ನಟ ಅಕ್ಷಯ್ ಕುಮಾರ್ (Akshay Kumar) ತಮ್ಮ ಫಿಟ್ನೆಸ್ ಮೂಲಕ ಹೆಸರು ಮಾಡಿದ್ದಾರೆ. ಅಕ್ಷಯ್ ತಮ್ಮದೇ ಆದ ದಿನಚರಿ ನಿಗದಿಪಡಿಸಿಕೊಂಡಿದ್ದಾರೆ. ಅದನ್ನು ಅವರು ನಿಖರವಾಗಿ ಅನುಸರಿಸುತ್ತಾರೆ.
ಶೂಟಿಂಗ್ ಸಮಯದಲ್ಲಿಯೂ ಅವರು ಊಟ ಮಾಡಲು ಹಾಗೂ ನಿದ್ರಿಸಲು ಸಮಯ ನಿಗದಿಪಡಿಸಿಕೊಂಡಿದ್ದಾರೆ. ಅವರ ಜೊತೆ ಕೆಲಸ ಮಾಡುವ ನಿರ್ದೇಶಕರು, ನಿರ್ಮಾಪಕರಿಗೆ ಇದು ಗೊತ್ತಿದೆ.
ಅವರ ಟೈಮಿಂಗ್ಸ್ಗೆ ತಕ್ಕಂತೆ ಶೂಟಿಂಗ್ ಶೆಡ್ಯೂಲ್ ಮಾಡುತ್ತಾರೆ. ಆದರೆ ಮುಖೇಶ್ ಅಂಬಾನಿ ಅವರ ಕಾರ್ಯಕ್ರಮಕ್ಕಾಗಿ ಅಕ್ಷಯ್ ಕುಮಾರ್ ಈ ವಿಷಯದಲ್ಲಿ ರಾಜಿ ಮಾಡಿಕೊಂಡಿದ್ದರು.
ಮುಖೇಶ್ ಮತ್ತು ನೀತಾ ಅಂಬಾನಿ ಅವರು ತಮ್ಮ ಕಿರಿಯ ಪುತ್ರ ಅನಂತ್ ಅಂಬಾನಿ ಮದುವೆಯ ಪೂರ್ವ ಕಾರ್ಯಕ್ರಮವನ್ನು ಬಹಳ ಅದ್ದೂರಿಯಾಗಿ ನಡೆಸಿದ್ದಾರೆ
. ಈ ಸಮಾರಂಭದಲ್ಲಿ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿದ್ದರು. ಅಂಬಾನಿ ಅವರ ಕಾರ್ಯಕ್ರಮದಲ್ಲಿ ಅಕ್ಷಯ್ ಡ್ಯಾನ್ಸ್ ಮಾಡಿದ್ದಾರೆ. ಅದೂ ಮುಂಜಾನೆ 3 ಗಂಟೆಗೆ.