Breaking News

ಆಂಧ್ರ ರಾಜಕೀಯಲ್ಲಿ ‘ಕಂಡೋಮ್​’ ಸದ್ದು

Spread the love

ಮರಾವತಿ: ಆಂಧ್ರ ಪ್ರದೇಶದ (Andhra Pradesh) ರಾಜಕೀಯ ಯಾವಾಗಲೂ ಹಾಟ್ ಆಗಿರುತ್ತೆ, ಈಗ ಲೋಕಸಭಾ (Lok Sabha Election) ಮತ್ತು ವಿಧಾನಸಭಾ ಚುನಾವಣೆಗಳು (Assembly Election) ಏಕಕಾಲದಲ್ಲಿ ನಡೆಯುವುದರಿಂದ ರಾಜಕೀಯ ಮತ್ತಷ್ಟು ಹಾಟ್​ ಆಗಿದೆ. ಅದರಲ್ಲೂ ಸಾಮಾಜಿಕ ಜಾಲತಾಣದಲ್ಲಿ (Social Media) ಮಹಿಳೆಯವರು ನಾಚಿಕೆಯಿಂದ ಸಾಮಾಜಿಕ ಜಾಲತಾಣ ಬಳಕೆಯನ್ನೇ ಕಡಿಮೆ ಮಾಡುವ ಮಟ್ಟಕ್ಕೆ ಇಳಿದಿದೆ.

ಕಂಡೋಮ್ ಪ್ಯಾಕೇಟ್​ಗಳನ್ನು ಬಿಡದೆ ಆಂಧ್ರ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಈ ಕುರಿತ ಕೆಲ ಫೋಟೋಗಳು (Photo) ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ರಾಜಕೀಯ ಪಕ್ಷಗಳ ಪ್ರಚಾರಗಳ ಗಿಮಿಕ್​​ಗಳು ಜನಸಾಮಾನ್ಯರಿಗೆ ಬೇಸರ ತರಿಸುತ್ತಿವೆ ಎಂದು ಹಲವು ನೆಟ್ಟಿಗರು ಪ್ರತಿಕ್ರಿಯೆಗಳನ್ನು ನೀಡ್ತಿದ್ದಾರೆ.

ಆಂಧ್ರ ರಾಜಕೀಯಲ್ಲಿ 'ಕಂಡೋಮ್​' ಸದ್ದು; ಕೆಳಮಟ್ಟಕ್ಕೆ ಇಳಿದ ರಾಜಕೀಯ ಪಕ್ಷಗಳ ಚೀಪ್‌ ಪಬ್ಲಿಸಿಟಿ

ಟಿಡಿಪಿ ವಸರ್ಸ್ ವೈಎಸ್​ಆರ್​ಸಿಪಿ

ಅದರಲ್ಲಿ ಆಡಳಿತರೂಢ ಪಕ್ಷ ವೈಎಸ್​ಆರ್​​ಸಿಪಿ ಪಕ್ಷ ಹಾಗೂ ಟಿಡಿಪಿ ಪಕ್ಷಗಳ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾರ್​ ಜೋರಾಗಿದೆ. ವೈಎಸ್​​ಆರ್​ಸಿಪಿ ಪಕ್ಷದ ಚಿಹ್ನೆ ಹೊಂದಿರುವ ಕಂಡೋಮ್​​ ಪ್ಯಾಕೇಟ್​ಅನ್ನು ಟಿಡಿಪಿ ಪಕ್ಷದ ಕಾರ್ಯಕರ್ತರು ಶೇರ್ ಮಾಡಿದರೆ, ಟಿಡಿಪಿ ಪಕ್ಷದ ಚಿಹ್ನೆಯನ್ನು ಹೊಂದಿರುವ ಕಂಡೋಮ್ ಪ್ಯಾಕೇಟ್​ ಅನ್ನು ಎದುರಾಳಿ ಪಕ್ಷದ ಕಾರ್ಯಕರ್ತರು ಶೇರ್ ಮಾಡಿ ಟ್ರೋಲ್ ಮಾಡ್ತಿದ್ದಾರೆ.

 


Spread the love

About Laxminews 24x7

Check Also

ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ ‌ತನಿಖೆಯನ್ನು ನಡೆಸಬೇಕೆಂದು ಆಗ್ರಹಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘಗಳ ಮಹಾಸಂಘ ಪ್ರತಿಭಟನೆ

Spread the loveಬೆಳಗಾವಿ ;ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿಯ ಮಲಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದ ಅವ್ಯವಹಾರ ಹಾಗೂ ಭ್ರಷ್ಟಾಚಾರದ ಸಂಪೂರ್ಣ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ