ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ದಂಪತಿ ಆಸ್ತಿ ಮೌಲ್ಯ ₹6 ಕೋಟಿ ಇದ್ದರೆ, ಮಂಡ್ಯ ಕಾಂಗ್ರೆಸ್ ಅಭ್ಯರ್ಥಿ ವೆಂಕಟರಮಣೇಗೌಡ ದಂಪತಿ ₹410 ಕೋಟಿ ಮೌಲ್ಯದ ಆಸ್ತಿಯ ಒಡೆಯರಾಗಿದ್ದಾರೆ. ಒಂದು ಸಾಮ್ಯತೆ ಎಂದರೆ ಎರಡೂ ಕುಟುಂಬಗಳ ಬಳಿ ಸ್ವಂತ ಕಾರುಗಳಿಲ್ಲ.

ಆದರೆ, ವೆಂಕಟರಮಣೇಗೌಡ (ಸ್ಟಾರ್ ಚಂದ್ರು) ಮೂರು ಟ್ರ್ಯಾಕ್ಟರ್‌ಗಳ ಮಾಲೀಕ. ಯದುವೀರ ಕುಟುಂಬ ಆರೂವರೆ ಕೆ.ಜಿ. ಚಿನ್ನ ಹೊಂದಿದ್ದರೆ, ವೆಂಕಟರಮಣೇಗೌಡ ಪತ್ನಿ ಕುಸುಮಾ 4.2 ಕೆ.ಜಿ ಚಿನ್ನದ ಒಡತಿ.
Laxmi News 24×7