Breaking News

B.Ed ಆಗದೆ ವೃತ್ತಿಗೆ ಕಂಟಕ- ಅಡಕತ್ತರಿಯಲ್ಲಿ ಅನುದಾನಿತ PU ಉಪನ್ಯಾಸಕರು

Spread the love

ಮಂಗಳೂರು: ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ಬಿಎಡ್‌ ಆಗದೆ ಇದ್ದರೂ 2008ರ ಬಳಿಕ ನೇಮಕಗೊಂಡಿರುವ ಉಪನ್ಯಾಸಕರಿಗೆ ಈಗ ವೃತ್ತಿ ಕಂಟಕ ಎದುರಾಗಿದೆ.
2008ರ ಮೊದಲು ಉಪನ್ಯಾಸಕ ರಾಗಿ ಸೇರಿರುವವರಿಗೆ ಬಿಎಡ್‌ನಿಂದ ರಿಯಾಯಿತಿ ಇದೆ. ಜತೆಗೆ ಸರಕಾರಿ ಉಪನ್ಯಾಸಕರಿಗೆ ವೇತನ ಸಹಿತವಾಗಿ ಬಿಎಡ್‌ ಅಭ್ಯಾಸಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಆದರೆ ಮಾಹಿತಿ ಕೊರತೆಯಿಂದ ಹಾಗೂ 2008ರ ಆಸುಪಾಸಿನಲ್ಲೇ ವೃತ್ತಿಗೆ ಸೇರಿದ ರಾಜ್ಯದ ಸುಮಾರು 1,200ಕ್ಕೂ ಅಧಿಕ (ದಕ್ಷಿಣ ಕನ್ನಡ, ಉಡುಪಿಯಲ್ಲಿ 80) ಅನುದಾನಿತ ಉಪನ್ಯಾಸಕರು ಮಾತ್ರ ಬಿಎಡ್‌ ಆಗಿಲ್ಲ ಎಂಬ ನೆಪದಿಂದ ಈಗ ಸಂಕಷ್ಟ ಎದುರಿಸುತ್ತಿದ್ದಾರೆ.

ಏನಿದು ಸಂಕಷ್ಟ?
2008ರ ಫೆ. 4ರ ಪೂರ್ವದಲ್ಲಿ ಪದವಿಪೂರ್ವ ಕಾಲೇಜು ಉಪನ್ಯಾಸಕರ ನೇಮಕಾತಿಗೆ ಅಭ್ಯರ್ಥಿಯು ಬೋಧನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು ಎಂಬ ನಿಯಮವಿತ್ತು.

ಆದರೆ ಅನಂತರ ಸ್ನಾತಕೋತ್ತರ ಪದವಿಯ ಜತೆಗೆ ಬಿಎಡ್‌ ಪದವಿಯನ್ನೂ ಹೊಂದಿರಬೇಕು ಎಂಬ ನಿಯಮ ತರಲಾಯಿತು. ಈ ಮಧ್ಯೆ 2008ಕ್ಕಿಂತ ಹಿಂದೆ ನೇಮಕಗೊಂಡ ಪ.ಪೂರ್ವ ಉಪನ್ಯಾಸಕರಿಗೆ ಬಿಎಡ್‌ ಪದವಿ ಕಡ್ಡಾಯವಲ್ಲ; ಅನಂತರ ನೇಮಕಗೊಂಡವರಿಗೆ ಮಾತ್ರ ಕಡ್ಡಾಯ ಎಂದು ಸರಕಾರ 2021ರಲ್ಲಿ ತಿಳಿಸಿದೆ. ಆದರೆ ಈ ನಡುವಣ ಒಂದೆರಡು ವರ್ಷ ಬಿಎಡ್‌ ಇಲ್ಲದೆ ನೇಮಕಗೊಂಡವರು ಈಗ ಅಡಕತ್ತರಿಯಲ್ಲಿ ಸಿಲುಕಿದ್ದಾರೆ.

ಇಲಾಖೆಯ ವಾದವೇನು?: ಸರಕಾರಿ/ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2008ರ ಅನಂತರ ಆಯ್ಕೆಯಾಗಿರುವ ಉಪನ್ಯಾಸಕರಿಗೆ ನ್ಯಾಶನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಶನ್‌ ನಿಯಮದನ್ವಯ ಬಿಎಡ್‌ ಕಡ್ಡಾಯ. ಇದರಂತೆ ಕೆಲವು ವರ್ಷ ಕಾಲಾವಕಾಶ ನೀಡಲಾಗಿದ್ದು, ಬಿಎಡ್‌ ಪದವಿ ಪೂರ್ಣಗೊಳಿಸಲು ಹೇಳಲಾಗಿತ್ತು ಎಂಬುದು ಇಲಾಖೆಯ ವಾದ.
ಉಪನ್ಯಾಸಕರ ವಾದವೇನು?: ಪ್ರಸ್ತುತ ಖರುವ ಅನುದಾನಿತ ಉಪನ್ಯಾಸಕರಲ್ಲಿ 1,200ರಷ್ಟು ಮಂದಿ ಬಿಎಡ್‌ ಪದವಿ ಹೊಂದಿಲ್ಲ. ಬಿಎಡ್‌ಗೆ 2 ವರ್ಷ ಬೇಕಾಗಿದ್ದು, ಖಾಸಗಿ ಅನುದಾನಿತ ಕಾಲೇಜುಗಳು ಉಪನ್ಯಾಸಕರು ಕರ್ತವ್ಯಕ್ಕೆ ರಜೆ ಹಾಕಿ ಬಿಎಡ್‌ ತರಗತಿಗೆ ಹಾಜರಾಗಲು ಸಾಧ್ಯವಿಲ್ಲ. ಅಲ್ಲದೆ ಇವರಿಗೆ ವೇತನ ಸಹಿತ ರಜೆ ಮಂಜೂರು ಮಾಡಲು ಆಡಳಿತ ಮಂಡಳಿಗಳಿಗೆ ಅವಕಾಶ ಇಲ್ಲ. ಸುಮಾರು 40-50ರ ಆಸುಪಾಸಿನ ವಯಸ್ಸಿನಲ್ಲಿರುವ ಈ ಉಪನ್ಯಾಸಕರು ಈಗ ಬಿಎಡ್‌ ಮಾಡುವುದು ಕೂಡ ತುಸು ಕಷ್ಟ.

ಉಪನ್ಯಾಸಕರೊಬ್ಬರು ಮಾತನಾಡಿ, “ಪ್ರಸ್ತುತ ಪಿಯು ಕಾಲೇಜಿನಲ್ಲಿ ಶೇ. 80ರಷ್ಟು ಉಪನ್ಯಾಸಕರು 2008ರ ಮೊದಲು ಸೇರಿರುವ, ಬಿಎಡ್‌ ಆಗದವರೇ ಆಗಿದ್ದಾರೆ. ಬಿಎಡ್‌ ಆಗದೆ ಇದ್ದರೂ ಗುಣಮಟ್ಟದ ಶಿಕ್ಷಣಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಹೀಗಾಗಿ ಬಿಎಡ್‌ ಕಡ್ಡಾಯಕ್ಕೆ ಸರಕಾರ ಜೋತುಬಿದ್ದಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ.


Spread the love

About Laxminews 24x7

Check Also

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

Spread the loveಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ