Breaking News

ವಿಶ್ವಕಪ್‌ನಲ್ಲಿಂದು 2ನೇ ಸೆಮಿ ಫೈನಲ್‌

Spread the love

ಕೋಲ್ಕತ್ತಾ(ಪಶ್ಚಿಮ ಬಂಗಾಳ): ಕ್ರಿಕೆಟ್​ ಕಾಶಿ ಖ್ಯಾತಿಯ ಕೋಲ್ಕತ್ತಾದ ಈಡನ್​ ಗಾರ್ಡನ್ಸ್ ಸ್ಟೇಡಿಯಂನಲ್ಲಿ ಇಂದು ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಎರಡನೇ ವಿಶ್ವಕಪ್‌ ಕ್ರಿಕೆಟ್‌ ಸೆಮಿಫೈನಲ್​ ಪಂದ್ಯ ನಡೆಯಲಿದೆ. ಇದುವರೆಗೆ ಒಟ್ಟು 12 ವಿಶ್ವಕಪ್​ ಕ್ರಿಕೆಟ್ ಆವೃತ್ತಿಗಳು ನಡೆದಿವೆ. ಆಸೀಸ್​ ಐದು ಬಾರಿ ಪ್ರತಿಷ್ಟಿತ ಪ್ರಶಸ್ತಿ ಗೆದ್ದುಕೊಂಡಿದೆ. ಈ ಪೈಕಿ ನಾಲ್ಕು ಪ್ರಶಸ್ತಿಗಳು ಕಳೆದ ಆರು ಆವೃತ್ತಿಗಳಲ್ಲಿ ಬಂದಿವೆ. ಇನ್ನೊಂದೆಡೆ, ದಕ್ಷಿಣ ಆಫ್ರಿಕಾ ನಾಲ್ಕು ಬಾರಿ ಸೆಮೀಸ್​ಗೆ ಬಂದರೂ ಸೋಲಿನ ಕಹಿ ಕಂಡು ‘ಚೋಕರ್ಸ್’ ಎಂಬ ಹಣೆಪಟ್ಟಿ ಕಟ್ಟಿಕೊಂಡಿದೆ.

ಇದೀಗ ಹರಿಣ ಪಡೆ ಕಪ್​ ಜಯಿಸುವ ಸನಿಹ ಬಂದಿದ್ದು, ಬಲಿಷ್ಠ ಕಾಂಗರೂ ತಂಡವನ್ನು ಸೋಲಿಸುವ ಸವಾಲು ಎದುರಿಸುತ್ತಿದೆ. ಈ ಹಿಂದೆ ಆಡಿರುವ ನಾಲ್ಕು ಸೆಮೀಸ್​ಗಳ ಪೈಕಿ ಮೂರರಲ್ಲಿ ಇದೇ ಆಸೀಸ್​ ಎದುರು ದ.ಆಫ್ರಿಕಾ ಮುಗ್ಗರಿಸಿದೆ. ಆದರೆ, ಈ ಸಲದ ವಿಶ್ವಕಪ್​ನಲ್ಲಿ ಟೆಂಬಾ ಬವುಮಾ ನಾಯಕತ್ವದ ಹರಿಣ ಪಡೆ ಎಲ್ಲಾ ವಿಭಾಗಗಳಲ್ಲಿಯೂ ಹೊಸ ಆಯಾಮದಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಶತಾಯಗತಾಯ ಆಸೀಸ್​ ಮಣಿಸಿ ಚೋಕರ್ಸ್ ಟ್ಯಾಗ್‌ ನಿಂದ ಹೊರಬರಲು ದಕ್ಷಿಣ ಆಫ್ರಿಕಾ ತವಕಿಸುತ್ತಿದೆ.

 

  •  

 

ದಕ್ಷಿಣ ಆಫ್ರಿಕಾದ ಸೆಮೀಸ್​ ಹಾದಿ..: 1992ರ ಮಾರ್ಚ್​ 22ರಂದು ಸಿಡ್ನಿಯಲ್ಲಿ ನಡೆದ ಚೊಚ್ಚಲ ವಿಶ್ವಕಪ್​ ಸೆಮಿಫೈನಲ್​ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್​ ಮುಖಾಮುಖಿಯಾಗಿದ್ದವು. ಆದರೆ ಅಂದು ಬಿಟ್ಟೂಬಿಡದೆ ಸುರಿದ ಮಳೆಯಿಂದ ಡಕ್‌ವರ್ತ್ ಲೂಯಿಸ್ ನಿಯಮದ ಮೂಲಕ ತಪ್ಪು ಲೆಕ್ಕಾಚಾರದಿಂದಾಗಿ ದ.ಆಫ್ರಿಕಾ ಸೋಲುಂಡಿತ್ತು.


Spread the love

About Laxminews 24x7

Check Also

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಮೊದಲ ಬಾರಿಗೆ ಫ್ಯಾಷನ್‌ ಶೋ”

Spread the love    ಬೆಂಗಳೂರು: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸೀಸನ್ಸ್‌ ಆಫ್‌ ಸ್ಮೈಲ್‌ನ ಭಾಗವಾಗಿ ಇದೇ ಮೊದಲ ಬಾರಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ