Breaking News

ಸಿಎಂ, ಡಿಸಿಎಂ ರನ್ನು ಭೇಟಿಯಾದ ಜನಾರ್ಧನ ರೆಡ್ಡಿ – ರಾಜ್ಯಸಭಾ ಚುನಾವಣೆಗೆ ಬೆಂಬಲ!

Spread the love

ಬೆಂಗಳೂರು : ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ (DCM D K Shivakumar) ಅವರನ್ನು ಶಾಸಕ ಜನಾರ್ಧನ ರೆಡ್ಡಿ (Gali Janardhan reddy) ಭೇಟಿಯಾಗಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ (Rajyasabha election) ಕಾಂಗ್ರೆಸ್‌ (Congress) ಗೆ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ (Kalyan rajya pragati party) ಬೆಂಬಲ ಸೂಚಿಸುವ ಹಿನ್ನೆಲೆಯಲ್ಲಿ ಈ ಭೇಟಿ ನಡೆದಿದೆಯೆನ್ನಲಾಗಿದೆ.

 

ಫೆ. 27 ರಂದು ರಾಜ್ಯಸಭಾ ಚುನಾವಣೆ ನಡೆಯಲಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸುವಂತೆ ಕಾಂಗ್ರೆಸ್‌ ಪಕ್ಷವು ಎರಡು ದಿನಗಳ ಹಿಂದಷ್ಟೇ ಜನಾರ್ಧನ ರೆಡ್ಡಿಯವರನ್ನು ಸಂಪರ್ಕಿಸಿತ್ತು. ನಮ್ಮಲ್ಲಿ ಜನಾರ್ಧನ ರೆಡ್ಡಿ ಸೇರಿದಂತೆ 139 ಶಾಸಕರಿದ್ದಾರೆ ಎಂದು ಡಿಕೆಶಿ ಹೇಳಿಕೆ ನೀಡಿದ್ದರು.

ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಚುನಾವಣೆ ನಡೆಯಲಿದ್ದು, ಐವರು ಅಭರ್ಥಿಗಳು ಕಣದಲ್ಲಿದ್ದಾರೆ. ಕಾಂಗ್ರೆಸ್‌ ಪಕ್ಷದಿಂದ ಅಜಯ್‌ ಮಾಕನ್‌, ಸೈಯದ್‌ ನಾಸಿರ್‌ ಹುಸೇನ್‌, ಜಿಸಿ ಚಂದ್ರಶೇಖರ್‌ , ಬಿಜೆಪಿಯಿಂದ ನಾರಾಯಣ ಭಾಂಡಗೆ ಮತ್ತು ಜೆಡಿಎಸ್‌ ಪಕ್ಷದಿಂದ ಕುಪೇಂದ್ರ ರೆಡ್ಡಿ ಕಣದಲ್ಲಿದ್ದಾರೆ.


Spread the love

About Laxminews 24x7

Check Also

ಅಕ್ರಮ ಬೆಟ್ಟಿಂಗ್​​ ಪ್ರಕರಣ: ಶಾಸಕ ಕೆ. ಸಿ. ವೀರೇಂದ್ರ ಇ.ಡಿ. ಕಸ್ಟಡಿ ಅವಧಿ ಸೆ.8ರ ವರೆಗೆ ವಿಸ್ತರಣೆ

Spread the loveಬೆಂಗಳೂರು: ಆನ್​ಲೈನ್ ಹಾಗೂ ಆಫ್​ಲೈನ್ ಮುಖಾಂತರ ಅಕ್ರಮವಾಗಿ ಬೆಟ್ಟಿಂಗ್ ನಡೆಸಿದ ಆರೋಪದಡಿ ಜಾರಿ ನಿರ್ದೇಶನಾಲಯ (ಇ.ಡಿ) ಅಧಿಕಾರಿಗಳಿಂದ ಬಂಧನಕ್ಕೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ