Breaking News

ಬಾಂಬ್ ಸ್ಫೋಟದಂಥ ಪ್ರಕರಣಗಳಲ್ಲಿ ಸುಲೇಮಾನ್ ಸಿಗಬೇಕೇ ವಿನಹ ಶಿವಪ್ಪ ಸಿಗಲ್ಲ: ಯತ್ನಾಳ್

Spread the love

ವಿಜಯಪುರ, ಮಾರ್ಚ್​​ 8: ಬೆಂಗಳೂರಿನ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Bengaluru Rameshwaram cafe blast) ಪ್ರಕರಣ ಸಂಬಂಧ ಸುಲೇಮಾನ್ ಎಂಬಾತನನ್ನು ಎನ್​​ಐಎ ಪೊಲೀಸರು (NIA Police) ವಶಕ್ಕೆ ಪಡೆದ ವಿಚಾರವಾಗಿ ವಿಜಯಪುರ ನಗರದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ (Basangouda Patil Yatnal) ಪ್ರತಿಕ್ರಿಯೆ ನೀಡಿದ್ದಾರೆ.

ಇಂಥ ಘಟನೆಗಳಲ್ಲಿ ಸುಲೇಮಾನ್ ಎಂಬ ಹೆಸರಿನ ವ್ಯಕ್ತಿ ಸಿಗಬೇಕೇ ವಿನಹ ಶಿವಪ್ಪ ಎಂಬವರು ಸಿಗಲ್ಲ. ಸುಲೇಮಾನ್, ಅಜಗರ್, ಅಹ್ಮದ್ ಇವರೇ ಸಿಗಬೇಕಲ್ಲಾ ಎಂದು ವಾಗ್ದಾಳಿ ನಡೆಸಿದ್ದಾರೆ.

ಬಾಂಬ್ ಸ್ಫೋಟ ಪ್ರಕರಣದ ತನಿಖೆ ಇನ್ನೂ ಆಳವಾಗಿ ನಡೆಯಬೇಕು. ಬಾಂಬ್ ಬ್ಲಾಸ್ಟ್ ಸಾಮಾನ್ಯ ಪ್ರಕರಣವಲ್ಲ. ಈ ಘಟನೆಯ ಗಂಭೀರತೆಯನ್ನು ವಿಧಾನಸಭೆಯಲ್ಲಿ ಹೇಳಿದರೂ ಸರ್ಕಾರ ಒಪ್ಪಲಿಲ್ಲ.

ಈ ಘಟನೆ ಕುರಿತು ಕಾಂಗ್ರೆಸ್ಸಿನ ಕೆಲ ಸಚಿವರು ಅಪ್ರಬುದ್ಧ ಹೇಳಿಕೆ ಕೊಟ್ಟಿದ್ದಾರೆ. ಇಂದು ಅವರಿಗೆ ಮುಖವಿಲ್ಲ ಎಂದು ಯತ್ನಾಳ್ ಕುಟುಕಿದ್ದಾರೆ.


Spread the love

About Laxminews 24x7

Check Also

ಅಕ್ರಮ ಬೆಟ್ಟಿಂಗ್​​ ಪ್ರಕರಣ: ಶಾಸಕ ಕೆ. ಸಿ. ವೀರೇಂದ್ರ ಇ.ಡಿ. ಕಸ್ಟಡಿ ಅವಧಿ ಸೆ.8ರ ವರೆಗೆ ವಿಸ್ತರಣೆ

Spread the loveಬೆಂಗಳೂರು: ಆನ್​ಲೈನ್ ಹಾಗೂ ಆಫ್​ಲೈನ್ ಮುಖಾಂತರ ಅಕ್ರಮವಾಗಿ ಬೆಟ್ಟಿಂಗ್ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ