Breaking News

ತೇರದಾಳ: ಗ್ರಂಥಾಲಯಗಳಿಗೆ ದಿನಪತ್ರಿಕೆ ಸ್ಥಗಿತ

Spread the love

ತೇರದಾಳ: ತಾಲ್ಲೂಕಿನ ಮೂರು ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯ ಗ್ರಂಥಾಲಯಗಳಿಗೆ ಸರಬರಾಜಾಗುತ್ತಿದ್ದ ಪತ್ರಿಕೆಗಳನ್ನು ನಿಲ್ಲಿಸಿದ್ದರಿಂದ ಸ್ಪರ್ಧಾ ಪರೀಕ್ಷೆಗೆ ಸಿದ್ಧತೆ ನಡೆಸಿದ ಅಭ್ಯರ್ಥಿಗಳು, ಸಾಮಾನ್ಯ ಓದುಗರು ತೊಂದರೆ ಎದುರಿಸುತ್ತಿದ್ದಾರೆ.

ತಾಲ್ಲೂಕಿನ ಸಸಾಲಟ್ಟಿ, ಗೋಲಬಾವಿ ಹಾಗೂ ಹನಗಂಡಿ ಗಂಥಾಲಯಗಳಿಗೆ ಅಗತ್ಯ ಇರುವ ದಿನಪತ್ರಿಕೆಗಳ ಬಿಲ್‌ ಅನ್ನು ಗ್ರಾಮ ಪಂಚಾಯಿತಿಗಳು ಪಾವತಿಸದ್ದರಿಂದ ಪತ್ರಿಕೆಗಳ ಸರಬರಾಜು ಸ್ಥಗಿತಗೊಂಡಿದೆ.

ಓದುಗರಿಗಾಗಿ ಹನಗಂಡಿ ಗಂಥಾಲಯದ ಗ್ರಂಥಪಾಲಕ, ತಾವೇ ಪತ್ರಿಕೆಗಳನ್ನು ಖರೀದಿಸಿ ಕೊಡುತ್ತಿದ್ದರೆ, ಸಸಾಲಟ್ಟಿಯವರು ಒಂದು ಪತ್ರಿಕೆ ತರಿಸುತ್ತಿದ್ದಾರೆ. ಇದರಿಂದ ಜನರು ಮಾಹಿತಿ ಸಿಗದೇ ಪರದಾಡುತ್ತಿದ್ದಾರೆ. ಮಾಹಿತಿ, ದೈನಂದಿನ ಆಗು-ಹೋಗುಗಳನ್ನು ತಿಳಿದುಕೊಳ್ಳಲು ಟಿವಿ, ಮೊಬೈಲ್ ಮೊರೆ ಹೋಗುತ್ತಿದ್ದಾರೆ.

ಎಲ್ಲ ಗ್ರಂಥಾಲಯಗಳಿಗೆ ದಿನಪತ್ರಿಕೆ, ವಾರ, ಮಾಸ ಪತ್ರಿಕೆ ಮತ್ತು ನಿಯತಕಾಲಿಕೆಗಳನ್ನು ಸರಬರಾಜು ಮಾಡಿದ ಬಿಲ್‌ ಮೊತ್ತವನ್ನು ಜಿಲ್ಲಾ ಗ್ರಂಥಾಲಯ ಭರಿಸುತ್ತಿತ್ತು. 2019ರಿಂದ ಅದರ ಜವಾಬ್ದಾರಿಯನ್ನು ಆಯಾ ಗ್ರಾಮ ಪಂಚಾಯ್ತಿಗಳಿಗೆ ವಹಿಸಲಾಗಿದೆ. ಪಂಚಾಯಿತಿ ಅಧಿಕಾರಿಗಳು ಬಿಲ್‌ ಪಾವತಿಸದ್ದರಿಂದ ಪತ್ರಿಕೆಗಳ ಸರಬರಾಜು ಮಾಡುತ್ತಿಲ್ಲ. ಪಂಚಾಯಿತಿ ತೆರಿಗೆಯಲ್ಲಿ ಗ್ರಂಥಾಲಯ ಕರ ವಸೂಲು ಮಾಡಲಾಗುತ್ತದೆ. ಆದರೆ, ಅದನ್ನು ಬೇರೆ ಉದ್ದೇಶಕ್ಕೆ ಬಳಸಲಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಈ ಪಂಚಾಯ್ತಿಗೆ ಬಂದು ಒಂದು ವರ್ಷ ಕಳೆಯಿತು. ಗ್ರಂಥಾಲಯಗಳಿಗೆ ಪತ್ರಿಕೆಗಳ ಸರಬರಾಜನ್ನು ನಿಲ್ಲಿಸಲು ಹೇಳಿದ್ದು, ಹಳೆಯ ಪೇಪರ್ ಮಾರಾಟ ಮಾಡಿ ಬಿಲ್ ಭರಿಸಲಾಗುವುದು’ ಎಂದು ಸಸಾಲಟ್ಟಿ ಗ್ರಾಮ ಪಂಚಾಯ್ತಿ ಪಿಡಿಒ ಎನ್.ಎಸ್.ಪತ್ರಿಮಠ ತಿಳಿಸಿದರು.


Spread the love

About Laxminews 24x7

Check Also

ಅಕ್ರಮ ಬೆಟ್ಟಿಂಗ್​​ ಪ್ರಕರಣ: ಶಾಸಕ ಕೆ. ಸಿ. ವೀರೇಂದ್ರ ಇ.ಡಿ. ಕಸ್ಟಡಿ ಅವಧಿ ಸೆ.8ರ ವರೆಗೆ ವಿಸ್ತರಣೆ

Spread the loveಬೆಂಗಳೂರು: ಆನ್​ಲೈನ್ ಹಾಗೂ ಆಫ್​ಲೈನ್ ಮುಖಾಂತರ ಅಕ್ರಮವಾಗಿ ಬೆಟ್ಟಿಂಗ್ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ