Breaking News

ಪೊಲೀಸ್ ಇಲಾಖೆಯಲ್ಲಿ ಕಳ್ಳಾಟ ಆಡುತ್ತಿದ್ದ ಅಧಿಕಾರಿಗಳಿಗೆ ಶಾಕ್; ವರ್ಗಾವಣೆ ನಂತರ NOC, LPC ಕಡ್ಡಾಯ

Spread the love

ಬೆಂಗಳೂರು, : ಪೊಲೀಸ್ ಇಲಾಖೆಯಲ್ಲಿ (Police Department) ಕಳ್ಳಾಟ ಆಡುತ್ತಿದ್ದ ಅಧಿಕಾರಿಗಳಿಗೆ ಶಾಕ್. ವರ್ಗಾವಣೆ ನಂತರ ಇಷ್ಟ ಬಂದಂತೆ ವರ್ತಿಸುತ್ತಿದ್ದವರಿಗೆ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್ (B Dayanand) ಚಾಟಿ ಬೀಸಿದ್ದಾರೆ. ನಗರ ಪೊಲೀಸ್ ಆಯುಕ್ತರು ಪ್ರತಿ ಠಾಣೆಗೆ ಭೇಟಿ ಮಾಡಿದಾಗ ಪೊಲೀಸರ ಕಳ್ಳಾಟ ಬಯಲಾಗಿದೆ. ಹೀಗಾಗಿ ಮುಂದೆ ಹೀಗೆ ಆಗದಂತೆ ಖಡಕ್ ಆಗಿ ಸೂಚನೆ ಕೊಟ್ಟಿದ್ದಾರೆ. ಹಾಗೂ ಕೆಲವು ನಿಯಮಗಳನ್ನು ಪಾಲಿಸುವಂತೆ ಎಚ್ಚರಿಕೆ ನೀಡಿದ್ದಾರೆ. ವರ್ಗಾವಣೆ ನಂತರ ಕೆಲಸಕ್ಕೆ ಸೇರುವ ಅಧಿಕಾರಿಗಳು ಕಡ್ಡಾಯವಾಗಿ NOC and LPC ಪಡೆಯಬೇಕು ಎಂದ ಆಯುಕ್ತ ದಯಾನಂದ್ ಅವರು ಆದೇಶ ಹೊರಡಿಸಿದ್ದಾರೆ.

ವರ್ಗಾವಣೆ ನಂತರ ಕಡ್ಡಾಯವಾಗಿ NOC and LPC ಪಡೆಯಬೇಕು. NOC (ನೋ ಅಬ್ಜಕ್ಷನ್ ಸರ್ಟಿಫಿಕೇಟ್) and LPC (ಲಾಸ್ಟ್ ಪೇ ಸರ್ಟಿಫಿಕೇಟ್) ಪಡೆಯದೇ ಇದ್ದವರಿಗೆ ಸಂಬಳ ಕಟ್ ಮಾಡಲು ಆದೇಶ ಜಾರಿ ಮಾಡಲಾಗಿದೆ. ಹ್ಯಾಂಡ್ ಓವರ್ ಟೇಕ್ ಓವರ್ ಉಲ್ಲಂಘಿಸಿದ್ರೆ ಸಂಬಳಕ್ಕೆ ಕತ್ತರಿ ಬೀಳತ್ತೆ. ಪೊಲೀಸ್ ಇಲಾಖೆಯ ಇನ್ಸ್ ಪೆಕ್ಟರ್, ಸಬ್ ಇನ್ಸಪೆಕ್ಟರ್, ಸಿಬ್ಬಂದಿಗಳಿಗೆ NOC ಮತ್ತು LPC ಕಡ್ಡಾಯ ಮಾಡಲಾಗಿದೆ. ವರ್ಗಾವಣೆಗೊಳ್ಳುತ್ತಿದ್ದಂತೆ ಪ್ರತಿಯೊಂದು ಆಯಾ ಠಾಣಾಧಿಕಾರಿಗೆ ಹ್ಯಾಂಡ್ ಓವರ್ ಮಾಡಬೇಕು. ಟೇಕ್ ಓವರ್ ಮಾಡಿಕೊಳ್ಳುವವರು ಕೂಡ ಸಂಪೂರ್ಣವಾಗಿ ಪರಿಶೀಲಿಸಬೇಕು. ಒಂದು ಠಾಣೆಯ ಅಧಿಕಾರಿ ವರ್ಗಾವಣೆ ನಂತರ, ಆಯಾ ಠಾಣೆಗೆ ಸಂಬಂಧಿಸಿದ ಎಲ್ಲಾ ದಾಖಲೆ ವಸ್ತುಗಳನ್ನ ಟೇಕ್ ಓವರ್ ಮಾಡುವವರಿಗೆ ವರ್ಗಾಯಿಸಬೇಕು.

ರಿವಾಲ್ವರ್, ವಾಕಿಟಾಕಿ, ಕೇಸ್ ಫೈಲ್, ಸಿಮ್ ಸೇರಿದಂತೆ ಎಲ್ಲವೂ ಹ್ಯಾಂಡ್ ಓವರ್ ಮಾಡಬೇಕು. ಇದೆಲ್ಲವನ್ನೂ ವರ್ಗಾಯಿಸಿದ ನಂತರ ಸಂಬಂಧ ಪಟ್ಟ ಹಿರಿಯ ಅಧಿಕಾರಿಗಳಿಂದ NOC ಮತ್ತು LPC ಪಡೆಯಬೇಕು. ಒಂದು ವೇಳೆ NOC ಮತ್ತು LPC ಪಡೆಯದೇ ವರ್ಗಾವಣೆಯಾದ್ರೆ ಸಂಬಳಕ್ಕೆ ಕತ್ತರಿ ಬಿಳೋದು ಗ್ಯಾರಂಟಿ.

ಇನ್ನು ಮತ್ತೊಂದೆಡೆ ಬೆಂಗಳೂರಿನಲ್ಲಿ ಸಂಚಾರ ವ್ಯವಸ್ಥೆ ವರದಿಯಲ್ಲಿ ಗಣನೀಯ ಬದಲಾವಣೆ ಕಂಡು ಬಂದಿದೆ. ಖುಷಿ ವಿಚಾರ ಏನಂದ್ರೆ, ಡಚ್ ಸಂಸ್ಥೆಯ ಟಾಮ್ ಇತ್ತೀಚೆಗೆ 2023 ಸರ್ವೆ ವರದಿ ಬಿಡುಗಡೆ ಮಾಡಿದ್ದು, ಟಾಮ್ ಸರ್ವೆಯಲ್ಲಿ ವಾಹನ ದಟ್ಟಣೆ ಎರಡನೇ ಸ್ಥಾನದಲ್ಲಿದ್ದ ಬೆಂಗಳೂರು 6 ನೇ ಸ್ಥಾನಕ್ಕೆ ಇಳಿದಿದೆ. ಬೆಂಗಳೂರು ನಗರ 2020 ರಲ್ಲಿ ವಾಹನ ದಟ್ಟಣೆಯಲ್ಲಿ ಎರಡನೇ ಸ್ಥಾನದಲ್ಲಿ ಎಂದು ವರದಿಯಾಗಿತ್ತು. 2023 ರಲ್ಲಿ 6 ನೇ ಸ್ಥಾನಕ್ಕೆ ಇಳಿದಿದೆ ಎಂದು ವರದಿ ಬಂದಿದೆ.ಹಲವು ಸುಧಾರಣೆಗಳ ಮೂಲಕ ನಿಯಂತ್ರಣ ತರಲಾಗಿದ್ದು, ವಾಹನ ಸಂಚಾರಕ್ಕೆ ಜಂಕ್ಷನ್ ಗಳಲ್ಲಿ ಕರ್ತವ್ಯ ನಿರತ ಸಿಬ್ಬಂದಿ ಅಧಿಕಾರಿಗಳು ಸುಗಮ ಸಂಚಾರಕ್ಕೆ ಆದ್ಯತೆ ನೀಡಿದ್ದಾರೆ,ಅತ್ಯಾಧುನಿಕ ತಂತ್ರಜ್ಞಾನ ಬಳಕೆ, ಡ್ರೋಣ್ ಮೂಲಕ ಟ್ರಾಫಿಕ್ ನಿಯಂತ್ರಣ, ಸಿಸಿಟಿವಿ, ಸುಧಾರಿತ ಮೆಟ್ರೋ ಸಂಪರ್ಕ, ಟ್ರಾಫಿಕ್ ಬಸ್ ಸ್ಟಾಪ್ ಸ್ಥಳಾಂತರ, ಯೂಟರ್ನ್ ಮುಚ್ಚುವಿಕೆ, ಸಿಗ್ನಲ್ ಹಂತ ಬದಲಾವಣೆ ಸೇರಿದಂತೆ ಹಲವು ಮಾರ್ಗಪಾಯಗಳಿಂದ ವಾಹನ ದಟ್ಟಣೆ ಪ್ರಮಾಣ ಕಡಿಮೆಯಾಗಿದೆ.


Spread the love

About Laxminews 24x7

Check Also

ಧರ್ಮಸ್ಥಳ ಪ್ರಕರಣದ ಮಾಸ್ಟರ್​​ ಮೈಂಡ್ ದಕ್ಷಿಣಕನ್ನಡ ಮಾಜಿ ಡಿಸಿ ಸಸಿಕಾಂತ್ ಸೆಂಥಿಲ್ ಎಂದು ಜನಾರ್ದನ ರೆಡ್ಡಿ ಗಂಭೀರ ಆರೋಪ

Spread the love ಬೆಂಗಳೂರು/ದಕ್ಷಿಣ ಕನ್ನಡ: “ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತರದ ಹಿಂದಿನ ಮಾಸ್ಟರ್​ ಮೈಂಡ್​​ ತಮಿಳುನಾಡಿನ ತಿರುವಲ್ಲೂರಿನ ಕಾಂಗ್ರೆಸ್​ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ