Breaking News

ದಾಂಡೇಲಿ: ಆಯಿಲ್ ಟ್ಯಾಂಕ್ ಗೆ ಬೆಂಕಿ ತಪ್ಪಿದ ಅನಾಹುತ

Spread the love

ದಾಂಡೇಲಿ: ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಗೆ ಫರ್ನಿಶ್ ಆಯಿಲ್ ನ್ನು ತುಂಬಿಕೊಂಡು ಬರುತ್ತಿದ್ದ ಟ್ಯಾಂಕರಿನಲ್ಲಿ ದಾಂಡೇಲಿ ಆಲೂರು ಹತ್ತಿರ ಅಗ್ನಿ ಕಾಣಿಸಿಕೊಂಡಿದೆ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.

ವಿಷಯ ತಕ್ಷಣವೇ ಟ್ಯಾಂಕರ್‌ ನಿಲ್ಲಿಸಿ ಚಾಲಕ ಕೆಳಗಿಳಿದಿದ್ದಾನೆ.

ದಾಂಡೇಲಿ: ಆಯಿಲ್ ಟ್ಯಾಂಕ್ ಗೆ ಬೆಂಕಿ ತಪ್ಪಿದ ಅನಾಹುತ

ಸ್ಥಳಕ್ಕೆ ಆಗಮಿಸಿದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಿಂದಿಸಿದ್ದಾರೆ .

ಟ್ಯಾಂಕರ್ ವಾಹನದ ಮುಂಭಾಗಕ್ಕೆ ಸಂಪೂರ್ಣ ಹಾನಿಯಾಗಿದ್ದು, ಫರ್ನಿಶ್ ಆಯಿಲ್ ತುಂಬಿಕೊಂಡಿದ್ದ ಕಡೆ ಬೆಂಕಿ ಆವರಿಸುವ ಸಾಧ್ಯತೆ ಇತ್ತಾದರೂ, ಅಗ್ನಿಶಾಮಕ‌ ಸಿಬ್ಬಂದಿ ಸಮಯ ಪ್ರಜ್ಞೆಯಿಂದಾಗಿ ಬಾರಿ ಅನಾಹುತವೊಂದು ತಪ್ಪಿದೆ.

ಘಟನೆ ನಡೆದ ಸಂದರ್ಭದಲ್ಲಿ ಅದೇ ರಸ್ತೆಯಲ್ಲಿ ಹೋಗುತ್ತಿದ್ದ ದಾಂಡೇಲಿಯ ವಲಯಾರಣ್ಯಾಧಿಕಾರಿ ಅಪ್ಪಾರಾವ್ ಕಲಶೆಟ್ಟಿಯವರು ತಕ್ಷಣವೇ ಸಂಬಂಧಪಟ್ಟವರಿಗೆ ಮಾಹಿತಿಯನ್ನು ನೀಡಿದ್ದಾರೆ. ಘಟನಾ ಸ್ಥಳಕ್ಕೆ ದಾಂಡೇಲಿ ಗ್ರಾಮೀಣ ಪೊಲೀಸರು ಭೇಟಿ ನೀಡಿ, ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.


Spread the love

About Laxminews 24x7

Check Also

2 ವರ್ಷಗಳಿಂದ ಆರಂಭವಾಗದ ಶುದ್ಧ ನೀರಿನ ಘಟಕಗಳು

Spread the loveಹಾವೇರಿ: ನಗರದ ನಿವಾಸಿಗಳಿಗೆ ಶುದ್ಧ ಕುಡಿಯುವ ನೀರು ಸಿಗಲಿ ಎಂದು ಶಾಸಕರ ಅನುದಾನದಲ್ಲಿ ಆರು ಶುದ್ಧ ಕುಡಿಯುವ ನೀರಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ