Breaking News

ಇಫ್ತಾರ್‌ ಕೂಟಕ್ಕಾಗಿ ರಸ್ತೆಯೇ ಬಂದ್‌!

Spread the love

ಮಂಗಳೂರು : ಇಫ್ತಾರ್‌ (iftar) ಕೂಟಕ್ಕಾಗಿ ಇಡೀ ರಸ್ತೆಯನ್ನೇ ಬಂದ್‌ ಮಾಡಿರುವ ಘಟನೆ ಮಂಗಳೂರಲ್ಲಿ(mangaluru) ನಡೆದಿದೆ.

ರಸ್ತೆ ತುಂಬೆಲ್ಲಾ ಚೇರ್‌ ಹಾಕಿ ಒಂದಿಡೀ ರಸ್ತೆಯನ್ನೇ ಬಂದ್‌ ಮಾಡಿ ಆಹಾರ ಸೇವನೆಗೆ ವ್ಯವಸ್ಥೆ ಮಾಡಿರುವ ಕ್ರಮಕ್ಕೆ ಈಗ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.

ROAD BLOCK : ಎಂಚಿನ ಮಾರ್ರೇ .!! ಇಫ್ತಾರ್‌ ಕೂಟಕ್ಕಾಗಿ ರಸ್ತೆಯೇ ಬಂದ್‌! - VIDEO

 

ಮಂಗಳೂರಿನ ಮುಡಿಪು ಜಂಕ್ಷನ್‌ನಲ್ಲಿ (mudipu junction) ಈ ರೀತಿ ರಸ್ತೆ ಬ್ಲಾಕ್‌ ಮಾಡಿ ಇಫ್ತಾರ್‌ ಆಯೋಜಿಸಲಾಗಿದೆ.

ಇದರ ಪರಿಣಾಮ ಟೂ-ವೇ ಇದ್ದ ರಸ್ತೆ ಒನ್‌-ವೇ ಆಗಿದ್ದು, ವಾಹನಗಳೆಲ್ಲಾ ರಸ್ತೆಯ ಒಂದೇ ಬದಿಯಲ್ಲಿ ಸಂಚರಿಸುವಂತಾಗಿದೆ. ಈ ರೀತಿ ಇಫ್ತಾರ್‌ ಆಯೋಜನೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದು, ಇಂಥ ಕೂಟಗಳನ್ನು ರಸ್ತೆ ಬಿಟ್ಟು ಬೇರೆಡೆ ಆಯೋಜಿಸಬಹುದಿತ್ತಲ್ಲ ಎಂದು ಪ್ರಶ್ನಿಸಿದ್ದಾರೆ

 

 

ಮುಸ್ಲಿಮರು ರಂಜಾನ್‌ ತಿಂಗಳ ಉಪವಾಸ ಮಾಡುತ್ತಿದ್ದಾರೆ. ಸೂರ್ಯೋದಯಕ್ಕೂ ಮುನ್ನ ಅನ್ನಾಹಾರ ಸೇವಿಸಿದರೆ ಮತ್ತೆ ಸೂರ್ಯಾಸ್ತದ ನಂತರವೇ ಊಟ ಮಾಡುವುದು ಈ ರೋಜಾ ಉಪವಾಸದ ಪದ್ಧತಿ. ಇಫ್ತಾರ್ ಎಂದು ಕರೆಯಲ್ಪಡುವ ಭೋಜನವನ್ನು ಸೂರ್ಯಾಸ್ತದ ನಂತರ ಸೇವಿಸಿ ಉಪವಾಸ ಅಂತ್ಯಗೊಳಿಸುತ್ತಾರೆ


Spread the love

About Laxminews 24x7

Check Also

ಬಾನು ಮುಷ್ತಾಕ್ ಆಯ್ಕೆಯನ್ನು ಧರ್ಮಾಂದರು ಮಾತ್ರ ವಿರೋಧಿಸುತ್ತಾರೆ: ಸಿಎಂ ಸಿದ್ದರಾಮಯ್ಯ

Spread the loveಮೈಸೂರು: “ದಸರಾ ಉದ್ಘಾಟನೆಗೆ ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಆಯ್ಕೆ ವಿಚಾರದಲ್ಲಿ ಬಿಜೆಪಿ ನಾಯಕರು ಕುಂಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ