ಬೆಂಗಳೂರು: ಅಕ್ರಮವಾಗಿ ನಡೆಯುತ್ತಿದ್ದ ಇಸ್ಟೀಟ್ ಅಡ್ಡೆ ಮೇಲೆ ಏಕಾಏಕಿ ದಾಳಿ ನಡೆಸಿದ ನಗರ ಪಶ್ಚಿಮ ವಿಭಾಗದ ಪೊಲೀಸರು 150ಕ್ಕೂ ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬಸವೇಶ್ವರ ನಗರದಲ್ಲಿರುವ ಅಡಿಗ ರಮ್ಮಿ ಕ್ಲಬ್ನಲ್ಲಿ ಅಕ್ರಮ ಚಟುವಟಿಕೆ ಕುರಿತು ಖಚಿತ ಮಾಹಿತಿ ಮೇರೆಗೆ ಬಸವೇಶ್ವರ ನಗರ ಹಾಗೂ ಗೋವಿಂದರಾಜ ನಗರ ಪೊಲೀಸರು ದಾಳಿ ನಡೆಸಿದ್ದಾರೆ. ಕ್ಲಬ್ನಲ್ಲಿ 150ಕ್ಕೂ ಹೆಚ್ಚು ಮಂದಿ ಇಸ್ಟೀಟ್ ದಂಧೆಯಲ್ಲಿ ತೊಡಗಿಸಿಕೊಂಡಿದ್ದರು. ಎಲ್ಲರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ. ದಾಳಿ ಲಕ್ಷಾಂತರ ರೂಪಾಯಿ ಹಣ ವಶಕ್ಕೆ ಪಡೆದುಕೊಳ್ಳಲಾಗಿದೆ. ಅಶೋಕ್ ಅಡಿಗ ಎಂಬುವರಿಗೆ ಸೇರಿದ ಕ್ಲಬ್ ಇದಾಗಿದೆ.
Laxmi News 24×7