ನವದೆಹಲಿ, ಮೇ 28- ಗ್ರಾಹಕರು ಮತ್ತು ಬಳಕೆದಾರರ ಸಂತೃಪ್ತಿಯನ್ನು ಹೆಚ್ಚಿಸುವ ಅಗತ್ಯದ ಜೊತೆ ಕಾರ್ಯನಿರ್ವಹಣಾ ಕ್ಷಮತೆ ಮತ್ತು ಆರ್ಥಿಕ ಸುಸ್ಥಿರತೆ ವೃದ್ಧಿಗೂ ಆದ್ಯತೆ ನೀಡುವಂತೆ ವಿದ್ಯುತ್ ವಲಯಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸಲಹೆ ಮಾಡಿದ್ದಾರೆ.
ದೆಹಲಿಯಲ್ಲಿ ವಿದ್ಯುತ್ ಹಾಗೂ ನವ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯಗಳೊಂದಿಗೆ ಅವುಗಳ ಕಾರ್ಯನಿರ್ವಹಣೆ ಕುರಿತು ಮೋದಿ ಪರಾಮರ್ಶೆ ನಡೆಸಿದರು. ದೇಶದ ರಾಜ್ಯಗಳು ಮತ್ತು ಪ್ರಾಂತ್ಯಗಳಲ್ಲಿ ವಿದ್ಯುತ್ ವಿತರಣೆಯಲ್ಲಿ ವ್ಯತ್ಯಯ ಸೇರಿದಂತೆ ಈ ವಲಯದಲ್ಲಿ ಎದುರಾಗಿರುವ ಸಮಸ್ಯೆಗಳ ಕುರಿತು ಪ್ರಧಾನಿ ಪ್ರಮುಖವಾಗಿ ಪ್ರಸ್ತಾಪಿಸಿದರು.
ಒಂದೇ ಅಳತೆ ಎಲ್ಲದಕ್ಕೂ ಹೊಂದಿಕೊಳ್ಳುತ್ತದೆ ಎಂಬ ಧೋರಣೆಯನ್ನು ಬಿಟ್ಟು ವಿದ್ಯುತ್ ಕ್ಷೇತ್ರ ಕಾರ್ಯಕ್ಷಮತೆ ಮತ್ತು ಸುಧಾರಣೆಗಾಗಿ ಪ್ರತಿ ರಾಜ್ಯಗಳಲ್ಲೂ ಪ್ರೇರಣೆದಾಯಕ ನಿರ್ದಿಷ್ಟ ಮಾರ್ಗೋಪಾಯಗಳನ್ನು ಅನುಷ್ಠಾನಗೊಳಿಸುವಂತೆ ಅವರು ಸಚಿವಾಲಯಕ್ಕೆ ಸಲಹೆ ಮಾಡಿದರು.
ವಿದ್ಯುತ್ ವಲಯವನ್ನು ಕಾಡುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪರಿಷ್ಕøತ ಸುಂಕ ನೀತಿ ಮತ್ತು ವಿದ್ಯುಚ್ಚಕ್ತಿ (ತಿದ್ದುಪಡಿ) ವಿಧೇಯಕ 2020 ಸೇರಿದಂತೆ ಕೆಲವು ನೀತಿಗಳ ಉಪಕ್ರಮಗಳ ಬಗ್ಗೆಯೂ ಸಭೆಯಲ್ಲಿ ಪರಾಮಷರ್ ನಡೆಯಿತು.
ಗ್ರಾಹಕರು ಮತ್ತು ಬಳಕೆದಾರರ ಸಂತೃಪ್ತಿಯನ್ನು ಹೆಚ್ಚಿಸುವ ಅಗತ್ಯದ ಜೊತೆ ಕಾರ್ಯನಿರ್ವಹಣಾ ಕ್ಷಮತೆ ಮತ್ತು ಆರ್ಥಿಕ ಸುಸ್ಥಿರತೆ ವೃದ್ಧಿಗೂ ಆದ್ಯತೆ ನೀಡುವಂತೆ ವಿದ್ಯುತ್ ವಲಯಕ್ಕೆ ಪ್ರಧಾನಮಂತ್ರಿ ಇದೇ ಸಂದರ್ಭದಲ್ಲಿ ಕರೆ ನೀಡಿದರು.