Breaking News

ವಿವಾಹಿತ ಮುಸ್ಲಿಂ ಯುವಕನ ಮೋಸದ ಜಾಲಕ್ಕೆ ಬಿದ್ದ ಹಿಂದೂ ಯುವತಿ

Spread the love

ಗದಗ, ಜ.30: ಕರ್ನಾಟಕದಲ್ಲಿ ಅಲ್ಲೊಂದು ಇಲ್ಲೊಂದು ಲವ್ ಜಿಹಾದ್ (Love Jihad) ಪ್ರಕರಣ ಬೆಳಕಿಗೆ ಬರುತ್ತಿದೆ. ಇದೀಗಗದಗ (Gadag)ಜಿಲ್ಲೆಯಲ್ಲೂ ಲವ್ ಜಿಹಾದ್ ಬೆಳಕಿಗೆ ಬಂದಿದ್ದು, ವಿವಾಹಿತ ಮುಸ್ಲಿಂ ವ್ಯಕ್ತಿಯೊಬ್ಬ ತಂಗಿ ತಂಗಿ ಎನ್ನುತ್ತಲೇ ಹಿಂದೂ ಯುವತಿಯನ್ನು ಬುಟ್ಟಿಗೆ ಬೀಳಿಸಿದ್ದಾನೆ. ಅಷ್ಟೇ ಅಲ್ಲದೆ, ಈತ ಮತ್ತಿಬ್ಬರು ಹಿಂದೂ ಯುವತಿಯರ ಸಂಪರ್ಕದಲ್ಲಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಮುಸ್ಲಿಂ ಯುವಕನಿಗೆ ಮದುವೆಯಾಗಿದ್ದರೂ ಹಿಂದೂ ಯುವತಿ ಜೊತೆಗೆ ಪ್ರೀತಿಯ ನಾಟಕವಾಡುತ್ತಿದ್ದಾನೆ. ತಂಗಿ ತಂಗಿ ಅಂತಾ ಕರೆಯುತ್ತಿದ್ದ ಈತನ ಮೋಸದ ಜಾಲಕ್ಕೆ ತನ್ನ ಮಗಳು ಬಲಿಯಾದಳು ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ನೀನಿಲ್ಲದೆ ನಾವು ಹೇಗೆ ಇರೋಣ, ಬೇಗ್ ಬಾ ಮಗಳೇ ಅಂತ ಹೆತ್ತವ್ವ ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾಳೆ.

ಗದಗ ಬೆಟಗೇರಿ ಅವಳಿ ನಗರದ, ಮಂಜುನಾಥ ನಗರದ 19 ವರ್ಷದ ಹಿಂದೂ ಯುವತಿಯನ್ನು ವಿವಾಹಿತ ಮುಸ್ಲಿಂ ಯುವಕ ಅಮೀರ್ ಕುಕನೂರು (30) ಎಂಬಾತ ಸಂಪರ್ಕದಲ್ಲಿದ್ದ. ತಂಗಿ ತಂಗಿ ಅಂತ ಕರೆಯುತ್ತಿದ್ದನು. ಅಷ್ಟೇ ಅಲ್ಲದೆ, ಹಿಂದೂ ಧರ್ಮದ ಇನ್ನೂ ಇಬ್ಬರು ಯುವತಿಯರ ಜೊತೆ ಪ್ರೀತಿ ಪ್ರೇಮ ಅಂತಾ ನಾಟಕವಾಡುತ್ತಿದ್ದಾನೆ ಎನ್ನುವ ಆರೋಪವೂ ಕೇಳಿಬಂದಿದೆ.

ಜನವರಿ 16 ರಂದು ಯುವತಿಯನ್ನು ಅಪಹರಣ ಮಾಡಿದ್ದಾನೆ ಎಂದು ಪೋಷಕರು ಬೆಟಗೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ನಂತರ ಗದಗ ಎಸ್​ಪಿಗೆ ಮನವಿ ಸಲ್ಲಿಸಿ, ಇದು ಲವ್ ಜಿಹಾದ್ ಪ್ರಕರಣವಾಗಿದ್ದು, ನಮ್ಮ ಮಗಳನ್ನು ಪತ್ತೆ ಮಾಡಿಕೊಡುವಂತೆ ಬೇಡಿಕೊಳ್ಳುತ್ತಿದ್ದಾರೆ. ಆದರೆ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.


Spread the love

About Laxminews 24x7

Check Also

ಸಾರ್ವಜನಿಕ ಸ್ಥಳಗಳಲ್ಲಿ ಅನುಮತಿ ಕಡ್ಡಾಯಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಅರ್ಜಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

Spread the loveಧಾರವಾಡ: ಸಾರ್ವಜನಿಕ ಸ್ಥಳದಲ್ಲಿ ಖಾಸಗಿ ಸಂಸ್ಥೆಗಳ ಅನುಮತಿ ಕಡ್ಡಾಯ ಆದೇಶಕ್ಕೆ ತಡೆಯಾಜ್ಞೆ ನೀಡಿದ್ದ ಧಾರವಾಡ ಹೈಕೋರ್ಟ್ ಏಕ ಸದಸ್ಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ