ ಮಳೆಯಾಗಿದೆ. ಪಟ್ಟಣದಲ್ಲಿ ತುಂತುರು ಮಳೆಯಾಗಿದೆ.


Spread the love

About Laxminews 24x7

Check Also

20 ವರ್ಷಗಳಿಂದ ಕಳ್ಳತನ: ಕುಖ್ಯಾತ ಖದೀಮ ಬೆಂಗಳೂರು ಪೊಲೀಸರ ಬಲೆಗೆ

Spread the loveಬೆಂಗಳೂರು: ಕಳ್ಳತನವನ್ನೇ ಕಾಯಕ ಮಾಡಿಕೊಂಡು ಹಾಡಹಾಗಲೇ ಮನೆಗಳ್ಳತನ ಮಾಡುತ್ತಿದ್ದ ಕುಖ್ಯಾತ ಖದೀಮನೋರ್ವ ಇಲ್ಲಿನ ವಿದ್ಯಾರಣ್ಯಪುರ ಪೊಲೀಸರ ಬಲೆಗೆ ಬಿದ್ದಿದ್ಧಾನೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ