Breaking News

ಸಿಎಂಗೆ ಅಮ್ಮಾ.. ತಾಯಿ ಅಂತಾ ಬೇಡುವ ಸ್ಥಿತಿ ಉದ್ಭವವಾಗಿದೆ: ಹೆಚ್‌ಡಿಕೆ ವ್ಯಂಗ್ಯ

Spread the love

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ (Chief Minister) ಅಮ್ಮಾ.. ತಾಯಿ.. ಅಂತಾ ದಯನೀಯ ಸ್ಥಿತಿಯಲ್ಲಿ ಬೇಡುವ ಸನ್ನಿವೇಶ ಉದ್ಭವವಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ವ್ಯಂಗ್ಯವಾಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಗೌರವ ಎಲ್ಲಿಗೆ ತೆಗೆದುಕೊಂಡು ಹೋಗ್ತಿದ್ದಾರೆ?

ಈ ರಾಜ್ಯದ ಸರ್ಕಾರವನ್ನು ಭಿಕ್ಷುಕರ ಸರ್ಕಾರವನ್ನಾಗಿ ಮಾಡಲು ಹೊರಟಿದ್ದಿರಾ? ಕೆಲವರು ಮನೆಗಳ ಮುಂದೆ ಹೋದಾಗ ರಾತ್ರಿ ಊಟ ಉಳಿದಿದ್ರೆ ಕೊಡಿ ಅಂತಾ ಭಿಕ್ಷೆ ಕೇಳ್ತಾರೆ, ಅದೇ ರೀತಿ ಸಿಎಂ ಕೇಳ್ತಿದ್ದಾರೆ ಎಂದು ಟೀಕಿಸಿದರು.

HD KUMARASWAMY: ಸಿಎಂಗೆ ಅಮ್ಮಾ.. ತಾಯಿ ಅಂತಾ ಬೇಡುವ ಸ್ಥಿತಿ ಉದ್ಭವವಾಗಿದೆ: ಹೆಚ್‌ಡಿಕೆ ವ್ಯಂಗ್ಯ

ಹಸಿವನ್ನ ನೀಗಿಸಿಕೊಳ್ಳಲು ಹೋಗುವ ಜನ ಅಮ್ಮಾ.. ತಾಯಿ ಕೊಡಿ ಅಂತಾ ಕೇಳ್ತಾರೆ. ವಿಧಾನಪರಿಷತ್‌ನಲ್ಲಿ ಅಮ್ಮಾ.. ತಾಯಿ.. 6 ಸಾವಿರ ಕೋಟಿ ಕೊಡು ತಾಯಿ ಅಂತ ಬೇಡ್ತಾ ಸಿಎಂ ಪ್ರಸ್ತಾಪ ಮಾಡಿದ್ದಾರೆ ಎಂದು ಲೇವಡಿ ಮಾಡಿದರು.

ಕರ್ನಾಟಕ ಸಂಪತ್ ಭರಿತ ರಾಜ್ಯ. ಹಣದ ಕೊರತೆಯಿಲ್ಲ, ರಸ್ತೆ ತೆರಿಗೆ ಆದಾಯ ವಿಚಾರದಲ್ಲಿ ಕರ್ನಾಟಕ ದೇಶದಲ್ಲೇ ನಂ.1 ಸ್ಥಾನದಲ್ಲಿದೆ. ಸ್ವಂತ ಟ್ಯಾಕ್ಸ್ ಕಲೆಕ್ಟ್ ಮಾಡೋದ್ರಲ್ಲಿ ಮೊದಲನೆ ಸ್ಥಾನದಲ್ಲಿದ್ದೇವೆ. ಆದ್ರೆ ನಿಮ್ಮ ಲೂಟಿಯ ದಾಹಕ್ಕೆ ರಾಜ್ಯದ ಖಜಾನೆ ಖಾಲಿ ಮಾಡ್ತಿದ್ದೀರಾ? ಕೇಂದ್ರ ಸರ್ಕಾರದ ಮುಂದೆ ಪದೇ ‌ಪದೇ ಕೆದಕಿಕೊಂಡು ಹೋಗ್ತಾ ಇದ್ದೀರಿ. ಇದು ರಾಜ್ಯದ ಜನತೆಗೆ ಅವಮಾನ. ಇದು ಸಿಎಂಗೆ ಶೋಭೆ ತರುವಂತದಲ್ಲ ಎಂದು ವಾಗ್ದಾಳಿ ನಡೆಸಿದರು.


Spread the love

About Laxminews 24x7

Check Also

ಕೆಎಸ್ಆರ್​ಟಿಸಿಯಲ್ಲಿ ಲಂಚಾವತಾರಗೂಗಲ್ ಪೇ, ಫೋನ್ ಪೇ ಮೂಲಕ ಲಂಚ ಪಡೆದ ಅಧಿಕಾರಿಗಳು!

Spread the loveಬೆಂಗಳೂರು, ಆಗಸ್ಟ್ 25: ಈ ಹಿಂದೆ ಬಿಎಂಟಿಸಿಯಲ್ಲಿ ಕರ್ತವ್ಯ ವಹಿಸಲು ಅಧಿಕಾರಿಗಳು ಚಾಲಕ, ನಿರ್ವಾಹಕರಿಂದ ಲಕ್ಷಾಂತರ ರೂಪಾಯಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ