Breaking News

ಮೋದಿ ಮತ್ತೇ ಪ್ರಧಾನಿಯಾದರೆ ಭಾರತ ಪ್ರಪಂಚದಲ್ಲಿಯೇ ಶಕ್ತಿ ಶಾಲಿ ರಾಷ್ಟ್ರವಾಗಲಿದೆ

Spread the love

ಗೋಕಾಕದಲ್ಲಿಂದು ಜರುಗಿದ ಗ್ರಾಮ ಚಲೋ ಅಭಿಯಾನಕ್ಕೆ ಚಾಲನೆ ನೀಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ

ಗೋಕಾಕ: ಭಾರತವು ಮತ್ತಷ್ಟು ಗಟ್ಟಿಯಾಗಲು ನರೇಂದ್ರ ಮೋದಿಯವರು ಮತ್ತೋಮ್ಮೆ ನಮ್ಮ ರಾಷ್ಟ್ರದ ಪ್ರಧಾನಿಯಾಗಬೇಕು. ಮತ್ತೋಮ್ಮೆ ಮೋದಿಯವರಿಗಾಗಿ ಕಾರ್ಯಕರ್ತರು ಪ್ರತಿ ಮನೆ-ಮನೆ ಬಾಗಿಲಿಗೆ ತೆರಳಿ ಕೇಂದ್ರ ಸರ್ಕಾರದ ಯೋಜನೆಗಳನ್ನು ವಿವರಿಸಬೇಕು. ಬರುವ ಮಾರ್ಚ-ಎಪ್ರೀಲ್ ತಿಂಗಳಲ್ಲಿ ಜರುಗುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರ್ಯಕರ್ತರು ಶ್ರಮಿಸುವಂತೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕರೆ ನೀಡಿದರು.

ಬುಧವಾರದಂದು ನಗರದ ಎನ್‍ಎಸ್‍ಎಫ್ ಕಚೇರಿಯಲ್ಲಿ ಗೋಕಾಕ ಮತ್ತು ಅರಭಾವಿ ಮಂಡಲ ಜಂಟಿಯಾಗಿ ಹಮ್ಮಿಕೊಂಡಿದ್ದ ಗ್ರಾಮ ಚಲೋ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ದೇಶಕ್ಕೆ ನರೇಂದ್ರ ಮೋದಿಯವರು ಮತ್ತೋಮ್ಮೆ ಪ್ರಧಾನಿಯಾಗಬೇಕೆಂಬುವುದು ಇಡೀ ದೇಶದ ನಾಗರೀಕರ ಆಶಯವಾಗಿದೆ ಎಂದು ಹೇಳಿದರು.

ಪ್ರಧಾನಿಯಾಗಿ ಮೋದಿಯವರು ಎರಡು ಅವಧಿಯನ್ನು ಯಶಸ್ವಿಯಾಗಿ ಪೂರೈಸುತ್ತಿದ್ದಾರೆ. ಅವರು ಜಾರಿಗೊಳಿಸಿರುವ ನೂರಾರು ಜನೋಪಯೋಗಿಯ ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ. ವಿಶ್ವದಲ್ಲಿಯೇ ಭಾರತ ಸಶಕ್ತ ಹಾಗೂ ಬಲಿಷ್ಠ ರಾಷ್ಟ್ರವಾಗಲು ಕಾರಣರಾಗಿದ್ದಾರೆ. ಮೋದಿಯವರಿಂದ ಜಗತ್ತಿನ ಬಲಾಢ್ಯ ರಾಷ್ಟ್ರಗಳು ಪ್ರೇರಣೆಗೊಂಡು ಭಾರತದ ಮಾದರಿಯಲ್ಲಿ ಆಡಳಿತ ನಡೆಸುತ್ತಿವೆ. ಜೆಜೆಎಮ್, ಆಯುಷ್ಮಾನ ಭಾರತ, ಉಜ್ವಲಾ ಯೋಜನೆ, ಕಿಸಾನ್ ಸಮ್ಮಾನ, ಪಿಎಮ್ ವಿಶ್ವಕರ್ಮ ಯೋಜನೆ, ನಾರಿ ಶಕ್ತಿ ಸೇರಿದಂತೆ ನೂರಾರು ಕಲ್ಯಾಣ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಸಾಧನೆಗಳನ್ನು ವಿವರಿಸಿದರು.
ಅರಭಾವಿ ಮತಕ್ಷೇತ್ರಕ್ಕೆ ಪ್ರಧಾನಿಯವರ ಮಹತ್ವಾಕಾಂಕ್ಷೆಯ ಶುದ್ಧ ಕುಡಿಯುವ ನೀರಿನ ಜಲ ಜೀವನ ಮೀಷನ್ ಕಾಮಗಾರಿ ಪ್ರಗತಿಯಲ್ಲಿದೆ. ಇದಕ್ಕಾಗಿ ಅರಭಾವಿ ಕ್ಷೇತ್ರಕ್ಕೆ 438 ಕೋಟಿ ರೂಗಳ ಅನುದಾನ ಬಿಡುಗಡೆಯಾಗಿದ್ದು ಕ್ಷೇತ್ರದ ಪ್ರತಿ ಮನೆ-ಮನೆಗೆ ನಳಗಳನ್ನು ಅಳವಡಿಸಲಾಗುತ್ತಿದೆ. ಅರಭಾವಿ, ಕಲ್ಲೋಳ್ಳಿ, ನಾಗನೂರ ಪ.ಪಂ ಮತ್ತು ಮೂಡಲಗಿ ಪುರಸಭೆಗೆ ಕುಡಿಯುವ ನೀರಿಗಾಗಿ 140 ಕೋಟಿ ರೂಗಳ ಅನುದಾನ ಬಂದಿದೆ. ಕೇಂದ್ರ ಸರ್ಕಾರದ ಎಲ್ಲ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಇವುಗಳನ್ನು ಮತದಾರರಿಗೆ ಮನವರಿಕೆ ಮಾಡಿಕೊಡಲು ಕಾರ್ಯಕರ್ತರು ಸಿದ್ದರಾಗುವಂತೆ ಅವರು ಹೇಳಿದರು.

ಜ-22 ರಂದು ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಯಾಗಿದೆ. ಈ ಮೂಲಕ ಸುಮಾರು 500 ವರ್ಷಗಳ ಭಾರತೀಯರ ಕನಸನ್ನು ಮೋದಿಯವರು ಈಡೇರಿಸಿದ್ದಾರೆ. ದೇಶದಾದ್ಯಂತ ಬಿಜೆಪಿ ಪರ ಅಲೆಯಿದ್ದು, ಸತತ 3ನೇ ಬಾರಿ ಅವಧಿಗೆ ಮತ್ತೋಮ್ಮೆ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಇತ್ತಿಚೆಗೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಭಾಷಣದಲ್ಲಿ ದಿ. ಪಂಡಿತ ಜವಾಹರಲಾಲ ನೆಹರೂ ಅವರು ಮೀಸಲಾತಿ ನೀಡಲಿಕ್ಕೆ ವಿರೋಧ ವ್ಯಕ್ತಪಡಿಸಿದ್ದರು ಎಂದು ಹೇಳಿದ್ದಾರೆ. ಅಂದಿನ ಪ್ರಧಾನಿಯಾಗಿದ್ದ ಪಂಡಿತ. ನೆಹರೂ ಅವರು ಈ ಬಗ್ಗೆ ಪ್ರತಿ ರಾಜ್ಯಗಳಿಗೆ ಪತ್ರಗಳನ್ನು ಬರೆದಿದ್ದರು ಎಂದು ಮೋದಿಯವರು ಸ್ಪೋಟಕ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು.

ಬಿಜೆಪಿ ಜಿಲ್ಲಾ(ಗ್ರಾ) ಅಧ್ಯಕ್ಷ ಸುಭಾಶ ಪಾಟೀಲ ಮಾತನಾಡಿ ಬಿಜೆಪಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಬೇಕು. ಮತ್ತೋಮ್ಮೆ ನಮ್ಮ ಪಕ್ಷ ಕೇಂದ್ರದಲ್ಲಿ ಆಡಳಿತ ನಡೆಸಲು ಕಾರ್ಯಕರ್ತರು ದುಡಿಯಬೇಕು. ಜನಪ್ರೀಯ ಯೋಜನೆಗಳನ್ನು ಜನರ ಮುಂದೆ ಇಟ್ಟುಕೊಂಡು ಮತಯಾಚಿಸುವಂತೆ ಕೋರಿದರು.

ಅರಭಾವಿ ಮಂಡಲ ಅಧ್ಯಕ್ಷ ಮಹಾದೇವ ಶೆಕ್ಕಿ, ಅಭಿಯಾನದ ಜಿಲ್ಲಾ ಸಂಚಾಲಕ ವಿಜಯ ಗುಡ್ಡದಾರಿ, ಗೋಕಾಕ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮಣ್ಣವರ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಪಿ.ಎಲ್.ಬಬಲಿ, ಮಹಾಂತೇಶ ಕುಡಚಿ, ಬಿಜೆಪಿ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಎರಡೂ ಕ್ಷೇತ್ರಗಳ ಆಶ್ರಯದಲ್ಲಿ ಶಕ್ತಿ ವಂದನಾ ಅಭಿಯಾನದ ಪೂರ್ವಭಾವಿ ಸಭೆಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಉದ್ಘಾಟಿಸಿದರು.

ಕೇಂದ್ರ ಸರ್ಕಾರದ ಯೋಜನೆಗಳ ಕುರಿತಂತೆ ಹೊರತಂದ ಕರಪತ್ರಗಳನ್ನು ಬಾಲಚಂದ್ರ ಜಾರಕಿಹೊಳಿ ಅವರು ಬಿಡುಗಡೆ ಮಾಡಿದರು.


Spread the love

About Laxminews 24x7

Check Also

ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ

Spread the loveಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸಿ ; ಕೊಲ್ಲಾಪುರ ಜಿಲ್ಲಾ ರೇಣುಕಾ ಭಕ್ತ ಸಂಘಟನೆಯ ಆಗ್ರಹ ಇಂದು ಬೆಳಗಾವಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ