Breaking News

ಕಗ್ಗಂಟಾಗಿಯೇ ಉಳಿದ ಕಾಂಗ್ರೆಸ್ ರಾಜ್ಯಸಭಾ ಅಭ್ಯರ್ಥಿ ಆಯ್ಕೆ; ನಾಮ ಪತ್ರ ಸಲ್ಲಿಸಲು ಮೂರೇ ದಿನ ಬಾಕಿ

Spread the love

ಬೆಂಗಳೂರು,: ರಾಜ್ಯಸಭೆ ಚುನಾವಣೆಗೆ (Rajya Sabha Election) ಅಭ್ಯರ್ಥಿಗಳನ್ನು ಅಂತಿಮಗೊಳಿಸುವುದು ಕಾಂಗ್ರೆಸ್​ಗೆ (Congress) ಕಗ್ಗಂಟಾಗಿದೆ. ರಾಜ್ಯಸಭೆಗೆ ನಾಮ ಪತ್ರ ಸಲ್ಲಿಸಲು ಇನ್ನು ಮೂರೇ ದಿನ ಬಾಕಿ ಇದೆ. ಇದುವರೆಗೂ ಅಭ್ಯರ್ಥಿ ಯಾರಾಗಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರ ಆಗಿಲ್ಲ. ರಾಜ್ಯ ನಾಯಕರ ಆಯ್ಕೆಗೆ ಇನ್ನೂ ಗ್ರೀನ್ ಸಿಗ್ನಲ್ ಸಿಕ್ಕಿಲ್ಲ. ಹೈಕಮಾಂಡ್ ನಿಂದಲೇ ಹೊರ ರಾಜ್ಯದ ಒಂದು ಅಭ್ಯರ್ಥಿಯ ಫೈನಲ್ ಆಗುವ ಸಾಧ್ಯತೆ ಇದೆ. ಅಭಿಷೇಕ್ ಮನು ಸಿಂಘ್ವಿ ಅಥವಾ ರಘುರಾಂ ರಾಜನ್ ರಾಜ್ಯಸಭೆ ಅಭ್ಯರ್ಥಿ ಆಗುವ ಸಾಧ್ಯತೆ ಇದೆ.

ಕರ್ನಾಟಕದಿಂದ ಬಿ ಎಲ್ ಶಂಕರ್ ಹಾಗೂ ನಾಸೀರ್ ಹುಸೇನ್ ಹೆಸರು ಮುಂಚೂಣಿಯಲ್ಲಿದೆ. ಒಕ್ಕಲಿಗ ಕೋಟಾದಡಿ ಬಿ ಎಲ್ ಶಂಕರ್ ಹಾಗೂ ಹಾಲಿ ಸದಸ್ಯ ಜಿ ಸಿ ಚಂದ್ರಶೇಖರ್​ಗೆ ಸಿಎಂ ಸಿದ್ದರಾಮಯ್ಯ ಬೆಂಬಲ ಸೂಚಿಸಿದ್ದಾರೆ. ಜಿ ಸಿ ಚಂದ್ರಶೇಖರ್ ಗೆ ಡಿಸಿಎಂ ಡಿ ಕೆ ಶಿವಕುಮಾರ್ ಬೆಂಬಲ ಸೂಚಿಸಿದ್ದಾರೆ. ನಾಸೀರ್ ಹುಸೇನ್ ಪರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಬ್ಯಾಟ್ ಬೀಸುತ್ತಿದ್ದಾರೆ. ಬಿ.ಎಲ್. ಶಂಕರ್ ಅತ್ತ ದೆಹಲಿಯಲ್ಲೇ ಬೀಡು ಬಿಟ್ಟಿದ್ದಾರೆ. ಫೆಬ್ರವರಿ 14ರಂದು ರಾಜ್ಯದಲ್ಲೇ ಸ್ಕ್ರೀನಿಂಗ್ ಕಮಿಟಿ ಸಭೆಯಲ್ಲಿ ಹೆಸರು ಅಂತಿಮಗೊಳ್ಳುವ ನಿರೀಕ್ಷೆ ಇದೆ.

ಫೆ.15ರಂದು ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದ್ದು, ಮೂರು ಸ್ಥಾನ ಭರ್ತಿ ಮಾಡಿಕೊಳ್ಳಲು ಕಾಂಗ್ರೆಸ್​ಗೆ ಅವಕಾಶವಿದೆ. ಪ್ರಸ್ತುತ 20ಕ್ಕಿಂತ ಹೆಚ್ಚು ಆಕಾಂಕ್ಷಿಗಳು ಮುಂದೆ ಬಂದಿದ್ದು, ವಿವಿಧ ಕೋಟಾದಡಿ ಬೇಡಿಕೆ ಮುಂದಿಟ್ಟಿದ್ದಾರೆ. ಮಠ ಮಾನ್ಯಗಳಿಂದ, ಉದ್ಯಮಿಗಳಿಂದ ಒತ್ತಡ ಹೇರಲಾರಂಭಿಸಿದ್ದಾರೆ. ಮೂರು ಸ್ಥಾನಗಳ ಪೈಕಿ ಒಂದು ಸ್ಥಾನ ಅಲ್ಪಸಂಖ್ಯಾತರಿಗೆ, ಒಂದು ಒಕ್ಕಲಿಗ ಮತ್ತೊಂದು ಪರಿಶಿಷ್ಟರಿಗೆ ಕೊಡಬೇಕೆಂದು ಚರ್ಚೆಯಾಗಿದೆ. ಅಲ್ಪಸಂಖ್ಯಾತ ಕೋಟಾದಿಂದ ಹಾಲಿ ಸದಸ್ಯ ನಾಸೀರ್ ಹುಸೇನ್ ಪುನರಾಯ್ಕೆ ಬಯಸಲಿದ್ದು, ಹೈಕಮಾಂಡ್ ಕಡೆಯಿಂದ ಭರವಸೆಯೂ ಸಿಕ್ಕಿದೆ. ಆದರೆ, ಕೊನೆ ಹಂತದ ಬದಲಾವಣೆ ಹೊರತುಪಡಿಸಿ ನಾಸೀರ್ ಪುನಃ ಕಣಕ್ಕಿಳಿಯುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ