ಯಾದಗಿರಿ:-ಕರ್ನಾಟಕದಲ್ಲಿ ಮುಂದಿನ ಸಲ ನಾನೂ ಬರ್ತೀನಿ, ನಾನೇ ಸಿಎಂ ಆಗ್ತಿನಿ ಎಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಬಾಂಬ್ ಸಿಡಿಸಿದ್ದಾರೆ.
ಕರ್ನಾಟಕದಲ್ಲಿ ವಿಜಯೇಂದ್ರನನ್ನು ನೋಡಿ ವೋಟ್ ಹಾಕೋದಿಲ್ಲ. ಏಕೆಂದರೆ ಇದು ಮೋದಿ ಚುನಾವಣೆ, ವಿಜಯೇಂದ್ರನನ್ನ ತೆಗೆದುಕೊಂಡು ಏನು ಮಾಡೋದು.
ವಿಜಯೇಂದ್ರ ಪಾರ್ಟಿ ಅಧ್ಯಕ್ಷ ಆಗಿರಲಿ, ಸುಡುಗಾಡಾದ್ರೂ ಆಗಿರಲಿ. ರಾಜ್ಯದಲ್ಲಿ ಈ ಸಲ ಬಿಜೆಪಿ 28 ಸ್ಥಾನ ಗೆದ್ದೇ ಗೆಲ್ಲುತ್ತೆ. ಇದಕ್ಕೆ ವಿಜಯೇಂದ್ರ ಸಂಬಂಧಪಡಲ್ಲ ಎಂದು ಕಿಡಿ ಕಾರಿದ್ದಾರೆ
ಮುಂದುವರಿದು, ಯಡಿಯೂರಪ್ಪ ಅವರು ಅಧಿಕಾರದಲ್ಲಿದ್ದಾಗ ಯಾವಾಗ ಬಿಜೆಪಿಗೆ ರಾಜ್ಯದಲ್ಲಿ 120 ಸ್ಥಾನಗಳು ಬಂದಿವೆ ಹೇಳಿ? ಯಡಿಯೂರಪ್ಪ ಅವರದ್ದು ಅಷ್ಟು ತೂಕ ಇದ್ದಿದ್ದರೆ, 130 ಸ್ಥಾನ ಬರಬೇಕಿತ್ತು ಎಂದು ಲೇವಡಿ ಮಾಡಿದ್ದಾರೆ.
ಮುಂದಿನ ಸಲ ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗ್ತೀನಿ ಅಂತಾ ಕೆಲವರು ಈಗಲೇ ಬಿಳಿ ಅಂಗಿ ಹೊಲಿಸಿಕೊಂಡು ಕಾಯ್ತಿದ್ದಾರೆ. ಅವರೆಲ್ಲ ಹೊಂದಾಣಿಕೆ ಮಾಡಿಕೊಳ್ಳೋರು.
ಅವರ ಮಗನ್ನ ಇವರು ಗೆಲ್ಲಿಸೋದು, ಇವರ ಮಗನ್ನ ಅವರು ಗೆಲ್ಲಿಸೋಕೆ ಹೆಣಗಾಡ್ತಿದ್ದಾರೆ. ನಾನು ಬಂದ ಮೇಲೆ ಅದೆಲ್ಲ ನಡೆಯೋದಿಲ್ಲ. ಸದನದಲ್ಲೇ ಡಿಕೆ ಶಿವಕುಮಾರ್‌ಗೆ ಹೋಗೋ ಅದೆಲ್ಲ ನಡೆಯಲ್ಲ ಅಂತಾ ಹೇಳಿದ್ದೀನಿ ಎಂದು ಗುಡುಗಿದ್ದಾರೆ.