Breaking News

ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ. INDIA

Spread the love

ಮುಂಬೈ (ಮಹಾರಾಷ್ಟ್ರ): 2019ರ ವಿಶ್ವಕಪ್​ ಸೆಮೀಸ್​ ಸೇಡನ್ನು ರೋಹಿತ್​ ಪಡೆ ತೀರಿಸಿಕೊಂಡಿದ್ದು, 70 ರನ್​ನಿಂದ ನ್ಯೂಜಿಲೆಂಡ್​ ತಂಡವನ್ನು ಮಣಿಸಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದೆ.

ಅಲ್ಲದೇ ಟೀಮ್​ ಇಂಡಿಯಾ 2023ರ ವಿಶ್ವಕಪ್​ನಲ್ಲಿ 10ನೇ ಜಯ ದಾಖಲಿಸಿದೆ. ಚಾಂಪಿಯನ್​ ಪಟ್ಟವನ್ನು ಅಲಂಕರಿಸಲು, ಇನ್ನು ಒಂದು ಹೆಜ್ಜೆ ಮಾತ್ರ ಹಿಂದಿದೆ.

 

 

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ತಂಡಕ್ಕೆ ನೆರವಾಗಿದ್ದು ಮೊಹಮ್ಮದ್​ ಶಮಿ. ಸೋಲಿನ ಆತಂಕದಲ್ಲಿದ್ದ ಭಾರತಕ್ಕೆ ಶಮಿ 7 ವಿಕೆಟ್​ ಪಡೆದು ಜಯಕ್ಕೆ ಪ್ರಮುಖ ಕಾರಣರಾದರು. ಕಿವೀಸ್​ನ ಮೊದಲ ಐದು ಪ್ರಮುಖ ವಿಕೆಟ್​ಗಳಾದ ಡೆವೊನ್ ಕಾನ್ವೆ, ರಚಿನ್ ರವೀಂದ್ರ, ಕೇನ್ ವಿಲಿಯಮ್ಸನ್, ಡೇರಿಲ್ ಮಿಚೆಲ್, ಟಾಮ್ ಲ್ಯಾಥಮ್ ಅವರನ್ನು ಪೆವಿಲಿಯನ್​ಗೆ ಕಳಿಸಿದರು. ಇದೇ ವಿಶ್ವಕಪ್​ನಲ್ಲಿ ಶಮಿ 3ನೇ ಬಾರಿಗೆ 5 ವಿಕೆಟ್​ ಪಡೆದ ಸಾಧನೆ ಮಾಡಿದರು.

 

 

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡ ವಿರಾಟ್​​ ಕೊಹ್ಲಿ (117), ಶ್ರೇಯಸ್​ ಅಯ್ಯರ್​ (105) ಅವರ ಶತಕ ಮತ್ತು ಶುಭಮನ್​ ಗಿಲ್​ (80) ಅವರ ಅರ್ಧಶತಕದ ನೆರವಿನಿಂದ ತಂಡ 4 ವಿಕೆಟ್​ ಕಳೆದುಕೊಂಡು 397 ರನ್​ ಗಳಿಸಿತ್ತು. ಈ ಗುರಿಯನ್ನು ಬೆನ್ನತ್ತಿದ ಕಿವೀಸ್​ ಆರಂಭಿಕ ಆಘಾತಕ್ಕೆ ಒಳಗಾದರು. ಡೆವೊನ್ ಕಾನ್ವೆ (13) ಮತ್ತು ರಚಿನ್ ರವೀಂದ್ರ (13) ರನ್​ ಗಳಿಸಲಾಗದೇ ವಿಕೆಟ್​ ಕೊಟ್ಟರು.

 

 

ಕಿವೀಸ್​ ಪಡೆ ಮೂರನೇ ವಿಕೆಟ್​ಗೆ ಉತ್ತಮ ಕಮ್​ಬ್ಯಾಕ್​ ಮಾಡಿತು. ಡೇರಿಲ್ ಮಿಚೆಲ್ (134) ಮತ್ತು ನಾಯಕ ಕೇನ್ ವಿಲಿಯಮ್ಸನ್ (69) ವಿಕೆಟ್​ ನಿಲ್ಲಿಸಿ ತಂಡಕ್ಕೆ ಆಸರೆ ಆದರು. ಇದರಿಂದ ಕಿವೀಸ್​ ಪಡೆಯಲ್ಲಿ ಗೆಲುವಿನ ಆಸೆ ಚಿಗುರಿತು. ಮಧ್ಯಮ ಕ್ರಮಾಂಕದಲ್ಲಿ ಸ್ಪಿನ್ನರ್​ಗಳು ರನ್​ಗೆ ಕಡಿವಾಣ ಹಾಕಿದರೇ ಹೊರತು ವಿಕೆಟ್​ ತೆಗೆಯುವಲ್ಲಿ ಯಶಸ್ವಿ ಆಗಲಿಲ್ಲ. ಇದು ಭಾರತದ ಹಿನ್ನಡೆಗೆ ಕಾರಣವಾಯಿತು.


Spread the love

About Laxminews 24x7

Check Also

ಕಲಾ ಪ್ರತಿಭೋತ್ಸವಕ್ಕೆ ಚಾಲನೆ

Spread the love ಕಲಾ ಪ್ರತಿಭೋತ್ಸವಕ್ಕೆ ಚಾಲನೆ ಬೆಳಗಾವಿ. ಜಿಲ್ಲೆಯ ಬಾಲ ಪ್ರತಿಭೆ ಹಾಗೂ ಯುವ ಪ್ರತಿಭೆಗಳಿಗೆ ಜಾನಪದ ಗೀತೆ, …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ