Breaking News

ರಕ್ಷಣಾ ಸವಾಲುಗಳನ್ನು ಎದುರಿಸಲು ಸಜ್ಜಾಗಿ: ಏರ್‌ ಮಾರ್ಷಲ್‌ ರಾಧಾಕೃಷ್ಣನ್‌

Spread the love

ಬೆಳಗಾವಿ: ತಾಲ್ಲೂಕಿನ ಸಾಂಬ್ರಾದ ಏರ್‌ಮೆನ್‌ ತರಬೇತಿ ಶಾಲೆ(ಎಟಿಎಸ್‌)ಯಲ್ಲಿ ಪುರುಷ ಅಗ್ನಿವೀರವಾಯುಗಳ ಎರಡನೇ ತಂಡದ ಮತ್ತು ಮಹಿಳಾ ಅಗ್ನಿವೀರವಾಯುಗಳ ಮೊದಲ ತಂಡದ ನಿರ್ಗಮನ ಪಥಸಂಚಲನ ಶನಿವಾರ ನಡೆಯಿತು.

ಇಲ್ಲಿ 22 ವಾರ ತರಬೇತಿ ಪಡೆದ 2,127 ಪುರುಷರು, 153 ಮಹಿಳೆಯರು ಸೇರಿದಂತೆ 2,280 ಅಗ್ನಿವೀರವಾಯುಗಳು ಆಕರ್ಷಕ ಪಥಸಂಚಲನ ನಡೆಸಿದರು.

 

ಈ ತಂಡಗಳಿಂದ ಗೌರವ ವಂದನೆ ಸ್ವೀಕರಿಸಿದ ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌ ಏರ್‌ ಮಾರ್ಷಲ್‌ ರಾಧಾಕೃಷ್ಣನ್‌ ರಾಧಿಶ್‌, ‘ಪ್ರಸ್ತುತ ಜಾಗತಿಕ ರಕ್ಷಣಾ ವ್ಯವಸ್ಥೆಗೆ ಸವಾಲು ಹೆಚ್ಚುತ್ತಿವೆ. ಇವುಗಳನ್ನು ಸಮರ್ಥವಾಗಿ ಎದುರಿಸಲು ಇಲ್ಲಿ ಪಡೆದ ತರಬೇತಿ ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಕರೆ ನೀಡಿದರು.

‘ಪ್ರಸ್ತುತ ಕಾಲಘಟ್ಟಕ್ಕೆ ಅನುಗುಣವಾಗಿ ಜ್ಞಾನ, ವೃತ್ತಿಕೌಶಲ ಅಭಿವೃದ್ಧಿಪಡಿಸಿಕೊಳ್ಳಬೇಕು. ನಾವೂ ಬದಲಾವಣೆಗೆ ಕಾರಣವಾಗಬೇಕು’ ಎಂದ ಅವರು, ಜಗತ್ತಿನ ನಾಲ್ಕನೇ ದೊಡ್ಡ ವಾಯುಪಡೆಯಾದ ಭಾರತೀಯ ವಾಯುಪಡೆಗೆ ತಮ್ಮ ಮಕ್ಕಳನ್ನು ಸೇರಿಸಲು ಮುಕ್ತ ಮನಸ್ಸಿನಿಂದ ಸಹಕರಿಸಿದ ಪಾಲಕರನ್ನು ಪ್ರಶಂಸಿಸಿದರು.

‘ಅಗ್ನಿಪಥ ಯೋಜನೆಯಡಿ ನಮ್ಮಲ್ಲಿ ಬೇಸಿಕ್‌ ತರಬೇತಿ ಕೊಡಲಾಗುತ್ತಿದೆ. ಬೌದ್ಧಿಕ ಮತ್ತು ನೈತಿಕ ಮೌಲ್ಯಗಳನ್ನು ಶಿಬಿರಾರ್ಥಿಗಳಿಗೆ ಕಲಿಸಲಾಗುತ್ತಿದೆ. ಇಲ್ಲಿಂದ ವಿವಿಧ ಟ್ರೇಡ್‌ಗಳಿಗೆ ಅನುಸಾರವಾಗಿ ಮತ್ತೊಂದು ಹಂತದ ತರಬೇತಿಯನ್ನು ಅಗ್ನಿವೀರವಾಯುಗಳು ಪಡೆದು, ದೇಶಸೇವೆಗೆ ಅಣಿಯಾಗಲಿದ್ದಾರೆ’ ಎಂದು ಹೇಳಿದರು.


Spread the love

About Laxminews 24x7

Check Also

ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ ಹೃದಯಾಘಾತದಿಂದ ನಿಧನ

Spread the loveಬೆಂಗಳೂರು/ ಗ್ರಾಹಕ ನ್ಯಾಯಾಲಯಕ್ಕೆ ಬಂದಿದ್ದ ವ್ಯಕ್ತಿ ಕುಸಿದು ಬಿದ್ದು ಸಾವನ್ನಪ್ಪಿದರೆ, ಗೋಕಾಕ್ ಜಾತ್ರೆ ಬಂದೋಬಸ್ತ್​​ಗೆ ಬಂದಿದ್ದ ಹುಬ್ಬಳ್ಳಿ ಎಎಸ್ಐ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ