Breaking News

ಕುಕ್ಕರ್‌ ಬ್ಲಾಸ್ಟ್‌ ಮಾಡಿದ್ದ ಬ್ರದರ್‌ ಬಗ್ಗೆ ಹೇಳುತ್ತೀರಿ, ಹಾವೇರಿ ಸಿಸ್ಟರ್‌ ಬಗ್ಗೆಯೂ ಮಾತಾಡಿ: ಅಶೋಕ್!

Spread the love

ಬೆಂಗಳೂರು: ವಿಧಾನ ಮಂಡಲ ಅಧಿವೇಶನದಲ್ಲಿ (Karnataka Budget Session 2024) ಕರ್ನಾಟಕದಲ್ಲಿ ನಡೆಯುತ್ತಿರುವ ನೈತಿಕ ಪೊಲೀಸ್‌ಗಿರಿ (Moral Policing) ಬಗ್ಗೆ ಬಿಜೆಪಿ ಕಳವಳ ವ್ಯಕ್ತಪಡಿಸಿದೆ. ಈ ಸಂಬಂಧ ವಿಧಾನಸಭೆ ಕಲಾಪದ ವೇಳೆ ಪ್ರಶ್ನೆ ಮಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌ (R Ashok), ರಾಜ್ಯದಲ್ಲಿ ನಡೆಯುತ್ತಿರುವ ಅಪರಾಧ ಚಟುವಟಿಕೆ ಬfgfge ಪ್ರಸ್ತಾಪ ಮಾಡಿದರು.

 

ವಿಧಾನಸಭೆಯಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಆರ್.‌ ಅಶೋಕ್‌, ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ನಡೆಯುತ್ತಿದೆ. ಹಾವೇರಿಯಲ್ಲಿ ಏನಾಯಿತು? ಮುಸ್ಲಿಂ ಸಮುದಾಯದ ಮಹಿಳೆಯನ್ನು ಆಟೋದಲ್ಲಿ ಹತ್ತಿಸಿಕೊಂಡು ಹೋಗಿ ಏಳು ಮಂದಿ ಸಾಮೂಹಿಕ ಬಲಾತ್ಕಾರ ಮಾಡಲಾಯಿತು. ಆಕೆಯ ಜತೆಗಿದ್ದ ಪುರುಷನನ್ನು ಥಳಿಸಿದ್ದಾರೆ. ಪ್ರಕರಣ ಅಷ್ಟು ಬೆಳೆದಿದ್ದರೂ ಪೊಲೀಸರಿಗೆ ಮಾಹಿತಿ ಇಲ್ಲ. ಪೊಲೀಸರು ಇದನ್ನು ರಾಜಿ ಸಂಧಾನ ಮಾಡಲು ಹೋಗಿದ್ದಾರೆ. ಕೇವಲ 500 ರೂಪಾಯಿಗೆ ಒಂದು ಗ್ಯಾಂಗ್ ರೇಪ್ ಕೇಸ್ ಅನ್ನು ಮುಚ್ಚಿ ಹಾಕಲು ಹೋದರು ಎಂದು ಕಿಡಿಕಾರಿದರು.

ಇದಾದ ಬಳಿಕ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಧ್ವನಿ ಎತ್ತಿದರು. ಅದಾದ ಬಳಿಕ ಮತ್ತೆ ಪೊಲೀಸರು ಎಂಟ್ರಿ ಆದರು. ಈ ವೇಳೆ ಸಂತ್ರಸ್ತೆಯ ಪತಿ ಮಾತನಾಡಿದರು. ಇದೆಲ್ಲ ಮಾಧ್ಯಮಗಳಲ್ಲಿ ಸುದ್ದಿ ಬಂತು. ಬಿಜೆಪಿ ಕಾಲದಲ್ಲಿ ನೈತಿಕ ಪೊಲೀಸ್‌ಗಿರಿ ಅಂತಿದ್ದಿರಿ. ಈಗ ನಿಮ್ಮ ಕಾಲದಲ್ಲಿ ಆಗಿದ್ದು ಏನು? ನಂದಿ ಬೆಟ್ಟಕ್ಕೆ ಜೋಡಿಗಳು ಹೋಗುತ್ತಾರೆ. ನೀಲಗಿರಿ ತೋಪು ಅಲ್ಲಿದ್ದು, ಅಲ್ಲಿಗೆ ಹೋಗಿ ಏನ್ ಮಾಡ್ತಾರೆ? ಎಲ್ಲ ರೆಕಾರ್ಡ್ ಮಾಡಿಕೊಂಡು ಜೀವನ ಪೂರ್ತಿ ಅವರನ್ನು ಪೀಡಿಸುತ್ತಾರೆ. ನಾನು ಇದ್ದಾಗ ಇದಕ್ಕೆಲ್ಲ ಬ್ರೇಕ್ ಹಾಕುವ ಪ್ರಯತ್ನ ಮಾಡಿದೆ. ಇಂತಹ ಸಮಸ್ಯೆಗಳನ್ನು ಬಗೆಹರಿಸುವ ಕೆಲಸವನ್ನು ‌ಮಾಡಬೇಕಿದೆ ಎಂದು ಆರ್. ಅಶೋಕ್‌ ಹೇಳಿದರು

ಹಾವೇರಿಯ ಸಿಸ್ಟರ್‌ ಕಥೆ ಏನು?

ಮಂಗಳೂರಿನಲ್ಲಿ ಬಾಂಬ್ ಬ್ಲಾಸ್ಟ್ ಆದಾಗ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಮಾತನಾಡಿದ್ದರ ಬಗ್ಗೆ ನಾನಿಲ್ಲಿ ಹೇಳಬೇಕು. “ಅವರೆಲ್ಲ ನಮ್ಮ ಸಹೋದರರು” (There are my brothers) ಅಂತ ಡಿ.ಕೆ. ಶಿವಕುಮಾರ್ ಹೇಳಿದ್ದರು. ಈಗ ಹಾವೇರಿ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದ ಹೆಣ್ಣು ಮಗಳಿಗೆ ಅನ್ಯಾಯವಾಗಿದೆ. ಹಾವೇರಿಯಲ್ಲಿ ನಿಮ್ಮ ಸಿಸ್ಟರ್ ಕಥೆಯೇನು? ಅದಕ್ಕೆ ಡಿ.ಕೆ. ಶಿವಕುಮಾರ್ ಮುಂದೆ ಹೇಳುತ್ತಿದ್ದೇನೆ ಎಂದು ಆರ್.‌ ಅಶೋಕ್ ಹೇಳಿದರು.

ಮೈಸೂರಿನಲ್ಲಿ ತನ್ವೀರ್ ಸೇಠ್ ‌ಮೇಲೆ ಹಲ್ಲೆ ಆಯಿತು. ಅಖಂಡ ಶ್ರೀನಿವಾಸ್ ಮೂರ್ತಿ ಮನೆಗೆ ಬೆಂಕಿ ಹಾಕಲಾಯಿತು. ಯಾರ ಮೇಲೂ ಕ್ರಮ ತೆಗೆದುಕೊಳ್ಳಲಿಲ್ಲ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಷ್ಟು‌ ಹಾಳಾಗಿದೆ ಎಂದು ಆರ್.‌ ಅಶೋಕ್ ಕಿಡಿಕಾರಿದರು. ‌


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ