Breaking News

ಅಲ್ಲು ಅರ್ಜುನ್ ʼಪುಷ್ಪ-2ʼ ಜೊತೆ‌ ಪ್ರಭಾಸ್ ʼಕಲ್ಕಿ 2898‌ ಎಡಿʼ ರಿಲೀಸ್?

Spread the love

ಹೈದರಾಬಾದ್: ಈ ವರ್ಷ ಟಾಲಿವುಡ್‌ ಸಿನಿರಂಗದಲ್ಲಿ ಬಹು ನಿರೀಕ್ಷಿತ ಪ್ಯಾನ್‌ ಇಂಡಿಯಾ ಸಿನಿಮಾಗಳು ತೆರೆ ಕಾಣಲಿವೆ. ʼಪುಷ್ಪ-2ʼ ಹಾಗೂ ಮಲ್ಟಿಸ್ಟಾರ್ಸ್‌ ವುಳ್ಳ ನಾಗ್‌ ಅಶ್ವಿನ್‌ ನಿರ್ದೇಶನದ ʼ ಕಲ್ಕಿ 2898 ಎಡಿʼ ರಿಲೀಸ್‌ ಗೆ ಪ್ರೇಕ್ಷಕರು ಕಾಯುತ್ತಿದ್ದಾರೆ.

ಈ ಎರಡು ಸಿನಿಮಾಗಳು ಪ್ಯಾನ್‌ ಇಂಡಿಯಾದಲ್ಲಿ ರಿಲೀಸ್‌ ಗೂ ಮುನ್ನವೇ ನಿರೀಕ್ಷೆಗಳನ್ನು ಹೆಚ್ಚಿಸಿದೆ.

ಪ್ರಭಾಸ್‌ ಅವರ ʼಕಲ್ಕಿʼ ಅಂದುಕೊಂಡಂತೆ ಆದರೆ ಮೇ 9 ರಂದು ಸಿನಿಮಾ ರಿಲೀಸ್‌ ಆಗಲಿದೆ. ಆದರೆ ಆಂಧ್ರ ವಿಧಾನಸಭಾ ಚುನಾವಣಾ ದಿನಾಂಕ(ಮೇ.13 ರಂದು) ಘೋಷಣೆ ಆಗಿದೆ. ಈ ಕಾರಣದಿಂದ ಆ ವೇಳೆಗೆ ಸಿನಿಮಾ ರಿಲೀಸ್‌ ಆಗುವುದು ಅನುಮಾನ ಎನ್ನಲಾಗುತ್ತಿದೆ.

Tollywood: ಅಲ್ಲು ಅರ್ಜುನ್ ʼಪುಷ್ಪ-2ʼ ಜೊತೆ‌ ಪ್ರಭಾಸ್ ʼಕಲ್ಕಿ 2898‌ ಎಡಿʼ ರಿಲೀಸ್?

ಇತ್ತ ಅಲ್ಲು ಅರ್ಜುನ್‌ ಅವರ ʼಪುಷ್ಪ-2ʼ ಸಿನಿಮಾ ಚಿತ್ರೀಕರಣದ ಹಂತದಲ್ಲಿದೆ. ಮೂಲಗಳ ಪ್ರಕಾರ ಶೀಘ್ರದಲ್ಲಿ ಸಿನಿಮಾದ ಮೊದಲ ಹಾಡನ್ನು ರಿಲೀಸ್‌ ಮಾಡುವ ಯೋಜನೆಯಲ್ಲಿ ಚಿತ್ರತಂಡ ಇದೆ ಎನ್ನಲಾಗಿದೆ. ಇದೇ ವರ್ಷದ ಆಗಸ್ಟ್‌ 15 ರಂದು ಸಿನಿಮಾ ತೆರೆ ಕಾಣಲಿದೆ.

ʼಕಲ್ಕಿʼ ಸಿನಿಮಾ ರಿಲೀಸ್‌ ಡೇಟ್‌ ಮುಂದೆ ಹೋಗುವ ಸಾಧ್ಯತೆಯಿದ್ದು, ʼಪುಷ್ಪ-2ʼ ಸಿನಿಮಾ ರಿಲೀಸ್‌ ಸಮಯದಲ್ಲಿ ಪ್ರಭಾಸ್‌ ಸಿನಿಮಾ ರಿಲೀಸ್‌ ಆಗಲಿದೆ ಎನ್ನುವ ಮಾತುಗಳು ಟಾಲಿವುಡ್‌ ವಲಯದಲ್ಲಿ ಹರಿದಾಡುತ್ತಿದೆ.

ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ʼಕಲ್ಕಿʼ ಸಿನಿಮಾದಲ್ಲಿ ಪ್ರಭಾಸ್‌ ಜೊತೆ ಅಮಿತಾಭ್ ಬಚ್ಚನ್, ಕಮಲ್ ಹಾಸನ್, ದಿಶಾ ಪಟಾನಿ, ರಾಜೇಂದ್ರ ಪ್ರಸಾದ್, ಮತ್ತು ಪಶುಪತಿ ನಟಿಸಿದ್ದಾರೆ.

ಇತ್ತ ʼಪುಷ್ಪ-2ʼ ಸಿನಿಮಾದಲ್ಲಿ ಅಲ್ಲು ಅರ್ಜುನ್‌, ರಶ್ಮಿಕಾ ಮಂದಣ್ಣ, ಫಾಹದ್‌ ಫಾಸಿಲ್‌ ಸೇರಿದಂತೆ ಇತರೆ ಪ್ರಮುಖರು ಕಾಣಿಸಿಕೊಳ್ಳಲಿದ್ದಾರೆ


Spread the love

About Laxminews 24x7

Check Also

ಬೆಣ್ಣೆನಗರಿಗೆ ಬರಲಿದೆ ಐಟಿ ಪಾರ್ಕ್

Spread the loveದಾವಣಗೆರೆ: ಬೆಣ್ಣೆನಗರಿ ದಾವಣಗೆರೆ ಮಧ್ಯ ಕರ್ನಾಟಕದ ಕೇಂದ್ರ ಬಿಂದು. ಪ್ರಗತಿಯತ್ತ ಸಾಗುತ್ತಿರುವ ದಾವಣಗೆರೆಯಲ್ಲಿ ಐಟಿಬಿಟಿ ಕಂಪನಿಗಳು ಕರೆತರಲು ಇಲ್ಲಿಲ್ಲದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ