Breaking News

ಚನ್ನಮ್ಮನ ಕಿತ್ತೂರು: ‘ನಾನೂ ರಾಣಿ ಚನ್ನಮ್ಮ’ ರಾಷ್ಟ್ರೀಯ ಸಮಾವೇಶ

Spread the love

ನ್ನಮ್ಮನ ಕಿತ್ತೂರು (ಬೆಳಗಾವಿ ಜಿಲ್ಲೆ): ಕಿತ್ತೂರು ರಾಣಿ ಚನ್ನಮ್ಮ ಬ್ರಿಟಿಷರ ವಿರುದ್ಧ ವಿಜಯ ಸಾಧಿಸಿ 200 ವರ್ಷಗಳು ತುಂಬಿವೆ. ಇದರ ಪ್ರಯುಕ್ತ ಬುಧವಾರ (ಫೆಬ್ರುವರಿ 21) ಇಲ್ಲಿಯ ಕೋಟೆ ಆವರಣದಲ್ಲಿ ‘ನಾನೂ ರಾಣಿ ಚನ್ನಮ್ಮ’ ಎಂಬ ಅಭಿಯಾನದಡಿ ಒಂದು ದಿನದ ರಾಷ್ಟ್ರೀಯ ಮಹಿಳಾ ಸಮಾವೇಶ ನಡೆಯಲಿದೆ.

 

‘ಸಮಾವೇಶಕ್ಕಾಗಿ ಕೋಟೆ ಆವರಣದೊಳಗೆ ಬೃಹತ್ ವೇದಿಕೆ ಸಿದ್ಧಗೊಂಡಿದೆ. ದೇಶದ ವಿವಿಧ ರಾಜ್ಯಗಳಿಂದ 2,000ಕ್ಕೂ ಹೆಚ್ಚು ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ’ ಎಂದು ಸಂಘಟಕರು ತಿಳಿಸಿದ್ದಾರೆ.

ಬೆಳಿಗ್ಗೆ 9ಕ್ಕೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ರಾಣಿ ಚನ್ನಮ್ಮ ವರ್ತುಲದಿಂದ ಕೋಟೆ ಆವರಣದವರೆಗೆ ಜ್ಯೋತಿ ಮೆರವಣಿಗೆ ನಡೆಯಲಿದೆ. ನಂತರ 10.30ಕ್ಕೆ ವಸ್ತು ಪ್ರದರ್ಶನ ಉದ್ಘಾಟನೆ ಮತ್ತು ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ವಂದನೆ ನಡೆಯಲಿದೆ. 11 ರಿಂದ 12.30 ಗಂಟೆಯವರೆಗೆ ಉಪನ್ಯಾಸ ಮಾಲಿಕೆ ನಡೆಯಲಿದೆ.

‘ಮಹಾರಾಷ್ಟ್ರದ ಮೇಘಾ ಪನ್ಸಾರೆ, ಆನಿ ರಾಜಾ, ಅಖಿಲ ಭಾರತ ದಲಿತ ಮಹಿಳಾ ಅಧಿಕಾರ ಮಂಚ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿರಾಮಿ ಜ್ಯೋತಿ, ಸಾಮಾಜಿಕ ಕಾರ್ಯಕರ್ತೆ ದೆಹಲಿಯ ಶಬ್ನಮ್ ಹಶ್ಮಿ, ಸಾಮಾಜಿಕ ಕಾರ್ಯಕರ್ತೆಯರಾದ ಲೀನಾ ಡಬಿರು, ರುತ್ ಮನೋರಮಾ, ತೆಲಂಗಾಣದ ಮೀರಾ ಸಂಘಮಿತ್ರ, ರಾಜಸ್ಥಾನದ ನಿಶಾ ಸಿದ್ದು, ಡಾ.ಎಚ್.ಎಸ್. ಅನುಪಮಾ, ಬಾನು ಮುಷ್ತಾಕ್, ಮಾಲತಿ ಪಟ್ಟಣಶೆಟ್ಟಿ, ಸಬಿಹಾ ಭೂಮಿಗೌಡ, ಮೀನಾಕ್ಷಿ ಬಾಲಿ, ಸಬಿತಾ ಬನ್ನಾಡಿ, ಅಖಿಲಾ ವಿದ್ಯಾಸಂದ್ರ, ಸುಶೀಲಾ, ಶೈಲಜಾ ಹಿರೇಮಠ ಶಾಂತಲಾ ದಾಮ್ಲೆ, ರೋಹಿಣಿ ಪಾಟೀಲ ಸಮಾವೇಶದಲ್ಲಿ ಭಾಗವಹಿಸುವರು’ ಎಂದು ಸಂಘಟಕರು ತಿಳಿಸಿದ್ದಾರೆ.

 ಕಿತ್ತೂರಿನ ರಾಣಿ ಚನ್ನಮಾಜಿ ಪುತ್ಥಳಿ

 ಚನ್ನಮ್ಮನ ಕಿತ್ತೂರು ಕೋಟೆ ಆವರಣದೊಳಗೆ ನಡೆಯುವ ರಾಷ್ಟ್ರೀಯ ಮಹಿಳಾ ಸಮಾವೇಶಕ್ಕೆ ಸಿದ್ಧಗೊಳ್ಳುತ್ತಿರುವ ವೇದಿಕೆ


Spread the love

About Laxminews 24x7

Check Also

ಭೋವಿ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಅಧ್ಯಕ್ಷ ರವಿಕುಮಾರ್‌ ಕೊನೆಗೂ ರಾಜೀನಾಮೆ

Spread the loveಬೆಂಗಳೂರು, (ಸೆಪ್ಟೆಂಬರ್ 05): ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (Bhovi Development Corporation) ಅಧ್ಯಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ