Breaking News

ಸ್ಯಾಂಡಲ್ ವುಡ್ ನ ಕನಸುಗಾರ , ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು 59ನೆ ಹುಟ್ಟುಹಬ್ಬ…..

Spread the love

ಬೆಂಗಳೂರು, ಮೇ 30- ಸ್ಯಾಂಡಲ್ ವುಡ್ ನ ಕನಸುಗಾರ , ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು 59ನೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಲಾಕ್‍ಡೌನ್ ಹಿನ್ನೆಲೆಯಲ್ಲಿ ನನ್ನ ಅಭಿಮಾನಿಗಳು ಮನೆಯ ಬಳಿ ಬರುವುದು ಬೇಡ, ಎಲ್ಲರೂ ಮನೆಯಲ್ಲೇ ಇರಿ… ಸೇಫ್ ಆಗಿ ಇರಿ… ನಿಮ್ಮ ಆರೋಗ್ಯವೂ ಮುಖ್ಯ ನಿಮ್ಮ ಪ್ರೀತಿ, ವಿಶ್ವಾಸ , ಅಭಿಮಾನ ಸದಾ ನನ್ನ ಮೇಲೆ ಹೀಗೆ ಇರಲಿ ಮುಂದಿನ ವರ್ಷ 60ನೆ ವಸಂತಕ್ಕೆ ಕಾಲಿಡುತ್ತಿದ್ದೇನೆ ಅದ್ಧೂರಿಯಾಗಿ ಆಚರಿಸೋಣ ಎಂದು ಮನವಿಯನ್ನು ಮಾಡಿದ್ದಾರೆ.

ಕೊರೊನಾ ಬಿಡುವಿನಲ್ಲಿ ಕ್ರೇಜಿಸ್ಟಾರ್ ಹಲವಾರು ಕಥೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ನಿನ್ನೆಯಷ್ಟೇ ಕೇಜ್ರಿ ಸ್ಟಾರ್ ಪುತ್ರಿ ಗೀತಾಂಜಲಿರವರ ವಿವಾಹ ವಾರ್ಷಿಕೋತ್ಸವ ಸಂಭ್ರಮವನ್ನು ಕುಟುಂಬದ ಸದಸ್ಯರಿ ಆಚರಿಸಿದ್ದರು. ಇಂದು ರವಿಚಂದ್ರನ್ ಅವರ ಜನ್ಮ ದಿನವನ್ನು ಕುಟುಂಬದೊಂದಿಗೆ ಆಚರಿಸುತ್ತಿರುವುದು ಬಹಳ ಸಂತಸ ತಂದಿದೆಯಂತೆ.ಮತ್ತೊಂದು ವಿಶೇಷ ಏನೆಂದರೆ ಈ ವರ್ಷವೇ ಈಶ್ವರಿ ಸಂಸ್ಥೆ ತನ್ನ 50ನೇ ವರ್ಷದ ಸಂಭ್ರಮದಲ್ಲಿದೆ. ಹಲವಾರು ಯಶಸ್ವಿ ಚಿತ್ರಗಳನ್ನು ನೀಡಿದ ಈ ಸಂಸ್ಥೆಯ ಕೊಡುಗೆ ಅಪಾರವಾಗಿದೆ.

ಈಗಾಗಲೇ ರವಿಚಂದ್ರನ್ ಹಾಗೂ ಕಿಚ್ಚ ಸುದೀಪ್ ಅಭಿನಯದ ರವಿ ಬೋಪಣ್ಣ ಸಿದ್ಧವಾಗಿದೆ. ರಾಜೇಂದ್ರ ಪೊನ್ನಪ್ಪ ಸಹ ಐವತ್ತರಷ್ಟು ಚಿತ್ರೀಕರಣ ವಾಗಿದೆ. ದಕ್ಷಿಣ ಭಾರತದಲ್ಲಿ ಬಹಳಷ್ಟು ಸದ್ದನ್ನು ಮಾಡಿದಂತ ದೃಶ್ಯಂ ಚಿತ್ರದ ಭಾಗ-2 ಮಲೆಯಾಳಂನಲ್ಲಿ ಸಿದ್ಧವಾಗಲಿದೆಯಂತೆ. ಅದರ ಕನ್ನಡ ಅವತರಣಿಕೆ ಯಲ್ಲಿ ಕ್ರೆಜಿಸ್ಟಾರ್ ರವಿಚಂದ್ರನ್ ಕೂಡಾ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಮಿಂಚಲಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ.

ಒಟ್ಟಿನಲ್ಲಿ ಕ್ರೇಜಿಸ್ಟಾರ್ ಬಹಳಷ್ಟು ಕನಸುಗಳನ್ನ ಕಟ್ಟಿಕೊಂಡು ಮುಂದೆ ಸಾಗುತ್ತಿದ್ದರೆ ಇವರ ಆಲೋಚನೆ ಯಶಸ್ವಿಯಾಗಲಿ ಹಾಗೆಯೇ ಇವರ ಮಾರ್ಗದರ್ಶನದಲ್ಲಿ ಚಿತ್ರರಂಗ ಎತ್ತರಕ್ಕೆ ಬೆಳೆಯಲಿ ಎಂಬುದೇ ಅಭಿಮಾನಿಗಳ ಆಶಯ


Spread the love

About Laxminews 24x7

Check Also

12 ಸಾವಿರ ಉದ್ಯೋಗಿಗಳ ಕಡಿತ; ಟಿಸಿಎಸ್​​ಗೆ ರಾಜ್ಯ ಕಾರ್ಮಿಕ ಇಲಾಖೆಯಿಂದ ಸಮನ್ಸ್

Spread the loveಬೆಂಗಳೂರು: ಹನ್ನೆರಡು ಸಾವಿರದಷ್ಟು ಬೃಹತ್ ಸಂಖ್ಯೆಯ ಉದ್ಯೋಗಿಗಳನ್ನು ಕೆಲಸದಿಂದ ತಗೆದುಹಾಕುವುದಕ್ಕೆ ಸಂಬಂಧಪಟ್ಟಂತೆ ವಿವರಣೆ ಕೇಳಿ ರಾಜ್ಯ ಕಾರ್ಮಿಕ ಇಲಾಖೆಯು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ