Breaking News

ಶಿಷ್ಯನ ಸಿನಿಮಾಕ್ಕೆ ಶಬ್ಬಾಷ್‌ ಎಂದ ಸಾಯಿ ಪ್ರಕಾಶ್‌!

Spread the love

ಬೆಂಗಳೂರು: ಸಂಕ್ರಾಂತಿಯ (Makara sankranti) ಶುಭ ಸಂದರ್ಭದಲ್ಲಿ ಹೊಸ ಚಿತ್ರವೊಂದು ಸೆಟ್ಟೇರಿದೆ. ರುದ್ರಶಿವ ನಿರ್ದೇಶನದ (Director Rudrashiva) ಶಬ್ಬಾಷ್‌ ಚಿತ್ರದ (Shabaah Movie) ಮುಹೂರ್ತ ಶ್ರೀ ಬಂಡೆ ಮಹಾಕಾಳಿ ಅಮ್ಮನವರ ಸನ್ನಿಧಾನದಲ್ಲಿ ನೆರವೇರಿತು.

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಹಿರಿಯ ನಿರ್ದೇಶಕ ಓಂ ಸಾಯಿಪ್ರಕಾಶ್ (Director OM Saiprakash) ಅವರು, ತಮ್ಮ ಶಿಷ್ಯನ ಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಶಬ್ಬಾಷ್‌ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಕೂಡಾ ಅನಾವರಣಗೊಂಡಿದೆ.

 ಶಬ್ಬಾಷ್‌ ಅನ್ನಿಸಿಕೊಳ್ಳುವ ಕೆಲಸ ಏನ್ಮಾಡ್ತಾನೆ ಹೀರೊ!?

ಹೀಗೆ ಮುಹೂರ್ತ ಸಮಾರಂಭ ಸಾಂಗವಾಗಿ ನೆರವೇರಿದ ನಂತರ ಚಿತ್ರತಂಡ ಮಾಧ್ಯಮದವರ ಜತೆ ಹಲವು ಮಹತ್ದದ ಸಂಗತಿಗಳನ್ನು ಹಂಚಿಕೊಂಡಿದೆ. ಪ್ರಧಾನವಾಗಿ ಈ ಹಂತದಲ್ಲಿ ನಿರ್ದೇಶಕ ರುದ್ರಶಿವ ಶೀರ್ಷಿಕೆಯ ಒಳಾರ್ಥವನ್ನು ಸಮರ್ಥವಾಗಿ ತೆರೆದಿಡುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯವಾಗಿ ಮಹತ್ತರವಾದುದನ್ನು ಸಾಧಿಸಿದಾಗ, ಮೆಚ್ಚುವಂತೆ ನಡೆದುಕೊಂಡಾಗ ಶಬ್ಬಾಷ್‌ ಗಿರಿಯ ಮೂಲಕ ಮೆಚ್ಚಿಕೊಳ್ಳಲಾಗುತ್ತದೆ. ಹಾಗಾದರೆ, ಈ ಸಿನಿಮಾ ನಾಯಕ ಶಬ್ಬಾಷ್‌ ಅನ್ನಿಸಿಕೊಳ್ಳುವಂಥಾ ಯಾವ ಕೆಲಸ ಮಾಡುತ್ತಾನೆ? ಯಾವ ಥರದ ಕಥೆ ಇದರ ಸುತ್ತ ಚಲಿಸುತ್ತದೆಂಬುದು ಈ ಸಿನಿಮಾ ಜೀವಾಳ. ಅಂದಹಾಗೆ,“ಹೊಡಿರೋ ಸೆಲ್ಯೂಟ್’ ಎಂಬ ಅಡಿ ಬರಹ ಹೊಂದಿರುವ ಶಬ್ಬಾಷ್‌, ಆಕ್ಷನ್ ಡ್ರಾಮಾ ಜಾನರಿನ ಸಿನಿಮಾ.


Spread the love

About Laxminews 24x7

Check Also

ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್

Spread the love ಕುಪ್ಪಟಗಿರಿ ಕ್ರಾಸ್ ಬಳಿ ಹೊಸ ಟ್ರಾನ್ಸ್’ಫಾರ್ಮರ್ ಲೋಕಾರ್ಪಣೆಗೊಳಿಸಿದ ಮಾಜಿ ಶಾಸಕ ಅರವಿಂದ ಪಾಟೀಲ್ ಖಾನಾಪೂರ ತಾಲೂಕಿನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ