Breaking News

ಶಿವಮೊಗ್ಗ ರೈಲು ನಿಲ್ದಾಣದ ಬಳಿ 2 ಅನುಮಾನಾಸ್ಪದ ಬಾಕ್ಸ್​ ಪತ್ತೆ

Spread the love

ಶಿವಮೊಗ್ಗ : ನಗರದ ಮುಖ್ಯ ರೈಲು‌ ನಿಲ್ದಾಣದ ಪಾರ್ಕಿಂಗ್ ಸ್ಥಳದ ಬಳಿ ಎರಡು ಅನುಮಾನಾಸ್ಪದ ಬಾಕ್ಸ್​ಗಳು ಪತ್ತೆಯಾಗಿದ್ದು, ಸಾರ್ವಜನಿಕರಲ್ಲಿ ಆಂತಕ ಉಂಟು ಮಾಡಿದೆ. ಪತ್ತೆಯಾದ ಎರಡು ಬಾಕ್ಸ್​ಗಳು ನಿನ್ನೆಯಿಂದಲೂ ಅದೇ ಜಾಗದಲ್ಲಿದ್ದು, ಇಂದು ಆಟೋ ಚಾಲಕರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

 ಬಾಕ್ಸ್ ಸುತ್ತಲೂ ಮರಳಿನ ಚೀಲ ಹಾಕಿದ ಪೊಲೀಸರು

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಜಯನಗರ ಠಾಣೆ ಪೊಲೀಸರು ಬಾಕ್ಸ್ ಪರಿಶೀಲನೆಗೆ ಶ್ವಾನದಳ ಹಾಗೂ ಬಾಂಬ್ ಸ್ಕ್ವಾಡ್ ಅನ್ನು ಕರೆಯಿಸಿ ಪರಿಶೀಲನೆ ನಡೆಸಿದ್ದಾರೆ. ಇದುವರೆಗೂ ಬಾಕ್ಸ್​ನಲ್ಲಿ ಏನಿದೆ ಎಂದು ತಿಳಿಯದೇ ಇರುವುದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಬಾಕ್ಸ್ ಮೇಲೆ ಫುಡ್ ಗ್ರೈನ್ಸ್ ಅಂಡ್ ಶುಗರ್ಸ್ ಎಂದು ಬರೆಯಲಾಗಿದೆ. ಈ ಬಾಕ್ಸ್ ಅನ್ನು ಯಾರು ಇಲ್ಲಿಗೆ ತಂದು, ಯಾವಾಗ ಹಾಕಿದ್ರು ಅಂತ ಇನ್ನೂ ಮಾಹಿತಿ ಲಭ್ಯವಾಗಿಲ್ಲ.

 ಸ್ಥಳಕ್ಕೆ ಶಾಸಕ ಚನ್ನಬಸಪ್ಪ ಭೇಟಿ

ಸದ್ಯ ಪೊಲೀಸರು ಬಾಕ್ಸ್​ಗಳು ದೊರೆತಿರುವ ಸುಮಾರು 200 ಮೀಟರ್​​ನಷ್ಟು ದೂರದವರೆಗೆ ಎರಡೂ ಭಾಗದಲ್ಲಿ ಬ್ಯಾರಿಕೇಡ್​ ಹಾಕಿ ಸಾರ್ವಜನಿಕರ ಸಂಚಾರ ಬಂದ್ ಮಾಡಿದ್ದಾರೆ. ಸಂಚಾರಿ ಪೊಲೀಸರು ವಾಹನ ಸಂಚಾರಕ್ಕೆ ಬೇರೆ ಮಾರ್ಗದಲ್ಲಿ ಅನುಕೂಲ ಮಾಡಿಕೊಟ್ಟಿದ್ದಾರೆ. ಬಾಕ್ಸ್ ಬಗ್ಗೆ ಅನುಮಾನ‌ ಹೆಚ್ಚಾಗಿರುವ ಕಾರಣ ಅದರಲ್ಲಿರುವ ವಸ್ತು ಏನೆಂಬುದನ್ನು ಪತ್ತೆ ಹಚ್ಚಲು ಬೆಂಗಳೂರಿನಿಂದ ವಿಶೇಷ ತಂಡ ಕರೆಯಿಸಲಾಗುತ್ತಿದೆ. ಬೆಂಗಳೂರಿನಿಂದ ತಂಡ ಸಂಜೆ ವೇಳೆಗೆ ಶಿವಮೊಗ್ಗ ತಲುಪುವ ಸಾಧ್ಯತೆ ಇದೆ.


Spread the love

About Laxminews 24x7

Check Also

ಕೌಜಲಗಿ (ತಾ:ಗೋಕಾಕ): ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ

Spread the love ಕೌಜಲಗಿ (ತಾ:ಗೋಕಾಕ): ಕೌಜಲಗಿ ಪಟ್ಟಣವನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಬೇಕು- ಸರ್ಕಾರಕ್ಕೆ ಕನ್ನಡ ಕೌಸ್ತುಭ ಆಗ್ರಹ ಕೌಜಲಗಿ(ತಾ:ಗೋಕಾಕ):ರಾಜ್ಯದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ