Breaking News

ಪತಿಗೆ ಬ್ಯಾಂಕ್‌ನಿಂದ ನೋಟಿಸ್; ಹೆದರಿ ಟಾಯ್ಲೆಟ್‌ನಲ್ಲಿ ಪತ್ನಿ ಆತ್ಮಹತ್ಯೆ

Spread the love

ಮೈಸೂರು: ಪತಿಗೆ ಬ್ಯಾಂಕ್ ನೋಟಿಸ್ (Bank Notice) ಕೊಟ್ಟಿದ್ದಕ್ಕೆ ಹೆದರಿ ಪತ್ನಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ದಾರುಣ ಘಟನೆ ಮೈಸೂರಿನ (Mysuru News) ಸಾಲಿಗ್ರಾಮ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ರಂಗಮ್ಮ (70) ಮೃತ ದುರ್ದೈವಿ.

ಪತಿ ಮಾಡಿದ ಸಾಲಕ್ಕೆ ಬ್ಯಾಂಕ್‌ನವರು ನೋಟಿಸ್ ಕಳುಹಿಸಿದ್ದರು. ಈ ನೋಟಿಸ್‌ಗೆ ಹೆದರಿದ ಪತ್ನಿ ರಂಗಮ್ಮ, ಮನೆಯ ಹಿಂಭಾಗದ ಶೌಚಾಲಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪತಿ ಯಣ್ಣೇಗೌಡ 6 ವರ್ಷಗಳ ಹಿಂದೆ ಹೊಳೆನರಸೀಪುರ ತಾಲೂಕಿನ ಸೋಮನಹಳ್ಳಿಯ ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿ ಜಮೀನು, ಹೊಗೆಸೊಪ್ಪಿನ ಬ್ಯಾರನ್ ಆಧಾರದ ಮೇಲೆ ಸಾಲವನ್ನು ಪಡೆದಿದ್ದರು. ಅಸಲು, ಬಡ್ಡಿಯಿಂದ 8.50 ಲಕ್ಷ ರೂ. ಕಟ್ಟುವಂತೆ ಬ್ಯಾಂಕ್‌ನವರು ನೋಟಿಸ್ ನೀಡಿದ್ದರು.

ಬ್ಯಾಂಕ್‌ ನೋಟಿಸ್‌ಗೆ ಕಂಗಲಾಗಿ ಭಯಗೊಂಡ ರಂಗಮ್ಮ, ಯಾರು ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾರೆ. ಕುಟುಂಬಸ್ಥರು ಶೌಚಾಲಯಕ್ಕೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ರಂಗಮ್ಮ ಪುತ್ರ ಶೆಟ್ಟಿಗೌಡ ಸಾಲಿಗ್ರಾಮ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ


Spread the love

About Laxminews 24x7

Check Also

ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ​ ತೀರ್ಮಾನಕ್ಕೆ ನಾನು ಬದ್ಧ: ಸಿಎಂ

Spread the loveಮೈಸೂರು: “ನಾಯಕತ್ವ ಬದಲಾವಣೆ ವಿಚಾರವಾಗಿ ರಾಹುಲ್​ ಗಾಂಧಿ ಮತ್ತು ಹೈಕಮಾಂಡ್​ ತೀರ್ಮಾನ ಮಾಡಬೇಕು. ಅವರು ಏನು ತೀರ್ಮಾನ ಮಾಡುತ್ತಾರೋ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ