ಕೋಲ್ಕತ್ತಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾ ವಿರುದ್ಧ 243 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.
ಕೋಲ್ಕತ್ತಾ (ಪಶ್ಚಿಮ ಬಂಗಾಳ): ವಿಶ್ವಕಪ್ನಲ್ಲಿ ಭಾರತದ ಬೌಲಿಂಗ್ ಮಿಂಚುತ್ತಿದ್ದು, ಶ್ರೀಲಂಕಾ ನಂತರ ದಕ್ಷಿಣ ಆಫ್ರಿಕಾವನ್ನು 100ರ ಒಳಗೆ ಭಾರತ ಕಟ್ಟಿಹಾಕಿ ಬೃಹತ್ ಜಯ ದಾಖಲಿಸಿದೆ.
327 ರನ್ಗಳ ಗುರಿಯನ್ನು ಬೆನ್ನತ್ತಿದ್ದ ದಕ್ಷಿಣ ಆಫ್ರಿಕಾ 27.1 ಓವರ್ಗೆ 83 ರನ್ ಗಳಿಸಿ ಆಲ್ಔಟ್ ಆಯಿತು. ಇದರಿಂದ ಭಾರತ 243 ರನ್ಗಳ ಬೃಹತ್ ಜಯ ದಾಖಲಿಸಿದೆ.