Breaking News

ಅಂಗನವಾಡಿ ಕೇಂದ್ರದಲ್ಲಿ ‘ಕಳಪೆ’ ಆಹಾರ ಪೂರೈಕೆ : ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

Spread the love

ಲಬುರ್ಗಿ : ಅಂಗನವಾಡಿ ಕೇಂದ್ರಗಳಲ್ಲಿ ಕಳಪೆ ಆಹಾರ ಪೂರೈಕೆ ಹಾಗೂ ಕಡಿಮೆ ಗುಣಮಟ್ಟದ ಮೊಟ್ಟೆ ವಿತರಣೆ ಮಾಡುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಅಂಗನವಾಡಿ ಕೇಂದ್ರಗಳ ಮೇಲೆ ದಿಢೀರ್ ದಾಳಿ ನಡೆಸಿದ್ದಾರೆ.

ಕಲಬುರ್ಗಿಯ ಅಂಗನವಾಡಿ ಕೇಂದ್ರದಲ್ಲಿ 'ಕಳಪೆ' ಆಹಾರ ಪೂರೈಕೆ : ದಿಢೀರ್ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು

ಕಲಬುರಗಿಯ ಹನುಮಾನ ನಗರದ ತಾಂಡಾ ಅಂಗನವಾಡಿಯಲ್ಲಿ ಪರೀಶಿಲನೆ‌ ವೇಳೆ ಮೊಟ್ಟೆ ತೂಕದಲ್ಲಿ ಬಾರಿ ವ್ಯತ್ಯಾಸ ಬಂದಿದ್ದು, ನಿಗದಿತ ತೂಕಕ್ಕಿಂತ ಕಡಿಮೆಯಿದೆ. ಕನಿಷ್ಠ 50 ಗ್ರಾಂ ಮೊಟ್ಟೆ ತೂಕ ಇರಬೇಕು‌ ಎಂಬ ನಿಯಮವಿದೆ. ಆದ್ರೆ, ಅಂಗನವಾಡಿಗಳಲ್ಲಿ ಸಿಕ್ಕ ಮೊಟ್ಟೆಯ ತೂಕ 23-30 ಗ್ರಾಂ ಮಾತ್ರ ಇದೆ.

ಇನ್ನು ಆಹಾರ ಪೊಟ್ಟಣಗಳಲ್ಲಿಯೂ ಕಳಪೆ ಆಹಾರ ಪೂರೈಕೆ ಪತ್ತೆಯಾಗಿದೆ. ಇದನ್ನು ಕಂಡು ಖುದ್ದು ಲೋಕಾಯುಕ್ತ ಎಸ್ಪಿ ಹೌಹಾರಿದ್ದಾರೆ. ಇಂತಹ ಆಹಾರಗಳನ್ನು ಅಂಗನವಾಡಿ ಮಕ್ಕಳು ಮತ್ತು ಗರ್ಭಿಣಿಯರಿಗೆ ನೀಡಿ ಆರೋಗ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ.


Spread the love

About Laxminews 24x7

Check Also

ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡರೆ ನಿಜವಾದ ಗ್ರಾಮ ಸ್ವರಾಜ್ : ಚನ್ನರಾಜ ಹಟ್ಟಿಹೊಳಿ

Spread the love ಗ್ರಾಮ ಪಂಚಾಯಿತಿಗಳು ಸಬಲೀಕರಣಗೊಂಡರೆ ನಿಜವಾದ ಗ್ರಾಮ ಸ್ವರಾಜ್ : ಚನ್ನರಾಜ ಹಟ್ಟಿಹೊಳಿ ಖಾನಾಪುರ: ಗ್ರಾಮ ಪಂಚಾಯಿತಿಗಳು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ