Breaking News

ಗದಗ ನಗರಸಭೆ ಯಡವಟ್ಟು, ಜೀವಂತವಾಗಿದ್ದರೂ ಬಡ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ,

Spread the love

ಮ್ಮದೇ ಮರಣ ಪ್ರಮಾಣ ಪತ್ರವನ್ನು ಕೈಯಲ್ಲಿ ಹಿಡಿದು ಅಲೆಯುತ್ತಿರೋ ಬಡ ಕುಟುಂಬ.. ಗದಗ ಬೆಟಗೇರಿ ನಗರಸಭೆ ಅಧಿಕಾರಿಗಳ ಮಹಾ ಯಡವಟ್ಟಿನಿಂದ ಆ ಬಡ ಕುಟುಂಬ ಕಂಗಾಲು.. ಮನೆ ಯಜಮಾನನ ಕಿಲಾಡಿ ಬುದ್ದಿಗೆ ನಲುಗಿದ ಬಡ ಕುಟುಂಬ ಸದಸ್ಯರು. ಹೌದು ಈ ಎಲ್ಲಾ ವಿದ್ಯಮಾನಗಳು ಕಾಣಸಿಗೋದು ಗದಗ ನಗರದ ಖಾನತೋಟದಲ್ಲಿ…

ಆ ಮನೆಯ ಯಜಮಾನ ಮಾಡಿರುವ ಘನಂದಾರಿ ಕೆಲಸಕ್ಕೆ ಇಡೀ ಕುಟುಂಬ ವಿಲವಿಲ ಅಂತಿದೆ. ಹೌದು ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಪಡೆದುಕೊಂಡು, 12 ವರ್ಷಗಳಿಂದ ನಾಪತ್ತೆಯಾಗಿದ್ದಾನೆ ಪತಿರಾಯ. ಇದಕ್ಕೆ ಗದಗ ಬೆಟಗೇರಿ ನಗರಸಭೆಯೂ ಸಾಥ್​ ನೀಡಿದ್ದು, ಜೀವಂತವಿರುವವರಿಗೇ ಮರಣ ಪ್ರಮಾಣ ಪತ್ರ ನೀಡುವ ಮೂಲಕ ಮಹಾ ಯಡವಟ್ಟು ಮಾಡಿಟ್ಟಿದೆ. ಹೀಗಾಗಿ ಜೀವಂತವಾಗಿಯೇ ಇದ್ದರು ಕೂಡಾ ದಾಖಲೆಗಳಲ್ಲಿ ಸಾವನ್ನಪ್ಪಿರುವ ಬಡ ಕುಟುಂಬ ಪರದಾಟ ನಡೆಸಿದೆ.

ಗದಗ ನಗರಸಭೆ ಯಡವಟ್ಟು, ಜೀವಂತವಾಗಿದ್ದರೂ ಬಡ ಕುಟುಂಬದವರಿಗೆ ಮರಣ ಪ್ರಮಾಣ ಪತ್ರ, ಪೊಲೀಸರಿಂದಲೂ ಕಿರುಕುಳದ ಆರೋಪ

ಗದಗ ನಗರದ ಖಾನತೋಟ ನಿವಾಸಿಯಾದ ತಿಪ್ಪಣ್ಣ ಲಕ್ಕುಂಡಿ ತನ್ನ ಪತ್ನಿ, ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಮರಣ ಪ್ರಮಾಣ ಪತ್ರವನ್ನು ಹುಟ್ಟು ಹಾಕಿದ್ದಾನೆ. ವಿಚಿತ್ರ ಅಂದ್ರೆ, ಈ ತಿಪ್ಪಣ್ಣ ಲಕ್ಕುಂಡಿ 12 ವರ್ಷಗಳಿಂದ ಪತ್ನಿ ಮಕ್ಕಳನ್ನು ಬಿಟ್ಟು ನಾ ಪತ್ತೆಯಾಗಿಬಿಟ್ಟಿದ್ದಾನೆ. ತಿಪ್ಪಣ್ಣ ಪತ್ನಿ ದ್ರಾಕ್ಷಾಯಣಿ 2004 ರಲ್ಲಿ ಸಾವನ್ನಪ್ಪಿದ್ದಾಳೆ ಎಂದು ಮರಣ ಪ್ರಮಾಣ ಪತ್ರವನ್ನು ಹುಟ್ಟು ಹಾಕಲಾಗಿದೆ. ಹಾಗೆಯೇ ಇಬ್ಬರು ಮಕ್ಕಳಾದ ಅಶೋಕ ಹಾಗೂ ಕಲ್ಲಪ್ಪ ಎನ್ನುವವರು ಕೂಡಾ ಸಾವನ್ನಪ್ಪಿದ್ದಾರೆ ಎಂದು ಅವರ ಹೆಸರಿನಲ್ಲಿಯೂ ಕೂಡಾ ಮರಣ ಪ್ರಮಾಣ ಪತ್ರವನ್ನು ಸೃಷ್ಟಿಸಲಾಗಿದೆ. ಈ ಮಧ್ಯೆ ಮನೆ ಜಪ್ತಿ ಮಾಡುತ್ತೇವೆ ಎಂದು ಪೊಲೀಸರು ಮನೆಗೆ ಬರ್ತಾರಂತೆ. ಹೀಗಾಗಿ ನೊಂದ ಕುಟುಂಬ ಕಂಗಾಲಾಗಿದೆ.

ಇನ್ನು ಗದಗ ನಗರದಲ್ಲಿ ಮನೆಗಳಿಗೆ ಸಾಕಷ್ಟು ಬೇಡಿಕೆಯಿದೆ. ಈ ಭಾಗದಲ್ಲಿ ಮನೆಗಳು ಕೋಟ್ಯಾಂತರ ರೂಪಾಯಿ ಮೌಲ್ಯದಲ್ಲಿ ಮಾರಾಟ ಆಗುತ್ತವೆ. ಹಾಗಅಗಿ ಈ ಅನಕ್ಷರಸ್ಥ ಹಾಗೂ ಬಡ ಕುಟುಂಬ ಸದಸ್ಯರಿಗೆ ಮೋಸ ಮಾಡಲು ಯಾರಾದರೂ ಹುನ್ನಾರ ನಡೆಸಿದ್ದಾರೆಯಾ ಎನ್ನುವ ಅನುಮಾನ ಕೂಡಾ ಕಾಡ್ತಾಯಿದೆ. ಇನ್ನು ಒಂದು ಕಡೆ ಮರಣ ಪ್ರಮಾಣ ಪತ್ರವನ್ನು ನೀಡಿರುವ ಸರ್ಕಾರ, ಈ ಕುಟುಂಬಕ್ಕೆ ಪಡಿತರ ಚೀಟಿ, ವೋಟರ್ ಐಡಿ ಕೂಡಾ ದಯಪಾಲಿಸಿದೆ‌. ಗದಗ ಶಹರ ಪೊಲೀಸರು ಮನೆಗೆ ಬಂದಾಗ ವಾಸ್ತವ ಅರಿವಾಗಿದೆ. ತಕ್ಷಣ ಮನೆಯವರು ನಗರಸಭೆಗೆ ಹೋಗಿ ದಾಖಲೆಗಳನ್ನು ಪರಿಶೀಲನೆ ಮಾಡಿದಾಗ, ಈ ವಿಚಾರ ಬೆಳೆಕಿಗೆ ಬಂದಿದೆ. ನಗರಸಭೆ ಯಡವಟ್ಟಿನಿಂದ ನಾವು ಬದುಕಿದ್ದರೂ, ದಾಖಲೆಗಳಲ್ಲಿ ಸಾವನ್ನಪ್ಪಿರುವುದಾಗಿ ಮರಣ ಪ್ರಮಾಣ ಪತ್ರ ನೀಡಿದ್ದಾರೆ ಎಂದು ಆ ಸಂಸಾರಸ್ಥರು ಗೋಳಾಟ ನಡೆಸಿದ್ದಾರೆ. ಇನ್ನಾದ್ರು ಹಿರಿಯ ಅಧಿಕಾರಿಗಳು ನಗರಸಭೆ ವಿರುದ್ಧ ಸೂಕ್ತವಾದ ಕ್ರಮ ಕೈಗೊಳ್ಳಬೇಕಾಗಿದೆ.


Spread the love

About Laxminews 24x7

Check Also

ಅಕ್ರಮ ಬೆಟ್ಟಿಂಗ್​​ ಪ್ರಕರಣ: ಶಾಸಕ ಕೆ. ಸಿ. ವೀರೇಂದ್ರ ಇ.ಡಿ. ಕಸ್ಟಡಿ ಅವಧಿ ಸೆ.8ರ ವರೆಗೆ ವಿಸ್ತರಣೆ

Spread the loveಬೆಂಗಳೂರು: ಆನ್​ಲೈನ್ ಹಾಗೂ ಆಫ್​ಲೈನ್ ಮುಖಾಂತರ ಅಕ್ರಮವಾಗಿ ಬೆಟ್ಟಿಂಗ್ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ