Breaking News

ಶಿವಾಜಿಯವರ 36 ಬಾಡಿಗಾರ್ಡ್​ಗಳಲ್ಲಿ 13 ಜನ ಮುಸ್ಲಿಂ ಇದ್ರು: ಸಂತೋಷ್ ಲಾಡ್

Spread the love

ಹುಬ್ಬಳ್ಳಿ, : ಛತ್ರಪತಿ ಶಿವಾಜಿ ಮಹರಾಜರ (Chhatrapati Shivaji Maharaj) 36 ಬಾಡಿಗಾರ್ಡ್​​ಗಳಲ್ಲಿ 13 ಜನ ಮುಸ್ಲಿಂ ಬಾಡಿಗಾರ್ಡ್​​ಗಳಿದ್ದರು ಎಂದು ಸಚಿವ ಸಂತೋಷ್ ಲಾಡ್(Santosh Lad)​​ ಹೇಳಿದ್ದಾರೆ.

ನಗರದ ಮರಾಠಾ ಗಲ್ಲಿಯಲ್ಲಿ ನಡೆದ ಶಿವಾಜಿ ಮಹರಾಜರ 397 ಜಯಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ಮಹರಾಜರು ಮುಸ್ಲಿಂ ವಿರೋಧಿ ಅಲ್ಲ. ಇತಿಹಾಸವನ್ನು ಇವತ್ತು ಯಾರ ಹೇಗೆಬೇಕಾದರೂ ಹೇಳಬಹುದು.

60 ಸಾವಿರ ಮುಸ್ಲಿಂರು ಶಿವಾಜಿ ಸೈನ್ಯದಲ್ಲಿ ಇದ್ದರು. ಭಗವಾ ಕಲರ್ ಶಿವಾಜಿ ಮಹರಾಜರದು. ವೇದಿಕೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ಇರುವಾಗಲೇ ಭಗವಾ ಕಲರ್ ಯಾರದೂ ಅಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ನಾನೊಬ್ಬ ಮರಾಠಾ ಎಂದು ಹೇಳಿಕೊಳ್ಳಲು ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ನನಗೆ ಬಸವಣ್ಣ ಬೇಕು, ರಾಮ ಬೇಕು, ರಹೀಮ್ ಬೇಕು. ಮರಾಠರು ಶೈಕ್ಷಣಿಕವಾಗಿ ಮುಂದೆ ಬರಬೇಕು. ಝಿರೋದಿಂದ ಇಂತಹ ಎಂಫೈರ್ ಕಟ್ಟಿದ್ದು ಶಿವಾಜಿ‌ ಮಹರಾಜರು. ನಾವು ಛತ್ರಪತಿ ವಂಶದವರು. ಯಾರಿಗೆ ತೊಂದರೆ ಆದರೂ ನಾವ ಅವರ ಜೊತೆ ನಿಲ್ಲಬೇಕು ಎಂದಿದ್ದಾರೆ.


Spread the love

About Laxminews 24x7

Check Also

ಇದೇ ೧೧ ರಂದು ಬೆಳಗಾವಿಯಲ್ಲಿ ಬಸವ ಸಂಸ್ಕೃತಿ ಅಭಿಯಾನ

Spread the love ಬೆಳಗಾವಿ: ವಿಶ್ವಗುರು ಬಸವಣ್ಣನವರನ್ನು ಕರ್ನಾಟಕ ಸರ್ಕಾರ “ಸಾಂಸ್ಕೃತಿಕ ನಾಯಕ”ನೆಂದು ಘೋಷಿಸಿದ ವರ್ಷ ಆಚರಣೆಯ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ