ಬೇಲೂರು: ‘ಎಲ್ಲ ಚುನಾವಣೆಯಲ್ಲೂ ಪಕ್ಷದ ಕಾರ್ಯಕ್ರಮಕ್ಕೆ ಬರದೇ ಇರುವ ಇನ್ನೊಂದು ಗುಂಪು ಕಲೆಕ್ಷನ್‌ಗೆ ಕಾಯುತ್ತಾ ಇರುತ್ತದೆ. ಅವರು ಕಲೆಕ್ಷನ್‌ಗೆ ಹೊರತು ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡಲು ಅಲ್ಲ.
ಇಷ್ಟೊತ್ತಿಗೆ ಅವನು ಸರಿಯಿಲ್ಲ, ಇವನು ಸರಿಯಲ್ಲ. ನಾವು ನಿಮಗೆ ಕೆಲಸ ಮಾಡ್ತೀವಿ ಎಂದು ರೇವಣ್ಣ ಅವರ ಹತ್ತಿರ ಮಾತನಾಡಿಕೊಂಡು ಬಂದಿರುತ್ತಾರೆ’ ಎಂದು ಕಾಂಗ್ರೆಸ್ ಮುಖಂಡ ಬಿ.
ಶಿವರಾಂ ಹೇಳಿರುವುದು ಪಕ್ಷದ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಮಾಜಿ ಸಚಿವ ಬಿ.ಶಿವರಾಂ ತಮ್ಮ ಪಕ್ಷದ ಕೆಲವರ ಮೇಲೆ ಈ ರೀತಿಯ ಅಸಮಾಧಾನ ಹೊರ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
‘ಕಳೆದ ಬಾರಿ ಚುನಾವಣೆಯಲ್ಲಿ ನೋಡಿದ್ರಲ್ಲ, ಎಲ್ಲೆಲ್ಲಿ ಇಸ್ಕಂಡು ಯಾರ ಯಾರಿಗೆ ಮಾಡಿದ್ರು. ಕಾಂಗ್ರೆಸ್‌ನಿಂದ ಪ್ರಾರಂಭ ಮಾಡಿ, ಅಲ್ಲಿಂದ ಜೆಡಿಎಸ್, ಅಲ್ಲಿಂದ ಬಿಜೆಪಿಗೆ ಬಂದು ಮುಗ್ಸಿದ್ರು’ ಎಂದು ವಾಗ್ದಾಳಿ ನಡೆಸಿದರು.