Breaking News

ಏಪ್ರಿಲ್ 8ರಂದು ಸೂರ್ಯಗ್ರಹಣ; ಈ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ಘೋಷಣೆ!

Spread the love

ಪ್ರಿಲ್ 8ರಂದು ಸೂರ್ಯಗ್ರಹಣ (Solar Eclipse) ಸಂಭವಿಸಲಿದೆ. ಈ ಖಗೋಳ ವಿಸ್ಮಯ ಉತ್ತರ ಅಮೆರಿಕಾದಾದ್ಯಂತ ಗೋಚರಿಸುತ್ತದೆ. ಚಂದ್ರನು ಭೂಮಿ ಮತ್ತು ಸೂರ್ಯನ ನಡುವೆ ಹಾದುಹೋಗುವಾಗ ಸೂರ್ಯಗ್ರಹಣ ಸಂಭವಿಸಲಿದ್ದು, ಭಾಗಶಃ ಸೌರ ಗ್ರಹಣವು ಸುತ್ತಮುತ್ತಲಿನ ಸಾವಿರಾರು ಕಿಲೋ ಮೀಟರ್ ಅಗಲದ ಪ್ರದೇಶದಲ್ಲಿ ಗೋಚರಿಸಲಿದೆ.

ಏಪ್ರಿಲ್ 8ರಂದು ಸಂಭವಿಸಲಿರುವ ಸೂರ್ಯಗ್ರಹಣ ವೀಕ್ಷಿಸಲು ಲಕ್ಷಾಂತರ ಜನ ನಯಾಗರಕ್ಕೆ (Niagara) ಬರುವ ಹಿನ್ನೆಲೆ ನಯಾಗರದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ತುರ್ತು ಪರಿಸ್ಥಿತಿ ಘೋಷಣೆ

ಕೆನಡಾ ದೇಶದ ದಕ್ಷಿಣ ಒಂಟಾರಿಯೊ ಭಾಗದಲ್ಲಿ ನಯಾಗರ ಪ್ರದೇಶವಿದೆ. ಇಲ್ಲಿರುವ ನಯಾಗರ ಫಾಲ್ಸ್ ವಿಶ್ವ ಖ್ಯಾತಿ ಪಡೆದಿದೆ. ಪ್ರಖ್ಯಾತ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ನಯಾಗರ ಪ್ರದೇಶದಲ್ಲಿ ಸೂರ್ಯಗ್ರಹಣ ವೇಳೆ ಲಕ್ಷಾಂತರ ಮಂದಿ ವೀಕ್ಷಿಸಲು ಬರುವ ನಿರೀಕ್ಷೆಯಿಂದ ನಯಾಗರ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದೆ.

ಏಪ್ರಿಲ್ 8ರಂದು ಸಂಭವಿಸುತ್ತಿರುವ ಸಂಪೂರ್ಣ ಸೂರ್ಯಗ್ರಹಣವು 1979ರ ನಂತರ ನಯಾಗರ ಪ್ರಾಂತ್ಯದಲ್ಲಿ ಪ್ರಥಮ ಬಾರಿಗೆ ಸ್ಪರ್ಶಿಸಲಿದೆ. ನಯಾಗರ ಪ್ರಾಂತ್ಯದಲ್ಲಿ ಚಂದ್ರನು ಕೆಲಕಾಲ ಸೂರ್ಯನ ಕಿರಣಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲಿದ್ದಾನೆ. ಈ ಖಗೋಳ ವಿಸ್ಮಯ ವೀಕ್ಷಿಸಲು ನಯಾಗರ ಜಲಪಾತ ಪ್ರದೇಶ ಅತ್ಯುತ್ತಮ ತಾಣವಾಗಿದೆ. ಮಾರ್ಚ್ 28ರಂದು ನಯಾಗರ ಪ್ರಾದೇಶಿಕ ಅಧ್ಯಕ್ಷರಾದ ಜಿಮ್ ಬ್ರಾಡ್ಲಿ ಅವರು ತುರ್ತು ನಿರ್ವಹಣೆ ಮತ್ತು ನಾಗರಿಕ ಸಂರಕ್ಷಣಾ ಕಾಯಿದೆ (EMCPA) ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗುತ್ತಿದೆ ಎಂದು ಸುದ್ದಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್ 8ರಂದು ಸೂರ್ಯಗ್ರಹಣ; ಈ ಪ್ರದೇಶದಲ್ಲಿ ಶಾಲೆಗಳಿಗೆ ರಜೆ ಘೋಷಣೆ!

ತುರ್ತು ನಿರ್ವಹಣೆ ಮತ್ತು ನಾಗರಿಕ ಸಂರಕ್ಷಣಾ ಕಾಯಿದೆ (EMCPA) ಅಡಿಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದು, ಜನರ ಆರೋಗ್ಯ ದೃಷ್ಟಿ, ಸ್ಥಳೀಯ ನಿವಾಸಿಗಳು, ಪ್ರವಾಸಿಗರು, ಸಂದರ್ಶಕರ ಸುರಕ್ಷತೆ ಬಗ್ಗೆ ಜಾಗ್ರತೆ ವಹಿಸಲಾಗಿದೆ. ಮೂಲಸೌಕರ್ಯಗಳ ರಕ್ಷಣೆಗೆ ಹೆಚ್ಚು ಒತ್ತು ನೀಡುವ ಸಲುವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ನಯಾಗರದಲ್ಲಿ ಸಂಪೂರ್ಣ ಸಿದ್ಧತೆ

ಏಪ್ರಿಲ್ 8ರಂದು ಸಂಭವಿಸಲಿರುವ ಸೂರ್ಯಗ್ರಹಣವನ್ನು ಸ್ಥಳೀಯ ನಿವಾಸಿಗಳು, ಪ್ರವಾಸಿಗರು ಸುರಕ್ಷಿತವಾಗಿ ನೋಡಲು, ನಯಾಗರ ಪ್ರಾದೇಶಿಕ ಸರ್ಕಾರ, ತುರ್ತು ಕಾರ್ಯ ನಿರ್ವಹಿಸುವವರು, ಶಾಲೆಗಳು ಹಾಗೂ ಸಂಸ್ಥೆಗಳು ಒಟ್ಟಾಗಿ ಕೈ ಜೋಡಿಸಿದೆ ಎಂದು ವರದಿಯಲ್ಲಿ ಪ್ರಕಟಿಸಲಾಗಿದೆ.

ಸ್ಥಳೀಯ ಪೊಲೀಸರು, ನಯಾಗರ ಜಲಾಶಯ ಬಳಿ ಮಿಲಿಯನ್ ಗಟ್ಟಲೇ ಜನ ಸೇರುವ ಸಾಧ್ಯತೆಗಳಿವೆ ಎಂದು ಅಂದಾಜಿಸಿದ್ದಾರೆ. ತುರ್ತು ಸೇವೆಗಳಿಗೆ ಹೆಚ್ಚಿನ ಬೇಡಿಕೆ, ಮೊಬೈಲ್ ಫೋನ್ ನೆಟ್ ವರ್ಕ್, ಸಂಚಾರ ದಟ್ಟಣೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗುವ ಕಾರಣದಿಂದ ಮುನ್ನೆಚ್ಚರಿಕಾ ಕ್ರಮವಾಗಿ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ.

ಏಪ್ರಿಲ್ 8ರಂದು ಖಗೋಳದಲ್ಲಿ ನಡೆಯುವ ಕೌತುಕ ಕ್ಷಣ ಕಣ್ತುಂಬಿಕೊಳ್ಳಲು, ಸಾವಿರಾರು ಜನ ನಮ್ಮ ಜೊತೆ ಇರುತ್ತಾರೆ. ಈ ಅಚ್ಚರಿಯನ್ನು ವೀಕ್ಷಿಸಲು ನಾವೆಲ್ಲಾ ಸಿದ್ಧರಾಗಿದ್ದೇವೆ ಎಂದು ನಯಾಗರ ಪ್ರಾದೇಶಿಕ ಅಧ್ಯಕ್ಷರಾದ ಜಿಮ್ ಬ್ರಾಡ್ಲಿ ಹೇಳಿದರು.

ಸೂರ್ಯಗ್ರಹಣ ಸಂಭವಿಸುವ ಮುನ್ನವೇ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಶೇಖರಿಸಿಟ್ಟುಕೊಳ್ಳುವಂತೆ ಸ್ಥಳೀಯ ನಿವಾಸಿಗಳಿಗೆ ಸೂಚನೆ ನೀಡಲಾಗಿದೆ. ಏಪ್ರಿಲ್ 8ರಂದು ಪ್ರಯಾಣಿಸುವಾಗ ನಿರ್ದೇಶಿಸಿದಂತೆ, ರಸ್ತೆ ಸಂಕೇತಗಳನ್ನು ಅನುಸರಿಸುವಂತೆ ತಿಳಿಸಲಾಗಿದೆ. ಹಾಗೇ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ, ಗ್ರಹಣವನ್ನು ವೀಕ್ಷಿಸಲು ಕಾರುಗಳನ್ನು ನಿಲ್ಲಿಸಿ ಫೋಟೋಗಳನ್ನು ತೆಗೆಯಬೇಡಿ ಎಂದು ಎಚ್ಚರಿಕೆ ನೀಡಲಾಗಿದೆ.

ಶಾಲೆಗಳಿಗೆ ರಜೆ


Spread the love

About Laxminews 24x7

Check Also

ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು

Spread the love ಹುಕ್ಕೇರಿ : ಗೋಕಾಕ ತಾಲೂಕಿನ ಗೋಡಚಿನಮಲ್ಕಿ ನಿಸರ್ಗ ಜಲಪಾತಕ್ಕೆ ಪ್ರವಾಸಿಗರ ದಂಡು ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಧಾರಾಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ