Breaking News

ನನ್ನದು ಗಜಕೇಸರಿ ಯೋಗ, ಮುಂದೆ ನಾನು ‘ಪ್ರಧಾನಿ’ಯಾದರು ಆಗಬಹುದು :ಸಂಯುಕ್ತ ಪಾಟೀಲ್

Spread the love

ಬಾಗಲಕೋಟೆ : ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳಿಗೆ ಟಿಕೆಟ್ ಹಂಚಿಕೆಯ ವಿಚಾರವಾಗಿ ಅಸಮಾಧಾನ ಬಿಜೆಪಿ ಪಕ್ಷ ಅಷ್ಟೆ ಅಲ್ಲದೆ ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಾಗಿಲ್ಲ. ಏಕೆಂದರೆ ಬಾಗಲಕೋಟೆ ಲೋಕಸಭಾ ಕ್ಷೇತ್ರಕ್ಕೆ ಶಾಸಕ ವಿಧಾನದ ಕಾಶಪ್ಪನವರ ಪತ್ನಿ ವೀಣಾ ಕಾಶಪ್ಪನವರು ಲೋಕಸಭೆ ಆಕಾಂಕ್ಷಿಯಾಗಿದ್ದರು.

 

ಆದರೆ ಕಾಂಗ್ರೆಸ್ ಹೈಕಮಾಂಡ್ ಸಚಿವ ಶಿವಾನಂದ್ ಪಾಟೀಲ್ ಅವರ ಪುತ್ರಿ ಸಂಯುಕ್ತ ಪಾಟೀಲ್ ಗೆ ಟಿಕೆಟ್ ನೀಡಿದೆ. ಹೀಗಾಗಿ ಅವರು ಇದೀಗ ಚುನಾವಣೆ ಪ್ರಚಾರದಲ್ಲಿ ತೊಡಗಿದ್ದಾರೆ.

ಈ ವೇಳೆ ಮಾತನಾಡಿದ ಅವರು ನಾನು ಮುಂದೆ ದೇಶದ ಪ್ರಧಾನಿಯಾದರು ಆಗಬಹುದು ಎಂದು ಹೇಳಿಕೆಯನ್ನು ನೀಡಿದ್ದಾರೆ.

ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟಿಲ್ ಅವರು ಹಣವನ್ನ ಪ್ರಚಾರದ ವೇಳೆ ಒಂದು ಅವಕಾಶ ಕೊಡಿ ನಿಮ್ಮ ಮನೆಯ ಜೀತದಾಳಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದು,

ಮನೆ ಯಜಮಾನಿಗೆ ಸರ್ಕಾರ 2 ಸಾವಿರ ರೂಪಾಯಿ ಹಣ ನೀಡುತ್ತಿದೆ. ಪುರುಷರಿಗೆ ಕೊಟ್ಟರೆ ಸಂಜೆ ಯಾವ ಅಂಗಡಿಗೆ ಹೋಗುತ್ತೆ ಗೊತ್ತಿದೆ ಎಂದು ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಹಾಸ್ಯ ಚಟಾಕಿ ಹಾರಿಸಿದರು.

ನನ್ನದು ಗಜಕೇಸರಿ ಯೋಗ, ನಾನು ಹುಟ್ಟಿದಾಗ ತಂದೆ ಶಾಸಕರಾದರು ಚಿಕ್ಕವಳಿದ್ದಾಗ ಏನಾಗ್ತಿಯಾ ಅಂದರೆ ಪ್ರಧಾನಿ ಆಗುತ್ತೇನೆ ಅಂತಿದ್ದೆ.

ಈಗ ಸಂಸದಳಾಗುವ ಅವಕಾಶ ಬಂದಿದೆ. ಮುಂದೆ ನಾನು ಪ್ರಧಾನಿಯಾದರು ಆಗಬಹುದು ಎಂದು ಬಾಗಲಕೋಟೆಯ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಹೇಳಿಕೆ ನೀಡಿದರು.


Spread the love

About Laxminews 24x7

Check Also

ಚಾಮುಂಡೇಶ್ವರಿ ಸಂಜೀವಿನಿ ಮಹಿಳಾ ಸಂಘಟನೆಯ ಕಾರ್ಯಕ್ಕೆ ಒಲಿದು ಬಂತು ರಾಷ್ಟ್ರಮಟ್ಟದ ಪ್ರಶಸ್ತಿ

Spread the love ಬಾಗಲಕೋಟೆ: ಮಹಿಳೆಯರು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂಬುದಕ್ಕೆ ಮಹಿಳಾ ಸಂಘಟನೆಯೊಂದು ಸಾಕ್ಷಿಯಾಗಿದೆ. ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ