ಬೆಂಗಳೂರು : ನನಗೂ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸಿಎಂ, ಡಿಸಿಎಂ ಕಚೇರಿಗೆ ಬೆದರಿಕೆ ಇಮೇಲ್ ಬಂದ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ ಅವರು ಈ ಹಿಂದೆ ಕೂಡ ಹಲವು ಶಾಲೆಗಳಿಗೆ ಬೆದರಿಕೆ ಕರೆ ಬಂದಿದೆ.
ಇಂತಹ ಕೇಸ್ ಗಳನ್ನು ಭೇದಿಸೋದು ಕಷ್ಟ.ಫೇಸ್ ಬುಕ್, ಗೂಗಲ್ ನಂತಹ ಕಂಪನಿಗಳು ಸಹಕರಿಸಬೇಕು, ಅವರು ಸಹಕಾರ ನೀಡದಿದ್ರೆ ಇಂತಹ ಕೇಸ್ ಗಳನ್ನು ಭೇದಿಸೋದು ಕಷ್ಟ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಹಾಗೂ ನನ್ನ ಕಚೇರಿಗೆ ಇಮೇಲ್ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿರುವುದು ನಿಜ ಎಂದು ಡಿಸಿಎಂ ಡಿಕೆ ಶಿವಕುಮಾರ್ ಕೂಡ ಹೇಳಿದರು. ಸಿಎಂ ಗೃಹ ಕಚೇರಿ ಕೃಷ್ಣದಲ್ಲಿ ಮಾತನಾಡಿದ ಅವರು, ಎರಡು ದಿನಗಳ ಹಿಂದೆ ಈ ಬೆದರಿಕೆ ಕರೆ ಬಂದಿದೆ.
ಶಾಹಿದ್ ಖಾನ್ ಎಂಬ ಹೆಸರಿನಿಂದ ಬಾಂಬ್ ಬೆದರಿಕೆ ಮೇಲ್ ಬಂದಿದೆ ಎಂದು ತಿಳಿಸಿದರು.
Laxmi News 24×7