Breaking News

RCB ಟ್ರೋಫಿ ಗೆಲ್ಲದಿರುವುದಕ್ಕೆ ವಿರಾಟ್ ಕೊಹ್ಲಿಯೇ ಕಾರಣ

Spread the love

ಬೆಂಗಳೂರು, – ವಿಶ್ವದ ಅತ್ಯಂತ ಐಷಾರಾಮಿ ಕ್ರಿಕೆಟ್ ಲೀಗ್ (ಐಪಿಎಲ್) ಟೂರ್ನಿಯ 16 ಸೀಸನ್ಗಳು ಕಳೆದಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟ್ರೋಫಿ ಗೆಲ್ಲದೆ ಇರಲು ವಿರಾಟ್ ಕೊಹ್ಲಿಯೇ ಕಾರಣ ಎಂದು ಖ್ಯಾತ ಕ್ರಿಕೆಟಿಗ ಅಂಬಾಟಿ ರಾಯುಡು ಅವರು ತಿಳಿಸಿದ್ದಾರೆ.

RCB ಟ್ರೋಫಿ ಗೆಲ್ಲದಿರುವುದಕ್ಕೆ ವಿರಾಟ್ ಕೊಹ್ಲಿಯೇ ಕಾರಣ

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕನ್ನಡಿಗ ಕೆಎಲ್ ರಾಹುಲ್ ಸಾರಥ್ಯದ ಲಖನೌ ಸೂಪರ್ ಜಯಂಟ್ಸ್ ವಿರುದ್ಧ 28 ರನ್ಗಳ ಸೋಲು ಕಂಡಿತು. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಯುವ ಸ್ಪಿನ್ನರ್ ಮಣಿಮಾರನ್ ಸಿದ್ಧಾರ್ಥ್ ಬೌಲಿಂಗ್ನಲ್ಲಿ ವಿಕೆಟ್ ಒಪ್ಪಿಸಿದ ಬೆನ್ನಲ್ಲೇ ಅಂಬಾಟಿ ರಾಯುಡು ಅವರು ಆರ್ಸಿಬಿ ಐಪಿಎಲ್ ಟ್ರೋಫಿ ಗೆಲ್ಲದೆ ಇರಲು ವಿರಾಟ್ ಕೊಹ್ಲಿಯೇ ನೇರ ಕಾರಣ ಎಂದು ಅಂಬಾಟಿ ರಾಯುಡು ಹೊಸ ಬಾಂಬ್ ಸಿಡಿಸಿದ್ದಾರೆ.

ಐಪಿಎಲ್ ಟೂರ್ನಿಯಲ್ಲಿ ಸಾಕಷ್ಟು ಬಲಿಷ್ಠ ತಂಡವಗಿರುವ ಆರ್ಸಿಬಿ ಟ್ರೋಫಿ ಗೆಲ್ಲದೆ ಇರಲು ಆ ತಂಡವು 2008 ರಿಂದಲೂ ಟಾಪ್ ಆರ್ಡರ್ ಬ್ಯಾಟರ್ಗಳನ್ನು ಹೆಚ್ಚಾಗಿ ಅವಲಂಬಿಸಿರುವುದು ಹಾಗೂ ಬೌಲರ್ಗಳ ವೈಫಲ್ಯತೆ ಕಾರಣ ಎಂದು ತಿಳಿದಿದ್ದರೂ, ಬೆಂಗಳೂರು ಫ್ರಾಂಚೈಸಿ ಚಾಂಪಿಯನ್ ಪಟ್ಟ ಗೆಲ್ಲದೇ ಇರಲು ಕೊಹ್ಲಿಯನ್ನು ಹೊಣೆ ಮಾಡಿದ್ದಾರೆ.

`ವಿರಾಟ್ ಕೊಹ್ಲಿ ಅವರು ಆರ್ಸಿಬಿ ಫ್ರಾಂಚೈಸಿಯೊಂದಿಗೆ 2008 ರಿಂದಲೂ ಇದ್ದು ಆಟಗಾರ ಹಾಗೂ ನಾಯಕರಾಗಿ ತಂಡವನ್ನು ಮುನ್ನಡೆಸಿದ್ದರು. ಆದರೆ ಮೆಗಾ ಹರಾಜು ಹಾಗೂ ಮಿನಿ ಹರಾಜಿನಲ್ಲಿ ತಂಡಕ್ಕೆ ಗೆಲುವು ತಂದುಕೊಡಬಲ್ಲ ಆಟಗಾರರನ್ನು ಖರೀದಿಸಲು ಹಾಗೂ ತಂಡಕ್ಕೆ ಹಲವು ಗೆಲುವು ತಂದುಕೊಟ್ಟಿದ್ದ ಶೇನ್ ವಾಟ್ಸನ್ , ಯುಜ್ವೇಂದ್ರಚಹಲ್ ಸೇರಿದಂತೆ ಹಲವು ಆಟಗಾರರನ್ನು ಫ್ರಾಂಚೈಸಿ ಜೊತೆಗೆ ಸೂಕ್ತ ಮಾತುಕತೆ ನಡೆಸಿ ಉಳಿಸಿಕೊಳ್ಳುವಲ್ಲಿ ಎಡವಿದ್ದೆ ತಂಡ ಟ್ರೋಫಿ ಗೆಲ್ಲಲು ಸಾಧ್ಯವಾಗಿಲ್ಲ’ ಎಂದು ಅಂಬಾಟಿ ರಾಯುಡು ಹೇಳಿದ್ದಾರೆ.


Spread the love

About Laxminews 24x7

Check Also

ಬಾನು ಮುಷ್ತಾಕ್ ಆಯ್ಕೆಯನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ: ಸಿಎಂ ಸಿದ್ದರಾಮಯ್ಯ

Spread the loveಮೈಸೂರು: “ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ