ಬೆಳಗಾವಿ: ನೆರೆ ಹಾವಳಿಯಲ್ಲಿ ಬಿದ್ದ ಮನೆ ಹಂಚಿಕೆಯಲ್ಲಿ ಭಾರೀ ಭ್ರಷ್ಟಾಚಾರ ನಡೆದಿದ್ದು, ಈ ಬಗ್ಗೆ ಕೂಲಂಕುಶ ತನಿಖೆ ನಡೆಸಬೇಕೆಂದು ಮಾಳೆನಟ್ಟಿ ಗ್ರಾಮಸ್ತರು ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ತಾಲೂಕು ಪಂಚಾಯತಿ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಬೆಳಗಾವಿ ತಾಲೂಕಿನ ಯಮಕನಮರಡಿ ಮತ ಕ್ಷೇತ್ರ ವ್ಯಾಪ್ತಿಯ ಮಾಳೆನಟ್ಟಿ ಗ್ರಾಮವು ಅಗಸಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುತ್ತದೆ.
ಕಳೆದ 2019 ರಿಂದ 2023ರ ಕಾಲಾವಧಿಯಲ್ಲಿ ರಾಜ್ಯ ಸರ್ಕಾರ ನೆರೆ ಹಾನಿಯಿಂದ ಬಿದ್ದ ಮನೆಗಳ ಸಂತ್ರಸ್ತರಿಗೆ ರೂ.5 ಲಕ್ಷ ಪರಿಹಾರ ಘೋಷಣೆ ಮಾಡಿತ್ತು. ಈ ಯೋಜನೆಯಲ್ಲಿನ ಮನೆಗಳು ನೈಜ ಫಲಾನುಭವಿಗಳಿಗೆ ದೊರಕದೇ ಉಳ್ಳವರ ಪಾಲಾಗಿವೆ. ಪಿಡಿಓ, ಇಂಜಿನಿಯರ್, ಗ್ರಾಮ ಲೆಕ್ಕಾಧಿಕಾರಿಗಳು ಸ್ಥಳೀಯ ಜನ ಪ್ರತಿನಿಧಿಗಳು ಹೇಳಿದವರಿಗೆ ಮನೆಗಳನ್ನು ಮಂಜೂರು ಮಾಡಿದ್ದಾರೆ.
ಅಲ್ಲದೆ ನೆರೆ ಹಾವಳಿಯಲ್ಲಿ ಬಿದ್ದ ಮನೆಗಳ ಜಿಪಿಎಸ್ ಒಂದು ಕಡೆಯಾದರೆ, ಮನೆಗಳನ್ನು ಮತ್ತೊಂದು ಕಡೆ ಕಟ್ಟಲಾಗುತ್ತಿದೆ. ಒಂದೇ ಬಾರಿ ಗಂಡ ಹೆಂಡತಿ ಇಬ್ಬರ ಹೆಸರಲ್ಲಿ ನೆರೆ ಹಾನಿಯಲ್ಲಿ ಮನೆಗಳು ಮಂಜೂರಾಗಿವೆ. ಒಂದೇ ಕುಟುಂಬದ ಇಬ್ಬರ ಹೆಸರಲ್ಲಿ ನೆರೆ ಪರಿಹಾರದ ಮನೆಗಳು ಮಂಜೂರಾಗಲು ಹೇಗೆ ಸಾಧ್ಯ? ಇದರಲ್ಲಿ ಭಾರೀ ಗೋಲ್ ಮಾಲ್ ನಡೆದಿದ್ದು ಮಾನ್ಯ ಜಿಲ್ಲಾಧಿಕಾರಿಗಳು ಕೂಲಂಕುಶ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿ ಹಾಗೂ ಜನಪ್ರತಿನಿಧಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳುವಂತೆ ಮನವಿದಾರರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಮಾಜಿ ಸದಸ್ಯ ಸುರೇಶ ತಿರಮಾಳೆ, ಭರಮಾ ನಾಯ್ಕ, ದಲಿತ ಪ್ರಗತಿಪರ ಸೇನೆ ಜಿಲ್ಲಾಧ್ಯಕ್ಷ ಶಿವಪುತ್ರ ಮೇತ್ರಿ, ಸುಧೀರ ಚೌಗುಲೆ, ಗ್ರಾಮಸ್ಥರಾದ ಜ್ಯೋತಿಬಾ ಬಾಳೇಕುಂದ್ರಿ, ವಿಕ್ರಮ ನಾಯ್ಕ, ಶಂಕರ ನಾಯ್ಕ
….
ಸಂತೋಷ ಮೇತ್ರಿ, ಅಗಸಗೆ