ದಾವಣಗೆರೆ, ಡಿಸೆಂಬರ್ 29: ‘ಪಕ್ಷದ ವಿರುದ್ಧ ಬಹಿರಂಗ ಹೇಳಿಕೆಗಳನ್ನು ಕೊಡುವುದು ಸರಿ ಅಲ್ಲ, ರಾಜ್ಯಾಧ್ಯಕ್ಷರ ಆಯ್ಕೆ ತಪ್ಪಾಗಿದೆ ಎಂದು ಅನಿಸಿದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ.
ಅದನ್ನು ಹೇಳಿಕೆ ಕೊಡುವುದು ಸರಿ ಅಲ್ಲ’ ಎಂದು ಶಾಸಕ ಬಸನಗೌಡ ಯತ್ನಾಳ್ಗೆ (Basangouda Patil Yatnal) ಕೇಂದ್ರ ಪ್ರಲ್ಹಾದ್ ಜೋಶಿ (Pralhad Joshi) ಕಿವಿಮಾತು ಹೇಳಿದ್ದಾರೆ. ದಾವಣಗೆರೆಯಲ್ಲಿ ಮಾತನಾಡಿದ ಅವರು, ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಪರ ಇರುವವರಿಗೆ ಮಾತ್ರ ಸ್ಥಾನ ನೀಡಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಯಾರಿಗಾದರೂ ದೂರುದುಮ್ಮಾನಗಳು ಇದ್ದರೆ ರಾಜ್ಯಾಧ್ಯಕ್ಷರು, ರಾಷ್ಟ್ರೀಯ ಅಧ್ಯಕ್ಷರ ಜತೆ ಮಾತುಕತೆ ನಡೆಸಬೇಕು. ಅದನ್ನು ಬಿಟ್ಟು ಪಕ್ಷದ ವಿರುದ್ಧ ಮಾತನಾಡಿದರೆ, ಬಹಿರಂಗ ಹೇಳಿಕೆ ಕೊಡುವುದು ಮಾಡಿದರೆ ಒಳ್ಳೆಯದಾಗುವುದಿಲ್ಲ. ಬಹಿರಂಗವಾಗಿ ಹೇಳಿಕೆ ಕೊಡುವವರಿಗೆ ನಾನು ಹೇಳುವುದೇನೆಂದರೆ, ಬಿಜೆಪಿ ಹಿತಕಾಯುವವರು ತಮ್ಮ ಬಹಿರಂಗ ಹೇಳಿಕೆಗಳನ್ನು ಕೊಡುವುದು ತಕ್ಷಣ ನಿಲ್ಲಿಸಬೇಕು. ಇದು ಸರಿ ಅಲ್ಲ. ಯುವ ರಾಜ್ಯಧ್ಯಕ್ಷರನ್ನು ನೇಮಕ ಮಾಡಲು ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು, ಪ್ರಧಾನಿಯವರು ಕೂತೇ ಆಯ್ಕೆ ಮಾಡಿರುತ್ತಾರೆ. ಇದು ರಾಷ್ಟ್ರೀಯ ಘಟಕದ ನಿರ್ಣಯ. ಅದರೆ ನಿಮಗೆ ಇಲ್ಲಿ ತಪ್ಪಾಗುತ್ತಿದೆ ಇದು ಸರಿಯಾಗಬೇಕೆಂದಿದ್ದರೆ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ, ಅಥವಾ ರಾಷ್ಟ್ರೀಯ ಪ್ರಮುಖರನ್ನು ಭೇಟಿಯಾಗಿ. ಅದು ಬಿಟ್ಟು ಬಹಿರಂಗವಾಗಿ ಹೇಳಿಕೆ ಕೊಡುವುದು ಸರಿಯಲ್ಲ ಎಂದು ಜೋಶಿ ಹೇಳಿದರು.
ಯತ್ನಾಳ್ ಅವರು ಶಾಸಕರಿದ್ದಾರೆ. ಅವರನ್ನು ಕರೆದು ಮಾತ್ನಾಡುವ ಕೆಲಸವನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡ್ತಾರೆ ಎಂದು ಜೋಶಿ ಹೇಳಿದರು.