Breaking News

ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ಆಸ್ತಿ ಏರಿಕೆ ಬಗ್ಗೆಯೂ ಸ್ಪಷ್ಟನೆ ಕೊಟ್ಟ ರಮೇಶ ಜಿಗಜಿಣಗಿ

Spread the love

ವಿಜಯಪುರ, ಫೆ.26:ಲೋಕಸಭೆ ಚುನಾವಣೆಗೆ(Lok Sabha Election 2024) ಅಣಿಯಾಗುತ್ತಿರುವ ಬಿಜೆಪಿ (BJP) ಹೈಕಮಾಂಡ್ ಮತ್ತೊಮ್ಮೆ ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ರಣತಂತ್ರಗಳನ್ನು ರೂಪಿಸುತ್ತಿದೆ. ಇದರ ಜೊತೆಗೆ ಅಭ್ಯರ್ಥಿಗಳ ಆಯ್ಕೆಗೆ ಕಸರತ್ತು ನಡೆಸುತ್ತಿದೆ. ಕರ್ನಾಟಕದಲ್ಲೂ ಬಿಜೆಪಿ-ಜೆಡಿಎಸ್ ಮೈತ್ರಿ ಹಿನ್ನೆಲೆ ಸೀಟು ಹಂಚಿಕೆ ಮಾತುಕತೆ ನಡೆಯುತ್ತಿದೆ. ಅದರಂತೆ, ಈ ಬಾರಿ ಬಿಜೆಪಿ ವಿಜಯಪುರ (Vijayapur) ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಷೇತ್ರದ ಹಾಲಿ ಸಂಸದ ರಮೇಶ್ ಜಿಗಜಿಣಗಿ (Ramesh Jigajinagi) ವಿಜಯಪುರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ ಎಂದು ಘೋಷಿಸಿದ್ದಾರೆ.

ವಿಜಯಪುರ ಬಿಜೆಪಿ ಅಭ್ಯರ್ಥಿ ನಾನೇ, ಆಸ್ತಿ ಏರಿಕೆ ಬಗ್ಗೆಯೂ ಸ್ಪಷ್ಟನೆ ಕೊಟ್ಟ ರಮೇಶ ಜಿಗಜಿಣಗಿ

ವಿಜಯಪುರ ಕೇಂದ್ರ ರೆಲ್ವೆ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಂದಾಜು ಒಂದು ಲಕ್ಷ ಕೋಟಿ ಅನುದಾನ ವಿಜಯಪುರ ಕ್ಷೇತ್ರಕ್ಕೆ ತಂದಿದ್ದೇನೆ. ಎಸ್​ಸಿ ಮೀಸಲು ವಿಜಯಪುರ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ನಾನೇ. ಈ ಬಗ್ಗೆ ಪಕ್ಷದಿಂದ ಸೂಚನೆ ಬಂದಿದೆ. ಮೈತ್ರಿ ಹಿನ್ನೆಲೆ ವಿಜಯಪುರವನ್ನ ಜೆಡಿಎಸ್​​ನವರೂ ಕೇಳುತ್ತಾರೆ. ಆದರೆ, ನಮ್ಮವರು ಯಾವ ಕಾಲಕ್ಕೂ ಕ್ಷೇತ್ರ ಬಿಟ್ಟುಕೊಡುವುದಿಲ್ಲ. ನನಗೆ ಈ ಭಾಗದ ಜನ ವೋಟ್ ಹಾಕುತ್ತಾರೆ ಅನ್ನೋ ವಿಶ್ವಾಸವಿದೆ ಎಂದರು. ಅಲ್ಲದೆ, ಒಂದು ವೇಳೆ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಟ್ಟರೆ ಪ್ರಚಾರ ಮಾಡುತ್ತೇನೆ ಎಂದರು.

ರಮೇಶ ಜಿಗಜಿಣಗಿ ಆಸ್ತಿಯಲ್ಲಿ ಬಾರೀ ಏರಿಕೆ

ರಮೇಶ್ ಜಿಗಜಿಣಗಿ ಆಸ್ತಿಯಲ್ಲಿ ಬಾರೀ ಏರಿಕೆಯಾಗಿದೆ. 2004 ರಲ್ಲಿ 54.80 ಲಕ್ಷ ರೂಪಾಯಿ ಇದ್ದ ಆಸ್ತಿ 2019 ರ ವೇಳೆಗೆ 50.41 ಕೋಟಿ ರೂ.ಗೆ ಏರಿಕೆಯಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಿಗಜಿಣಗಿ, ಮಾಧ್ಯಮಗಳಲ್ಲಿ ವರದಿಯಾಗಿದ್ದಕ್ಕಿಂತ ಆಸ್ತಿ ಹೆಚ್ಚಿದೆ. ನೀವು ಮಾಧ್ಯಮದವರು ದಡ್ಡರು, ಆಸ್ತಿ ವಿವರ ಬಹಳ ಕಡಿಮೆ ಬರೆದಿದ್ದೀರಿ. ನಿಮ್ಮ ಮನೆ ಮೂರು ಸಾವಿರಕ್ಕೆ ತಗೊಂಡಿದ್ದೀರಿ, ಈಗ ಅದು ಒಂದೂವರೆ ಕೋಟಿ ಆಗಿದೆ. ಹೀಗೆ ನನ್ನ ಆಸ್ತಿಯಲ್ಲಿ ಹೆಚ್ಚಳವಾಗಿದೆ ಎಂದರು.


Spread the love

About Laxminews 24x7

Check Also

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕುಮಾರಧಾರ ನದಿಗೆ ತ್ಯಾಜ್ಯ ಬಿಸಾಡಿದರೆ ಬೀಳುತ್ತೆ ದಂಡ

Spread the loveಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆಯ ಕುಮಾರಧಾರ ನದಿಯ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿ ಹಾಗೂ ಪೊಲೀಸ್ ಇಲಾಖೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ