ಮುಂಬೈ: ಖ್ಯಾತ ಬಾಲಿವುಡ್ ಗಾಯಕಿ ಅನುರಾಧಾ ಪೌಡ್ವಾಲ್ ಶನಿವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ, ಚುನಾವಣಾ ಆಯೋಗವು ಲೋಕಸಭೆ ಚುನಾವಣೆಯ ದಿನಾಂಕವನ್ನು ಘೋಷಿಸುವ ಕೆಲವೇ ಗಂಟೆಗಳ ಮೊದಲು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಮಾಧ್ಯಮ ಉಸ್ತುವಾರಿ ಅನಿಲ್ ಬಲುನಿ ಮತ್ತು ಇತರ ನಾಯಕರ ಸಮ್ಮುಖದಲ್ಲಿ ಅನುರಾಧಾ ಕೇಸರಿ ಪಡೆಗೆ ಸೇರ್ಪಡೆಯಾದರು.
ಗಾಯಕಿಯನ್ನು ಪಕ್ಷಕ್ಕೆ ಸ್ವಾಗತಿಸಿದ ಅರುಣ್ ಸಿಂಗ್ ಮಾತನಾಡಿ, ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕುಟುಂಬವು ವಿಸ್ತರಿಸಿದೆ. ಅನುರಾಧಾ ಪೌಡ್ವಾಲ್ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಪಕ್ಷವನ್ನು ಬಲಪಡಿಸಲಾಗುವುದು ಎಂದು ಹೇಳಿದರು.
ದೇಶ-ವಿದೇಶಗಳಲ್ಲಿ ಭಕ್ತಿಗೀತೆಗಳು ಚರ್ಚೆಯಾದಾಗಲೆಲ್ಲ ಅನುರಾಧಾ ಪೌಡ್ವಾಲ್ ಅವರಿಗಿಂತ ದೊಡ್ಡ ಹೆಸರು ಮತ್ತೊಂದು ಬರುವುದಿಲ್ಲ. ಅವರು 35 ವರ್ಷಗಳಿಂದ ಭಕ್ತಿಗೀತೆ ಮತ್ತು ಚಿತ್ರಗೀತೆಗಳನ್ನು ಹಾಡಿದ್ದಾರೆ, ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ಷೇತ್ರ ಬೆಳವಣಿಗೆಯಾಗಿದ್ದು, ಇದರಿಂದ ಪ್ರಭಾವಿತರಾದ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರಲು ನಿರ್ಧರಿಸಿದ್ದಾರೆ ಎಂದು ಅರುಣ್ ಸಿಂಗ್ ಹೇಳಿದ್ದಾರೆ.