Breaking News

ಈ ಬಾರಿ ದೇಶಕ್ಕೆ ಮಹಿಳಾ ಪ್ರಧಾನಿ:ನೊಣವಿನಕೆರೆಯ ಯಶ್ವಂತ ಗುರೂಜಿ

Spread the love

ತುಮಕೂರು, ಮಾರ್ಚ್​.10: ಲೋಕಸಭಾ ಚುನಾವಣೆಗೆ (Lok Sabha Election) ರಣಕಣ ರಂಗೇರಿದೆ. ರಾಜಕೀಯ ಪಕ್ಷಗಳು ಗೆಲುವಿಗಾಗಿ ನಾನಾ ಸರ್ಕಸ್ ಮಾಡ್ತಿದ್ದಾರೆ.

ಈ ನಡುವೆ ತಿಪಟೂರು ತಾಲೂಕಿನ ನೊಣವಿನಕೆರೆಯ ಯಶ್ವಂತ ಗುರೂಜಿ (Yashwanth Guruji) ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದು ಈ ಬಾರಿ ಮಾಹಿಳಾ ಪ್ರಧಾನಿ ದೇಶಕ್ಕೆ ಸಿಗಲಿದ್ದಾರೆ ಎಂದಿದ್ದಾರೆ.

ಈ ಬಾರಿ‌ ದೇಶದ ಚುಕ್ಕಾಣಿಯನ್ನು ಕಾಂಗ್ರೆಸ್ (Congress) ಪಕ್ಷ ಹಿಡಿಯಲಿದೆ. ಮಹಿಳಾ ಪ್ರಧಾನಿಯಾಗಿ ಪ್ರಿಯಾಂಕ ಗಾಂಧಿ (Priyanka Gandhi) ದೇಶದ ಗದ್ದುಗೆ ಏರಲಿದ್ದಾರೆ ಎಂದು ಯಶ್ವಂತ ಗುರೂಜಿ ಶಿವರಾತ್ರಿಯ ಕಾಲಜ್ಞಾನ ಭವಿಷ್ಯ ನುಡಿದಿದ್ದಾರೆ.ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ 135 ಸೀಟು ಪಡೆಯಲಿದೆ ಎಂದು‌ ಈ ಹಿಂದೆ ಯಶ್ವಂತ ಗುರೂಜಿ ನಿಖರ ಭವಿಷ್ಯ ನುಡಿದಿದ್ದರು. ಅಲ್ಲದೆ ಕೊರೊನಾ ಮಹಾಮಾರಿ ಬರುವ ಬಗ್ಗೆ, ತೆಲಂಗಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋ ಬಗ್ಗೆ ಗುರೂಜಿ ಭವಿಷ್ಯ ನುಡಿದಿದ್ದರು.

ಸದ್ಯ ಈಗ ಮತ್ತೊಂದು ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ಈ‌ ಬಾರಿ ಒಬ್ಬಳು ಸ್ತ್ರೀ, ಪುರುಷನ ಎದುರು ದುರ್ಗಿಯಾಗಿ ನಿಂತು ಪುರುಷನಿಗೆ ಭಯ ಹುಟ್ಟಿಸಿ ತಾನೇ ಅಧಿಕಾರವನ್ನ ಮಾಡುವಳು. ತಾಯಿ ಮಮತೆಯಿಂದ ತನ್ನ ಅಧಿಕಾರವನ್ನ ಮಾತೃ ವಾತ್ಸಲ್ಯದಿಂದ ಪರರಿಗೆ ಬಿಟ್ಟುಕೊಡುವಳು. ಹೀಗಂತಾ ಕಾಲಜ್ಞಾನದಲ್ಲಿ ಉಲ್ಲೇಖವಾದ ಚುನಾವಣಾ ಭವಿಷ್ಯವನ್ನು ಯಶ್ವಂತ ಗುರೂಜಿ ನುಡಿದಿದ್ದಾರೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ