Breaking News

ಕಾಂಗ್ರೆಸ್​ನವರಿಗೆ ಶ್ರೀರಾಮನ ಶಾಪ ತಟ್ಟುತ್ತೆ: ಪ್ರಮೋದ್ ಮುತಾಲಿಕ್ ವಾಗ್ದಾಳಿ

Spread the love

ಬೆಳಗಾವಿ, ಜನವರಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ಇಂದು ರಜೆ ಕೊಟ್ಟಿದ್ದರೆ ಅವರಪ್ಪನ‌ ಮನೆ ಗಂಟು ಏನು ಹೋಗುತಿತ್ತು. ಕೇಂದ್ರ ಸರ್ಕಾರ ಅರ್ಧ ದಿನ ರಜೆ ನೀಡಿ ಹಬ್ಬಕ್ಕೆ ಅವಕಾಶ ಕೊಟ್ಟಿದೆ. ಕಾಂಗ್ರೆಸ್​ನವರಿಗೆ ಶ್ರೀರಾಮನ ಶಾಪ ತಟ್ಟುತ್ತೆ ಎಂದು ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್​(Pramod Muthalik)ವಾಗ್ದಾಳಿ ಮಾಡಿದ್ದಾರೆ. ಜಿಲ್ಲೆಯ ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ನವರಿಗೆ ಅಧಿಕಾರ ಹಾಗೂ ಮುಸ್ಲಿಮರ ತುಷ್ಟೀಕರಣ ಬೇಕಿದೆ. ಮುಸ್ಲಿಮರಿಂದ ಗೆದ್ದಿದ್ದೇವೆ ಅನ್ನುವ ಸೊಕ್ಕು ರಜೆ ಕೊಡದಿರಲು ಕಾರಣ. ಈಗಾಗಲೇ ರಾಮನ ಶಾಪದಿಂದ ದೇಶದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ ಎಂದು ಕಿಡಿಕಾರಿದ್ದಾರೆ.

ದೇಶ ಒಂದಾಗಿದೆ ಎನ್ನುವ ಸಂದೇಶ ರವಾನೆ

ಅಯೋಧ್ಯೆಯಲ್ಲಿನ ಸಂಭ್ರಮ ಇಡೀ ದೇಶದಲ್ಲಿ ನಿರ್ಮಾಣವಾಗಿದೆ. ದೇಶ ಒಂದಾಗಿದೆ ಎನ್ನುವ ಸಂದೇಶ ರವಾನೆ ಆಗಿದೆ. ಇತಿಹಾಸದಲ್ಲಿ ಸುವರ್ಣ ಅಕ್ಷರದಲ್ಲಿ ಬರೆದಿಡುವ ಶ್ರೇಷ್ಠ ದಿನ ಇದು. 500 ವರ್ಷಗಳ ಹೋರಾಟಕ್ಕೆ ಫಲ ಸಿಕ್ಕಿದೆ. ರಾಮನ ಮೂರ್ತಿ ಪುನಃ ಪ್ರತಿಷ್ಠಾಪನೆ ಆಗಿದೆ. ಕಟ್ಟಿದೆವು ಕಟ್ಟಿದೇವು ರಾಮ ಮಂದಿರ ಕಟ್ಟಿದೇವು ಎನ್ನುವ ಘೋಷಣೆ ಪ್ರಾರಂಭವಾಗಿದೆ. ಇಡಿ ದೇಶದಲ್ಲಿ ಆನಂದದ ಸುನಾಮಿ ಹರಿಯುತ್ತಿದೆ ಎಂದಿದ್ದಾರೆ.


Spread the love

About Laxminews 24x7

Check Also

ಆಟೊ ಬುಕ್ ಮಾಡಿ ಬಳಿಕ ರದ್ದು ಮಾಡಿದಕ್ಕೆ ಯುವತಿ ಹಿಂಬಾಲಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಚಾಲಕ: ಬಂಧನ

Spread the love ಬೆಂಗಳೂರು: ಆ್ಯಪ್​ನಲ್ಲಿ ಆಟೋ ಬುಕ್ ಮಾಡಿ ಬಳಿಕ ರದ್ದು ಮಾಡಿದ್ದಕ್ಕೆ ಅಸಮಾಧಾನಗೊಂಡು ಯುವತಿಯನ್ನ ಹಿಂಬಾಲಿಸಿ ಅವಾಚ್ಯ ಶಬ್ಧಗಳಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ